ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ತ್ರಿಷಾ, ವಿಚ್ಚೇದನ ಪಡೆದುಕೊಳ್ಳುವುದು ನನಗೆ ಇಷ್ಟವಿಲ್ಲ ಎಂದ ಬ್ಯೂಟಿ….!

ಸೌತ್ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ನಟಿ ತ್ರಿಷಾ ಅನೇಕ ಹಿಟ್ ಸಿನೆಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಎಂತಹುದೇ ಪಾತ್ರವಾದರೂ ಆಕೆ ಆ ಪಾತ್ರಕ್ಕೆ ಜೀವ ತುಂಬಿ ನಟಿಸುವ ಮೂಲಕ ಹೈಲೈಟ್ ಆಗುತ್ತಿರುತ್ತಾರೆ. ಒಂದು ಕಾಲದಲ್ಲಿ ಆಕೆಯನ್ನು ನೋಡಲು ಮಾತ್ರವೇ ಸಿನೆಮಾಗಳಿಗೆ ಹೋಗಲಾಗುತ್ತಿತ್ತು ಎಂದೂ ಸಹ ಹೇಳಲಾಗುತ್ತಿದೆ. ಸೌತ್ ಸಿನಿರಂಗದ ಅನೇಕ ಸ್ಟಾರ್‍ ನಟರ ಜೊತೆಗೆ ಈಕೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆಕೆಗೆ ಅನೇಕ ನಟಿಯರು ಪೈಪೋಟಿಗೆ ಬಂದರೂ ಸಹ ತನ್ನದೇ ಆದ ಸ್ಟಾರ್‍ ಡಮ್ ಕಲ್ಪಿಸಿಕೊಂಡು ಸಿನಿರಂಗದಲ್ಲಿ ಮುನ್ನುಗಿದ್ದಾರೆ ತ್ರಿಷಾ.

ನಟಿ ತ್ರಿಷಾಗೆ ಸದ್ಯ 39 ವರ್ಷ ವಯಸ್ಸಾಗಿದೆ. ಆದರೂ ಸಹ ಆಕೆಗೆ ಸಿನೆಮಾಗಳ ಆಫರ್‍ ಗಳು ಸಹ ಹರಿದು ಬರುತ್ತಿವೆ. ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ ಪೊನ್ನಿಯನ್ ಸೆಲ್ವಂ ಸಿನೆಮಾದಲ್ಲಿ ತ್ರಿಷಾ ನಟಿಸಿ ತನ್ನ ಅಭಿಮಾನಿಗಳನ್ನು ರಂಜಿಸಿದ್ದರು. ನಟಿ ತ್ರಿಷಾ ವರ್ಷಂ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆ ಬಹುತೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿದರು. ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತನ್ನ ಖಾತೆಯಲ್ಲಿ ಜಮೆ ಮಾಡಿಕೊಂಡಿದ್ದಾರೆ. ಇನ್ನೂ ಫ್ಯಾಮಿಲಿ ಪ್ರೇಕ್ಷಕರನ್ನೂ ಸಹ ತುಂಬಾನೆ ಆಕರ್ಷಣೆ ಮಾಡುತ್ತಾರೆ ತ್ರಿಷಾ. ಇನ್ನೂ ಕೊನೆಯದಾಗಿ ಆಕೆ ಪೊನ್ನಿಯನ್ ಸೆಲ್ವಂ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ತ್ರಿಷಾ 20 ವರ್ಷದ ಯಂಗ್ ನಟಿಯಂತೆ ಕಾಣಿಸಿಕೊಂಡಿದ್ದರು. ಪ್ರಮೋಷನ್ ಕಾರ್ಯಕ್ರಮಗಳಲ್ಲಿನ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

