Film News

ಶುಗರ್ ಫ್ಯಾಕ್ಟರಿ ಚಿತ್ರದ ನಟಿಯಾಗಿ ಅದ್ವಿತಿ ಶೆಟ್ಟಿ!

ಬೆಂಗಳೂರು: ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ನಟಿಯಾಗಿ ಹೊರಹೊಮ್ಮುತ್ತಿರುವ ನಟಿ ಅದ್ವಿತಿ ಶೆಟ್ಟಿ ಐರಾವನ್ ಚಿತ್ರದ ನಂತರ ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ.

ಇನ್ನೂ ಈ ಚಿತ್ರ ಜನವರಿಯಲ್ಲಿ ಪ್ರಾರಂಭವಾಗಲಿದ್ದು ಲವ್ ಮಾಕಟೇಲ್ ಚಿತ್ರದ ಕೃಷ್ಣ ಜೊತೆ ಜೋಡಿಯಾಗಲಿದ್ದಾರೆ. ಈ ಚಿತ್ರದಲ್ಲಿ ಅದ್ವಿತಿ ಮಾತಿನ ಮಲ್ಲಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಕ್ಕಾ ಗ್ಲಾಮರಸ್ ರೋಲ್ ಇದಾಗಿದೆ. ಜೊತೆಗೆ ಈ ಪಾತ್ರದ ಕುರಿತು ಸಕತ್ ಖುಷಿ ಹಂಚಿಕೊಂಡಿರುವ ಅದ್ವಿತಿ ಕೃಷ್ಣ ಜೊತೆ ನಟಿಸುವ ಅವಕಾಶ ಸಂತಸ ತಂದಿದೆ ಎಂದಿದ್ದಾರೆ. ಇದೇ ಮೊದಲ ಬಾರಿ ಈ ರೀತಿಯ ಪಾತ್ರದಲ್ಲಿ ರೊಮ್ಯಾನ್ಸ್, ಚಾಲೆಂಜಿಂಗ್ ಪಾತ್ರದಿಂದ ಕೂಡಿದ್ದು ಸಕತ್ ಕಾಮಿಡಿಯಿಂದ ಕೂಡಿದೆ.

ಈ ಚಿತ್ರವನ್ನು ಬಾಲಮಣಿ ಪ್ರೊಡಕ್ಷನ್ ಲಾಂಚನದಲ್ಲಿ ಆರ್.ಗಿರೀಶ್ ಚಿತ್ರವನ್ನು ನಿರ್ಮಿಸುತ್ತಿದ್ದು, ಕಬೀರ್ ರಫಿ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸಂತೋಷ್ ರೈ ಪಾತಾಜಿ ಅವರ ಛಾಯಾಗ್ರಹಣ ಹಾಗೂ ಭರ್ಜರಿ, ಜೇಮ್ಸ್, ಬಹದ್ದೂರ್ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಶುಗರ್ ಫ್ಯಾಕ್ಟರಿಗೆ ಸಂಭಾಷಣೆ ಬರೆಯುತ್ತಿದ್ದಾರೆ ಎನ್ನಲಾಗಿದೆ.

Trending

To Top