ಬೆಂಗಳೂರು: ಮಾಣಿಕ್ಯ ಚಿತ್ರದ ನಾಯಕಿ ವರಲಕ್ಷ್ಮೀ ಶರತ್ ಕುಮಾರ್ ರವರಿಗೆ ಸೈಬರ್ ಖದೀಮರು ಕಾಟ ಕೊಡುತ್ತಿರುವ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಎಚ್ಚರಿಕೆಯಿಂದರಲೂ ಸಹ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುವ ನಟಿ ವರಲಕ್ಷ್ಮೀ, ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳು ಹ್ಯಾಕ್ ಆಗಿರುವ ಕುರಿತಂತೆ ಪ್ರಕಟಣೆ ಹೊರಡಿಸಿದ್ದಾರೆ. ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಐಡಿಗಳು ಕಳೆದ ರಾತ್ರಿಯಿಂದ ಹ್ಯಾಕ್ ಆಗಿದ್ದು, ಅವುಗಳನ್ನು ನನ್ನ ಕೈಯಲ್ಲಿ ನಿಯಂತ್ರಿಸಲಾಗುತ್ತಿಲ್ಲ. ನನ್ನ ಖಾತೆಗಳನ್ನು ಮರಳಿ ಪಡೆಯಲು ತಂತ್ರಜ್ಞರ ಸಂಪರ್ಕದಲ್ಲಿದ್ದೇನೆ. ಸ್ವಲ್ಪ ದಿನಗಳ ಕಾಲ ನನ್ನ ಅಭಿಮಾನಿಗಳು ನನ್ನ ಖಾತೆಯಿಂದ ಯಾವುದಾದರೂ ಸಂದೇಶಗಳು ಬಂದರೇ ಅವುಗಳನ್ನು ಪರಿಗಣಿಸಬೇಡಿ. ನನ್ನ ಖಾತೆಗಳು ಸಕ್ರಿಯವಾದ ಬಳಿಕ ನಿಮಗೆ ತಿಳಿಸುತ್ತೇನೆ. ಅಲ್ಲಿಯವರೆಗೂ ತಾವು ಎಚ್ಚರಿಕೆಯಿಂದರಬೇಕು ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಅನೇಕ ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳ ಸೋಷಿಯಲ್ ಮಿಡಿಯಾ ಖಾತೆಗಳು ಸಹ ಹ್ಯಾಕ್ ಆಗಿದ್ದವು. ಇದೇ ಹಾದಿಯಲ್ಲಿ ದೀಕ್ಷಿತ್ ಶೆಟ್ಟಿ, ಆಶಿಕಾ ರಂಗನಾಥ್,, ಚಂದನ್ ಶೆಟ್ಟಿ, ಮಾನ್ವಿತಾ ಕಾಮತ್ ಹೀಗೆ ಅನೇಕ ನಟರ ಹಾಗೂ ಕಿರುತೆರೆ ಕಲಾವಿದರ ಸೊಷಿಯಲ್ ಮಿಡೀಯಾ ಖಾತೆಗಳು ಹ್ಯಾಕ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
