Film News

ಆದಿಪುರುಷ್ ಚಿತ್ರೀಕರಣಕ್ಕೆ ರಜೆ ಹಾಕಿದ ರಾವಣ ಪಾತ್ರಧಾರಿ

ಮುಂಬೈ: ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನೆಮಾ ಬಾಹುಬಲಿ ಪ್ರಭಾಸ್ ಅಭಿನಯಿಸುತ್ತಿರುವ ಆದಿಪುರುಷ್ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಶೂಟಿಂಗ್ ಗೆ ರಜೆ ಹಾಕಿದ್ದಾರೆ ಎನ್ನಲಾಗಿದೆ. ಸೈಫ್ ಅಲಿ ಖಾನ್ ಪತ್ನಿಯಾದ ಕರೀನಾ ಕಪೂರ್ ಎರಡನೇ ಮಗುವಿನ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ ಸೈಫ್ ರಜೆ ಹಾಕಿದ್ದಾರಂತೆ.

ಇನ್ನೂ ಈ ಕುರಿತು ಖಾಸಗಿ ಮಾದ್ಯಮವೊಂದಕ್ಕೆ ಹೇಳಿಕೆ ನೀಡಿದ ಚಿತ್ರದ ನಿರ್ದೇಶಕ ಓಂ ರಾವತ್ ಆದಿಪುರುಷ್ ಚಿತ್ರದ ನಾಯಕ ಪ್ರಭಾಸ್ ಹಾಗೂ ಖಳನಾಯಕ ಸೈಫ್ ಅಲಿ ಖಾನ್ ಇವರಿಬ್ಬರೂ ಈಗಾಗಲೇ ಚಿತ್ರದ ಶೂಟಿಂಗ್ ಗಾಗಿ ತಯಾರಿ ನಡೆಸುತ್ತಿದ್ದಾರೆ. ಸೈಫ್ ರವರ ಪತ್ನಿ ಕರೀನಾ ಕಪೂರ್ ಎರಡನೇ ಮಗುವಿನ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಿತೃತ್ವ ರಜೆ ಪಡೆಯುತ್ತಿದ್ದಾರೆ. ಇನ್ನೂ ರಜೆ ಬಳಿಕ ಮಾರ್ಚ್ ಮಾಹೆಯಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದು, ಆಗಸ್ಟ್ ಅಂತ್ಯದ ವರೆಗೂ ಚಿತ್ರೀಕರಣ ಮಾಡಲು ಯೋಜನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇತ್ತೀಚಿಗೆ ಸೈಫ್ ಅಲಿಖಾನ್ ರಾಮಾಯಣದ ಪಾತ್ರಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಭಾರಿ ಮಟ್ಟದಲ್ಲಿ ವಿವಾದಕ್ಕೆ ಗುರಿಯಾಗಿದ್ದರು. ಇದೇ ಕಾರಣಕ್ಕೆ ಸೈಫ್ ರವರನ್ನು ಚಿತ್ರದಿಂದ ಕೈ ಬಿಡುವಂತೆ ನೆಟ್ಟಿಗರಿಂದ ತೀವ್ರ ವಿರೋಧ ಸಹ ವ್ಯಕ್ತವಾಗಿತ್ತು. ಸೈಫ್ ಬದಲಿಗೆ ಬೇರೆ ನಟನನ್ನು ಆಯ್ಕೆ ಮಾಡುವಂತೆ ಸಿನೆಮಾ ತಂಡಕ್ಕೆ ಒತ್ತಾಯ ಸಹ ಹೇರಿದ್ದರು. ನಂತರ ಸೈಫ್ ಕ್ಷಮೆ ಯಾಚಿಸಿದ ಬಳಿಕ ಈ ವಿವಾದ ಮೆತ್ತಗಾಯಿತು.

ಇನ್ನೂ ಟಾಲಿವುಡ್ ಸ್ಟಾರ್ ಪ್ರಭಾಸ್ ರವರು ಪ್ರಸ್ತುತ ರಾಧೆ ಶ್ಯಾಮ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಇದರ ನಂತರ ಆದಿಪುರಷ್ ಸಿನೆಮಾದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಜನವರಿ ಮಾಹೆಯ ಕೊನೆಯ ವಾರದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ.

Trending

To Top