Film News

ಲಕಲಕಲಕ ಅಂತಾ ಮತ್ತೊಮ್ಮೆ ಭಯಪಡಿಸಲು ಬರಲಿದೆ ಚಂದ್ರಮುಖಿ ಸೀಕ್ವೆಲ್.. ನಟಿ ಫೈನಲ್ ಆಯ್ತಾ?

ಕಳೆದ 2005 ರಲ್ಲಿ ಸೌತ್ ಇಂಡಿಯಾ ಸಿನಿರಂಗದಲ್ಲಿ ದೊಡ್ಡ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಸಿನೆಮಾ ಚಂದ್ರಮುಖಿ. ಈ ಸಿನೆಮಾ ಬಿಡುಗಡೆಯಾದಾಗ ಎಲ್ಲೆಡೆ ಲಕಲಕಲಕ ಎಂಬ ಡೈಲಾಗ್ ಚಾಲ್ತಿಯಲ್ಲಿತ್ತು. ಜೊತೆಗೆ ಈ ಸಿನೆಮಾ ಸಹ ಭರ್ಜರಿಯಾಗಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಸದ್ಯ ಈ ಸಿನೆಮಾದ ಸೀಕ್ವೆಲ್ ಈಗಾಗಲೇ ಘೋಷಣೆ ಆಗಿದೆ. ಇನ್ನೂ ಚಂದ್ರಮುಖಿ-2 ಸಿನೆಮಾದಲ್ಲಿ ಲಾಘವ ಲಾರೆನ್ಸ್ ನಾಯಕನಾಗಿ ನಟಿಸಲಿದ್ದಾರೆ. ಇದೀಗ ಈ ಸಿನೆಮಾದಲ್ಲಿ ನಟಿ ಯಾರು ಎಂಬುದರ ಬಗ್ಗೆ ಜೋರಾದ ಚರ್ಚೆಗಳು ಸಹ ನಡೆದಿದ್ದು, ಒಬ್ಬ ನಟಿಯನ್ನು ಫೈನಲ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಚಂದ್ರಮುಖಿ ಸಿನೆಮಾದಲ್ಲಿ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್, ನಯನತಾರಾ ಹಾಗೂ ಜ್ಯೋತಿಕಾ ಈ ಸಿನೆಮಾದಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದರು. ಇನ್ನೂ ಈ ಸಿನೆಮಾದ ನಿರ್ದೇಶಕ ಪಿ.ವಾಸು ಕಾಮಿಡಿ ಹಾಗೂ ಹಾರರ್‍ ಅನ್ನು ತುಂಬಾನೆ ಅದ್ಬುತವಾಗಿ ಚಿತ್ರೀಕರಿಸಿದ್ದರು. ಇನ್ನೂ ಈಗಾಗಲೇ ಅನೇಕ ಬಾರಿ ಚಂದ್ರಮುಖಿ-2 ಸಿನೆಮಾ ಬರಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇತ್ತೀಚಿಗಷ್ಟೆ ಈ ರೂಮರ್‍ ಗಳನ್ನು ನಿಜ ಮಾಡಿ ಲೈಕಾ ಪ್ರೊಡಕ್ಷನ್ ಸಂಸ್ಥೆ ಚಂದ್ರಮುಖಿ 2 ಸಿನೆಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಆದರೆ ರಜನಿಕಾಂತ್ ಪಾತ್ರದಲ್ಲಿ ರಾಘವ ಲಾರೆನ್ಸ್ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕಮಿಡಿಯನ್ ವಡಿವೇಲು ಸಹ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಚಂದ್ರಮುಖಿ ನಿರ್ದೇಶನ ಮಾಡಿದ್ದಂತಹ ಪಿ.ವಾಸು ರವರೇ ಚಂದ್ರಮುಖಿ 2 ಅನ್ನು ನಿರ್ದೇಶನ ಮಾಡಲಿದ್ದಾರೆ. ಸುಮಾರು ಹದಿನೇಳು ವರ್ಷಗಳ ಬಳಿಕ ಚಂದ್ರಮುಖಿ-2 ಸಿನೆಮಾದ ಬರಲಿದ್ದು, ಸೌತ್ ಸಿನಿರಸಿಕರು ಈ ಸಿನೆಮಾದ ಬಗ್ಗೆ ತುಂಬಾನೆ ಎಗ್ಸೈಟ್ ಆಗಿದ್ದಾರೆ.

