ಹೊಸ ಬಾಂಬ್ ಸಿಡಿಸಿದ ಮೀಟೂ ಫೇಮ್ ನ ತನುಶ್ರೀ ದತ್ತಾ, ನನಗೆ ಏನಾದರೂ ಆದ್ರೆ ಅವರೇ ಕಾರಣ ಎಂದ್ಳು…!

ಬಾಲಿವುಡ್ ನಲ್ಲಿ ರಾತ್ರೋರಾತ್ರಿ ಫೇಮಸ್ ಆದ ನಟಿಯರಲ್ಲಿ ತನುಶ್ರೀ ದತ್ತಾ ಸಹ ಒಬ್ಬರಾಗಿದ್ದಾರೆ. ಆಕೆ ಆಶಿಕ್ ಬನಾಯಾ ಅಪ್ನೆ ಎಂಬ ಹಾಡಿನಲ್ಲಿ ಇಮ್ರಾನ್ ಹಶ್ಮಿ ತುಟಿಗೆ ಸ್ಟ್ರಾಂಗ್ ಮುತ್ತಿಡುವ ಮೂಲಕ ಫೇಮಸ್ ಆದ ಈಕೆ ಮೀಟೂ ಅಭಿಯಾನ ಸದ್ದು ಮಾಡುತ್ತಿದ್ದ ವೇಳೆಯಲ್ಲಿ ನಾನಾ ಪಾಟೇಕರ್‍ ವಿರುದ್ದ ಗಂಭೀರ ಆರೋಪವನ್ನು ಮಾಡಿದ್ದರು. ಇದೀಗ ಮತ್ತೊಮ್ಮೆ ಆಕೆ ಸುದ್ದಿಯಾಗಿದ್ದಾರೆ. ನನಗೆ ಏನಾದರೂ ಆದರೆ ಅದಕ್ಕೆ ಅವರೇ ಕಾರಣ ಅವರನ್ನು ಸುಮ್ಮನೆ ಬಿಡಬೇಡಿ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಸಿನಿರಂಗದಲ್ಲಿ ಜೋರಾಗಿ ಮೀಟೂ ಬಿರುಗಾಳಿ ಜೋರಾಗಿದ್ದ ಸಮಯದಲ್ಲಿ ತನುಶ್ರೀ ಸಹ ನಾನಾ ಪಾಟೇಕರ್‍ ವಿರುದ್ದ ಮೀಟೂ ಅಭಿಯಾನದಡಿ ಗಂಭೀರ ಆರೋಪ ಮಾಡಿದ್ದರು. ಇನ್ನೂ ಈ ಆರೋಪದ ಬಳಿಕ ಆಕೆ ಅಷ್ಟೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ತನುಶ್ರೀ ಸಿನಿರಂಗದಲ್ಲಿ ನಡೆಯುವಂತಹ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದರು. ಆ ಬಳಿಕ ಅನೇಕ ನಟಿಯರೂ ಸಹ ಈ ಬಗ್ಗೆ ಮಾತನಾಡಿದ್ದರು. ಇನ್ನೂ ತನುಶ್ರೀ ಆರೋಪ ಮಾಡಿದ ಬಳಿಕ ಆಕೆಗೆ ಸಿನಿರಂಗದಲ್ಲಿ ಅಷ್ಟೊಂದು ಅವಕಾಶಗಳೂ ಸಹ ಬರಲಿಲ್ಲ. ಇನ್ನೂ ಆಕೆಗೆ ಅವಕಾಶಗಳೂ ಬರದೇ ಇರಲು ಬಾಲಿವುಡ್ ಮಾಫಿಯಾ ಸಹ ಕಾರಣ ಎಂದು ಆರೋಪ ಮಾಡಿದ್ದರು. ಇದೀಗ ಆಕೆ ಮತ್ತೊಂದು ಪೋಸ್ಟ್ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ. ನನ್ನ ಪ್ರಾಣಕ್ಕೆ ಏನಾದರೂ ಹಾನಿಯಾದರೇ ಅದಕ್ಕೆ ನಾನಾ ಪಾಟೇಕರ್‍ ಹಾಗೂ ಬಾಲಿವುಡ್ ಮಾಫಿಯಾನೇ ಕಾರಣ ಎಂದು ಪೋಸ್ಟ್ ಮಾಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.