ಸಿನಿರಂಗದಲ್ಲಿ ವಯಸ್ಸಾದರೂ ಸಹ ಇನ್ನೂ ಮದುವೆಯಾಗದ ಸ್ಟಾರ್‍ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ಸಂದರ್ಶನದಲ್ಲಿ ತ್ರಿಷಾ ಮದುವೆಯ ಬಗ್ಗೆ ಅನೇಕ ಪ್ರಶ್ನೆಗಳೂ ಸಹ ಎದುರಾಗುತ್ತಿರುತ್ತವೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ತ್ರಿಷಾ ಗೆ ಮತ್ತೊಮ್ಮೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ತ್ರಿಷಾ ಸಹ ಉತ್ತರ ನೀಡಿದ್ದಾರೆ. ಸಂದರ್ಶನದಲ್ಲಿ ತ್ರಿಷಾ ಮಾತನಾಡುತ್ತಾ ತ್ರಿಷಾ ಏಕೆ ಮದುವೆಯಾಗಿಲ್ಲ ಎಂದು ಕೇಳುವುದು ತಪ್ಪು, ತ್ರಿಷಾ ಯಾವಾಗ ಮದುವೆಯಾಗುತ್ತಾರೆ ಎಂದರೇ ಅದಕ್ಕೆ ನಾನು ಪಕ್ಕಾ ಉತ್ತರ ನೀಡುತ್ತೇನೆ. ಅದೂ ಸಹ ನನ್ನ ವ್ಯಕ್ತಿಗತವಾದ ವಿಚಾರ. ನಾನು ಯಾವಾಗ ಮದುವೆಯಾಗುತ್ತೇನೆ ಎಂಬುದನ್ನು ಈಗಲೇ ಹೇಳುವುದಿಲ್ಲ. ಇದಕ್ಕೆ ಕಾರಣ ನನ್ನ ಜೊತೆ ಜೀವನ ಪರ್ಯಂತ ಇರುವಂತಹ ಹುಡುಗ ಸಿಗಬೇಕಲ್ಲವೇ ಎಂದಿದ್ದಾರೆ.

ಇನ್ನೂ ನನ್ನ ಸುತ್ತಲೂ ಇರುವಂತಹ ಅನೇಕರು ಮದುವೆ ಮಾಡಿಕೊಂಡು ಸುಖವಾಗಿಲ್ಲ. ಮದುವೆ ಮಾಡಿಕೊಂಡು ವಿಚ್ಚೇದನ ಪಡೆದುಕೊಳ್ಳುವುದು ನನಗೆ ಇಷ್ಟವಿಲ್ಲ. ಮದುವೆ ಎಂಬುದು ಜೀವನ ಪರ್ಯಂತ ಇರುವಂತಹ ಬಂಧವಾಗಿದೆ. ಅದನ್ನು ಮಧ್ಯೆಯೇ ಮುಗಿಸಲು ನನಗೆ ಇಷ್ಟವಿಲ್ಲ. ಈ ಕಾರಣದಿಂದಲೇ ನಾನು ಮದುವೆಯಾಗಲು ತಡ ಮಾಡುತ್ತಿದ್ದೇನೆ ಎಂದಿದ್ದಾರೆ. ಇನ್ನೂ ಕೆಲವು ವರ್ಷಗಳ ಹಿಂದೆಯೇ ಉದ್ಯಮಿಯೊಂದಿಗೆ ಎಂಗೇಜ್ ಮೆಂಟ್ ಸಹ ಮಾಡಿಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ಮದುವೆಯಾಗುವುದಕ್ಕೂ ಮುಂಚೆಯೇ ಬೇರೆಯಾದರು. ಈ ಕಾರಣದಿಂದ ಆಕೆ ಒಳ್ಳೆಯ ವ್ಯಕ್ತಿಗಾಗಿ ಇನ್ನೂ ಕಾಯುತ್ತಿದ್ದಾರೆ ಎನ್ನಲಾಗಿದೆ.

Previous articleಕುದುರೆ ರೇಸಿಂಗ್ ಕೋರ್ಟ್ನಲ್ಲಿ ಪತಿಯೊಂದಿಗೆ ರೊಮ್ಯಾಂಟಿಕ್ ಪಿಕ್ಸ್ ಹಂಚಿಕೊಂಡ ಕಾಜಲ್….!
Next articleಟೈಟ್ ಫಿಟ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಡಸ್ಕಿ ಬ್ಯೂಟಿ ಐಶ್ವರ್ಯ ರಾಜೇಶ್, ವೈರಲ್ ಆದ ಪೊಟೋಸ್….!