ಅರೆಬೆತ್ತಲಾಗಿ ದೀಪಾವಳಿಯಂದು ಲಡ್ಡು ತಿನ್ನುತ್ತಾ ಶುಭಾಷಯ ಜೋರಿದ ಉರ್ಫಿ, ರೋಸಿಹೋದ ನೆಟ್ಟಿಗರು…!

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಇದೀಗ ದೀಪವಾಳಿ ಹಬ್ಬದ ಶುಭಾಷಯಗಳನ್ನು ವಿಶೇಷವಾಗಿ ತಿಳಿಸಿದ್ದಾರೆ. ಅರೆ ಬೆತ್ತಲೆಯಾಗಿ ಲಡ್ಡು ತಿನ್ನುತ್ತಾ ಶುಭಾಷಯ ಕೋರಿದ್ದಾರೆ. ಇನ್ನೂ ಆಕೆಯ ಈ ಹೊಸ ಅವತಾರ ಕಂಡು ರೋಸಿ ಹೋದ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ದೀಪವಾಳಿ ಹಬ್ಬದಂದು ಬಹುತೇಕ ಎಲ್ಲಾ ನಟಿಯರು ಸಂಪ್ರದಾಯಿಕವಾದ ಉಡುಪುಗಳನ್ನು ಧರಿಸಿ ಶುಭಾಷಯ ಕೋರಿದ್ದಾರೆ. ಆದರೆ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿಯಾಗುತ್ತಿರುವ ಉರ್ಫಿ ಜಾವೇದ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಕಣ್ಣು ಕೆಂಪಾಗುವಂತೆ ಮಾಡಿದ್ದಾರೆ. ವಿಚಿತ್ರವಾದ ಡ್ರೆಸ್ ಗಳನ್ನು ಧರಿಸಿ ಕ್ಯಾಮೆರಾ ಮುಂದೆ ಪೋಸ್ ಕೊಡುವಂತಹ ಉರ್ಫಿ ಸದಾ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಆಕೆಯ ವಿರುದ್ದ ಯಾವುದೇ ಟ್ರೋಲ್ ಗಳಿಗೆ ಕಿವಿಗೊಡದೆ ತನ್ನ ಕೆಲಸ ತನ್ನದ್ದು ಎಂಬಂತೆ ಮತಷ್ಟು ವಿಭಿನ್ನ ಹಾಗೂ ವಿಚಿತ್ರವಾದ ಡ್ರೆಸ್ ಗಳನ್ನು ಧರಿಸಿ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಆಕೆ ಧರಿಸಿದ ಬಹುತೇಕ ಎಲ್ಲಾ ಡ್ರೆಸ್ ಗಳಲ್ಲೂ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ತುಂಡು ಉಡುಗೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈಕೆ ಇದೀಗ ದೀಪಾವಳಿ ಹಬ್ಬದಂದು ಅರೆಬೆತ್ತಲೆಯಾಗಿ ಕಾಣಿಸಿಕೊಂಡು ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ.

ವಿವಾದಾತ್ಮಕ ನಟಿ ಎಂದೇ ಕರೆಯಲಾಗುವ ಉರ್ಫಿ ಜಾವೇದ್ ಸೋಷಿಯಲ್ ಮಿಡಿಯಾದಲ್ಲಿ ಟಾಪ್ ಲೆಸ್ ಆಗಿ, ಅರೆ ಬೆತ್ತಲೆಯಾಗಿ ಲಡ್ಡು ತಿನ್ನುತ್ತಾ ಶುಭಾಷಯ ಕೋರಿದ್ದಾರೆ. ಅರೆಬೆತ್ತಲೆಯಾಗಿ ಕಾಣಿಸಿಕೊಂಡ ಉರ್ಫಿ ವಿಡಿಯೋ ಮೂಲಕ ದೀಪಾವಳಿ ಶುಭಾಷಯ ಕೋರಿದ್ದಾರೆ. ಇನ್ನೂ ಉರ್ಫಿಯ ಈ ಹೊಸ ಅವತಾರ ನೋಡಿದ ನೆಟ್ಟಿಗರು ಆಕ್ರೋಷಗೊಂಡು ವಿಮರ್ಶೆ ಮಾಡಿದ್ದಾರೆ. ನಿನ್ನ ಪೇಜ್ ಒಂದು ತರಹ ಮಿನಿ ಅಶ್ಲೀಲ ತಾಣವಾಗಿದೆ. ಹಬ್ಬದ ಸಮಯದಲ್ಲಾದರೂ ಒಳ್ಳೆಯ ಬಟ್ಟೆಗಳನ್ನು ಧರಿಸಲು ನಿಮಗೆ ಏನು ಬಂದಿದೆ ಎಂದು ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಾ ಟ್ರೋಲ್ ಸಹ ಮಾಡುತ್ತಿದ್ದಾರೆ. ಇದೀಗ ಆಕೆಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ಉರ್ಫಿ ಮಾತ್ರ ಯಾವುದೇ ಕಾಮೆಂಟ್ ಗಳು, ವಿಮರ್ಶೆಗಳು ಹರಿದು ಬರುತ್ತಿದ್ದರೂ ಸಹ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ತನ್ನ ವರಸೆಯನ್ನು ಮಾತ್ರ ಬಿಟ್ಟಿಲ್ಲ. ಸದಾ ಹಾಟ್ ಅಂಡ್ ಬೋಲ್ಡ್ ಅವತಾರಗಳಲ್ಲೇ ಆಕೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನೂ ಉರ್ಫಿಯ ಕೈಯಲ್ಲಿ ಯಾವುದೇ ಸಿನೆಮಾ ಆಗಲಿ ಅಥವಾ ಸೀರಿಯಲ್ ಆಗಲಿ ಇಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಮೂಲಕ ಸದಾ ಸುದ್ದಿಯಲ್ಲೇ ಇರುತ್ತಾರೆ.

Previous articleವಿವಾದಗಳನ್ನು ಬದಿಗಿಟ್ಟು ತಮ್ಮ ಮುದ್ದಿನ ಮಕ್ಕಳೊಂದಿಗೆ ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆ…!
Next articleವಿಚ್ಚೇದನ ರೂಮರ್ ಗಳ ನಡುವೆ, ಪತಿಯ ಬಗ್ಗೆ ಪ್ರಿಯಮಣಿ ಪೋಸ್ಟ್: ವೈರಲ್