ಅಷ್ಟೇಅಲ್ಲದೇ ಬಾಲಿವುಡ್ ಮಾಫಿಯಾ ಯಾರು ಎಂಬುದರ ಬಗ್ಗೆ ಸಹ ತಿಳಿಸಿದ್ದಾರೆ. ಸುಶಾಂತ್ ಸಿಂಗ್ ಮೃತಪಟ್ಟಾಗ ಯಾರೆಲ್ಲಾ ಹೆಸರುಗಳು ಕೇಳಿಬಂದಿತ್ತೋ ಅವರೆಲ್ಲರೂ ಸಹ ಬಾಲಿವುಡ್ ಮಾಫಿಯಾದವರೇ. ಯಾರೂ ಸಹ ಅವರ ಸಿನೆಮಾಗಳನ್ನು ನೋಡಬೇಡಿ. ಅವರ ಎಲ್ಲಾ ಸಿನೆಮಾಗಳನ್ನು ನಿಷೇಧಿಸಿ. ಅಷ್ಟೇಅಲ್ಲದೇ ನನ್ನ ವಿರುದ್ದ ಸುಳ್ಳು ಪ್ರಚಾರ ಮಾಡಿದವರನ್ನೂ ಸಹ ಸುಮ್ಮನೆ ಬಿಡಬೇಡಿ. ಇನ್ನೂ ನ್ಯಾಯಸ್ಥಾನ ನನಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾದರೂ ಸಹ ಜನರ ಮೇಲೆ ನನಗೆ ಅಪಾರ ನಂಬಿಕೆ ಇದೆ. ಜೈ ಹಿಂದ್, ಬೈ, ಮತ್ತೆ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಇನ್ನೂ ತನುಶ್ರೀ ಹಂಚಿಕೊಂಡ ಈ ಪೋಸ್ಟ್ ಸೋಷಿಯಲ್ ಮಿಡಿಯಾಧಲ್ಲಿ ಸಖತ್ ವೈರಲ್ ಆಗುತ್ತಿದೆ. ಬಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆ ನಡೆಯುತ್ತಿದೆ.

ಇನ್ನೂ ಆಶೀಕ್ ಬನಾಯಾ ಎಂಬ ಹಾಡಿನ ಬಗ್ಗೆ ಸಹ ಮಾತನಾಡಿದ್ದಾರೆ. ಈ ಹಾಡಿನಲ್ಲಿದ್ದ ಹಾಟ್ ದೃಶ್ಯಗಳು, ಕಿಸ್ ಸೀನ್ ಗಳ ಬಗ್ಗೆ ಯಾರೂ ಸಹ ನಟನನ್ನು ಕೇಳಿರಲಿಲ್ಲ. ಹಾಡನ್ನು ಕೊರಿಯೋಗ್ರಾಫ್ ಮಾಡಿದ್ದು ಯಾರು, ಆ ಐಡಿಯಾ ಯಾರದ್ದು ಎಂಬುದರ ಬಗ್ಗೆ ಯಾರೂ ಕೇಳಲಿಲ್ಲ. ಬಳಿಕ ನನಗೆ ತಿಳಿಯಿತು ಆ ಹಾಡಿನಲ್ಲಿ ನಾನು ಕಾಣಿಸಿಕೊಂಡಿದ್ದು ತಪ್ಪು ಎಂದು. ಇನ್ನೂ ರಣವೀರ್‍ ಬೆತ್ತಲೆ ಪೊಟೋಶೂಟ್ ಬಗ್ಗೆ ಸಹ ಆಕೆ ಮಾತನಾಡಿದ್ದು, ಈಗ ಬೆತ್ತಲೆ ಪೊಟೋ ಶೂಟ್ ಮಾಡಿಸುವುದರಲ್ಲಿ ವಿಶೇಷವೇನಿದೆ.  ರಣವೀರ್‍ ಸಿಂಗ್ ಬಾಲಿವುಡ್ ಮಾಫಿಯಾದ ಬಗ್ಗೆ ನೀವು ಮಾತನಾಡಬೇಕು ಎಂದಿದ್ದಾರೆ.

Previous articleಸಾರ್ವಜನಿಕ ಕಾರ್ಯಕ್ರಮದಲೇ ನಟಿ ಮಲೈಕಾ ಇಬ್ಬರಿಂದ ಕೇಳಿ ಪಡೆದುಕೊಂಡ್ರು ಕಿಸ್.. ವೈರಲ್ ಆಯ್ತು ವಿಡಿಯೋ…!
Next articleಇಬ್ಬರು ಮಕ್ಕಳ ತಾಯಿ ಕೊಟ್ಟರೂ ಹಾಟ್ ಟ್ರೀಟ್, ಆಕೆಯ ಹಾಟ್ ನೆಸ್ ಗೆ ಆಕೆ ತಾಯಿ ಎನ್ನಲೂ ಸಾಧ್ಯವಿಲ್ಲ..!