Film News

ರೊಮ್ಯಾಂಟಿಕ್ ದೃಶ್ಯಗಳಲ್ಲಿ ತಾಪ್ಸಿ ಆಕ್ಷನ್ ಸೂಪರ್ ಎಂದ ಹಿರೋ!

ಮುಂಬೈ: ವಿವಿಧ ಭಾಷೆಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ನಟಿಯರಲ್ಲೊಬ್ಬರಾದ ತಾಪ್ಸಿ ಪನ್ನು ಎಂತಹ ಪಾತ್ರವಾದರೂ ಸರಿ ಪಾತ್ರಕ್ಕೆ ಶೇಕಡಾ 100 ರಷ್ಟು ಕಮಿಟ್‌ಮೆಂಟ್ ಕೊಟ್ಟು ನಟಿಸುತ್ತಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸಲು ಪ್ರಯತ್ನ ಮಾಡುತ್ತಾರೆ.

ಸದ್ಯ ನಟಿ ತಾಪ್ಸಿ ಪನ್ನು ಬಾಲಿವುಡ್‌ನ ಲವ್ ಅಂಡ್ ರೊಮ್ಯಾಂಟಿಕ್ ಚಿತ್ರ ಲೂಪ್ ಲ ಪೇಟಾ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರಗಳಲ್ಲಿನ ಹಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ತಾಪ್ಸಿ ಅದ್ಬುತವಾಗಿ ನಟನೆ ಮಾಡಿದ್ದಾರೆ. ಈ ದೃಶ್ಯಗಳಲ್ಲಿ ತಾಪ್ಸಿ ಎನರ್ಜಿ, ಕೆಮಿಸ್ಟ್ರಿ ಸೂಪರ್ ಆಗಿದೆಯೆಂದು ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ತಾಹಿರ್ ರಾಜ್ ಬಾಸಿನ್ ಮನಸಾರೆ ಹೊಗಳಿದ್ದಾರೆ. ಸಾಮಾನ್ಯವಾಗಿ ತಾಪ್ಸಿ ಯಾವುದಾದರೂ ಸಿನೆಮಾ ಒಪ್ಪಿಕೊಂಡರೆ ಆ ಪಾತ್ರಕ್ಕೆ ಪ್ರಾಣಕೊಟ್ಟು ನಟಿಸುತ್ತಾರೆ. ಲೂಪ್ ಲ ಪೇಟಾ ಚಿತ್ರದಲ್ಲಿ ಇದನ್ನು ತೋರಿಸಿಕೊಟ್ಟಿದ್ದಾರೆ.

ನಟ ತಾಹಿರ್ ಹೇಳುವಂತೆ ಲೂಪ್ ಲ ಪೇಟಾ ಚಿತ್ರದಲ್ಲಿ ಹೈ ವೋಲ್ಟೇಜ್ ರೊಮ್ಯಾಂಟಿಕ್ ದೃಶ್ಯಗಳಿದ್ದು, ಈ ದೃಶ್ಯಗಳಲ್ಲಿ ನಟಿಸುವಾಗ ತಾಪ್ಸಿ ಎನರ್ಜಿ ಮಾತಿನಲ್ಲಿ ಹೇಳಲಾಗುವುದಿಲ್ಲ. ನಗುಮುಖದಲ್ಲೇ ಬೆಡ್‌ರೂಂನಲ್ಲಿ ತೆಗೆಯಲಾದ ದೃಶ್ಯದಲ್ಲಿ ನಟಿಸಿದ್ದಾರೆ. ಗೋವಾದಲ್ಲಿ ನಡೆದ ಶೂಟಿಂಗ್ ನಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ವಿವರಣೆ ನೀಡುತ್ತಾ ಲಾಕ್‌ಡೌನ್ ನಿಂದಾಗಿ ಮನೆಯಲ್ಲಿ ಇದ್ದು ಒಂದು ರೀತಿಯ ಡಿಪ್ರೆಷನ್‌ನಲ್ಲಿದ್ದ ನಮಗೆ ಗೋವಾ ಟ್ರಿಪ್ ದೂರ ಮಾಡಿದೆ. ಗೋವಾದಲ್ಲಿನ ಶೂಟಿಂಗ್ ತಾಪ್ಸಿ ಜೊತೆಗಿನ ಕೆಮಿಸ್ಟ್ರಿ ಚೆನ್ನಾಗಿತ್ತು ಎಂದು ತಾಹಿರ್ ರಾಜ್ ಹೇಳಿದ್ದಾರೆ.

ಇನ್ನೂ ತಾಪ್ಸಿ ಪನ್ನು ತಪ್ಪಡ್ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಹಾಸಿನ್ ದಿಲ್‌ರೂಬಾ, ರಷ್ಮಿ ರಾಕೆಟ್, ದುಬಾರಾ, ಜನಗಣಮನ ಸೇರಿದಂತೆ ಹಲವು ಚಿತರಗಳಲ್ಲಿ ನಟಿಸುತ್ತಿದ್ದಾರೆ. ಲೂಪ್ ಲ ಪೇಟಾ ಚಿತ್ರದ ಶೂಟಿಂಗ್ ಕೆಲಸಗಳು ಭರದಿಂದ ಸಾಗಿದ್ದು, ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ.

Trending

To Top