ಆದರೆ ಚಂದ್ರಮುಖಿ 2 ಸಿನೆಮಾ ಚಂದ್ರಮುಖಿ ಸಿನೆಮಾದ ಮುಂದುವರೆದ ಭಾಗವಾಗಿರುವುದಿಲ್ಲ ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಹೊಸ ಕಥೆಯನ್ನು ಜನರ ಮುಂದೆ ತರಲಿದ್ದಾರೆ ಎನ್ನಲಾಗಿದೆ. ಇನ್ನೂ ಈಗಾಗಲೇ ಹಾರರ್‍ ಅಂಡ್ ಕಾಮಿಡಿ ಸಿನೆಮಾಗಳಾಧ ಮುನಿ, ಕಾಂಚನ, ಗಂಗ ಮೊದಲಾದ ಸಿನೆಮಾಗಳ ಮೂಲಕ ರಾಘವ ಲಾರೆನ್ಸ್ ಖ್ಯಾತಿ ಪಡೆದುಕೊಂಡಿದ್ದಾರೆ. ಇನ್ನೂ ಚಂದ್ರಮುಖಿ 2 ಸಿನೆಮಾದಲ್ಲಿ ರಾಘವ ಲಾರೆನ್ಸ್ ನಟಿಸುತ್ತಿರುವುದು ರಜನಿಕಾಂತ್ ರವರೂ ಸಹ ಸಂತೋಷ ವ್ಯಕ್ತಪಡಿಸಿದ್ದಾರಂತೆ. ಸದ್ಯ ಸಿನೆಮಾ ಘೋಷಣೆಯಾಗಿದ್ದು, ಸದ್ಯ ಸ್ಟಾರ್‍ ಕಾಸ್ಟ್ ಅನ್ನು ಶುರುಮಾಡಿದೆ ಚಿತ್ರತಂಡ. ಈಗಾಗಲೇ ಕೆಲವೊಂದು ನಟಿಯರನ್ನು ಸಂಪರ್ಕ ಮಾಡಿದ್ದು, ಈ ಸಿನೆಮಾದಲ್ಲಿ ಮುಖ್ಯ ನಟಿಯಾಗಿ ಕ್ರೇಜ್ ಹೊಂದಿದ ನಟಿಯೊಬ್ಬರು ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾರತದ ಹೆಸರಾಂತ ನಟಿ ತ್ರಿಷಾ ಚಂದ್ರಮುಖಿ 2 ಸಿನೆಮಾದಲ್ಲಿ ನಟಿಸಲಿದ್ದಾರಂತೆ. ಈಗಾಗಲೇ ಕೆಲವೊಂದು ಹಾರರ್‍ ಸಿನೆಮಾಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡ ತ್ರಿಷಾ ರವರನ್ನೇ ಈ ಸಿನೆಮಾಗೆ ಫೈನಲ್ ಮಾಡಬೇಕೆಂದು ಚಿತ್ರತಂಡ ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ. ಇನ್ನೂ ತ್ರಿಷಾ ಈಗಾಗಲೇ ತೆಲುಗು, ತಮಿಳು ರಂಗದಲ್ಲಿ ದೊಡ್ಡ ಪ್ರಮಾಣದ ಅಭಿಮಾನಿ ಬಳಗ ಹೊಂದಿದ ಹಿನ್ನೆಲೆಯಲ್ಲಿ ಆಕೆಯನ್ನೇ ಫೈನಲ್ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಇನ್ನೂ ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಿನೆಮಾ ಸೆಟ್ಟೆರಲಿದೆ ಎಂದು ಹೇಳಲಾಗುತ್ತಿದೆ.

Trending

To Top