Film News

ನಟಿ ವಿಜಯಲಕ್ಷ್ಮಿ ಅವರಿಗೆ ಸ್ಯಾಂಡಲ್ ವುಡ್ ನಟರು ಸಹಾಯ ಏನು ನೋಡಿ

ಒಂದು ಕಾಲದಲ್ಲಿ ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಚ್ಚಿದಂತಹ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ಇಂದು ಯಾರಿಗೂ ಬೇಡವಾಗಿದೆ.ಕನ್ನಡದಲ್ಲಿ ಟಾಪ್ ನಟಿಯಾಗಿದ್ದಾಗಲೇ ಕನ್ನಡ ಬಿಟ್ಟು ತಮಿಳಿನಲ್ಲಿ ಕೂಡ ಆರಂಭದಲ್ಲಿ ಮಿಂಚಿದರು.

ನಂತರ ತಮಿಳು ಧಾರಾವಾಹಿಗಳಲ್ಲಿ ಸಹ ಸೈ ಎನಿಸಿಕೊಂಡರು.ಇಂದು ಯಾರಿಗೂ ಬೇಡವಾದಂತಹ ಪರಿಸ್ಥಿತಿಯಲ್ಲಿ ವಿಜಯಲಕ್ಷ್ಮಿ ಇದ್ದು ತನಗೆ ಸಹಾಯ ಮಾಡುವಂತೆ ಕೈ ಮುಗಿದು ಕನ್ನಡಿಗರನ್ನು ಬೇಡಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಮತ್ತು ಅವರ ಸಹೋದರಿ ಉಷಾ ದೇವಿ ಇಬ್ಬರು ಸಹ ಕನ್ನಡದಲ್ಲಿ ಮಿಂಚಿದರು ಅನಂತರ ತಮಿಳಿಗೆ ಹೋಗಿ ತಮಿಳಿನಲ್ಲಿಯೂ ಸಹ ಮಿಂಚಿದ್ದರು ಆದರೆ ಇದೀಗ ಯಾರಿಗೂ ಬೇಡವಾದ ಪರಿಸ್ತಿತಿಗೆ ತಲುಪಿದ್ದಾರೆ.ವಿಜಯ ಲಕ್ಷ್ಮಿ ಅವರು ಆತ್ಮಹತ್ಯೆಗೆ ಪ್ರಯತ್ನ ಪಟ್ಟು ಚಿಕಿತ್ಸೆಗೆ ದುಡ್ಡು ಇಲ್ಲದೆ ಇದ್ದಾಗ ಕಿಚ್ಚ ಸುದೀಪ್ ಅವರು ನೆರವಿಗೆ ಬಂದಿದ್ದರು.

ಇದೀಗ ವಿಜಯಲಕ್ಷ್ಮಿ ಅವರ ಸಹೋದರಿ ಉಷಾ ದೇವಿ ಆಸ್ಪತ್ರೆ ಸೇರಿದ್ದು ಅವರಿಗೆ ಚಿಕಿತ್ಸೆಗೆ ಹಣವಿಲ್ಲದೆ ಮತ್ತೆ ವಿಡಿಯೋ ಮಾಡಿರುವ ವಿಜಯಲಕ್ಷ್ಮಿ ಕನ್ನಡದ ನಟರು ನಮ್ಮ ನೆರವಿಗೆ ನಿಲ್ಲಬೇಕು ಎಂದು ಬೇಡಿಕೊಂಡಿದ್ದಾರೆ.ವಿಜಯಲಕ್ಷ್ಮಿ ಅವರು ತಮ್ಮ ಜೊತೆ ನಟಿಸಿರುವ ಶಿವರಾಜ್ ಕುಮಾರ್ ಅವರು ತಮ್ಮ ಸಹಾಯಕ್ಕೆ ಬರಬೇಕು ಎಂದು ಕೇಳಿಕೊಂಡರು.

ಇದೀಗ ಶಿವರಾಜ್ ಕುಮಾರ್ ಅವರ ಜೊತೆಗೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಬಂದಿದ್ದಾರೆ, ಹಾಗೂ ಅವರ ಕೈಲಾದಷ್ಟು ಧನ ಸಹಾಯ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

Trending

To Top