ಹೈದರಾಬಾದ್: ನಟಿ ಸಮಂತಾ ಅಕ್ಕಿನೇನಿ ಆಹಾ ಒಟಟಿಗಾಗಿ ನಡೆಸಿಕೊಡುತ್ತಿರುವ ಸ್ಯಾಮ್-ಜ್ಯಾಮ್ ಹೆಸರಿನ ಸೆಲೆಬ್ರೆಟಿ ಟಾಕ್ ಶೋನಲ್ಲಿ ಅತಿಥಿಯಾಗಿ ಆಗಮಿಸಿದ್ದ ತಮನ್ನಾ ತಮ್ಮ ಮನದಲ್ಲಿನ ಆಸೆಯನ್ನು ಬಹಿರಂಗಗೊಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ಮಿಲ್ಕೀ ಬ್ಯೂಟಿ ಎಂದೇ ಕರೆಯಲ್ಪಡುವ ತಮನ್ನಾ ರವರ ನಿದ್ದೆ ಕದ್ದವರು ಯಾರು ಎಂಬ ಪ್ರಶ್ನೆಗೆ ಸ್ಯಾಮ್-ಜ್ಯಾಮ್ ಶೋನಲ್ಲಿ ಉತ್ತರ ಸಿಕ್ಕಿದೆ. ಸಮಂತಾ ಹಾಗೂ ತಮನ್ನಾ ಇಬ್ಬರೂ ಗೆಳೆಯರೇ ಆಗಿರುವ ಕಾರಣ ಸಾಮಾನ್ಯವಾಗಿ ಮಾತನಾಡುವಂತೆ ಶೋನಲ್ಲಿ ಸಹ ಮಾತನಾಡಿದ್ದು, ಸಮಂತಾ ಕೇಳಿರುವ ಪ್ರಶ್ನೆಗಳಿಗೆ ತಮನ್ನಾ ಉತ್ತರ ನೀಡಿದ್ದಾರೆ.
ಶೋ ನಲ್ಲಿ ಸಂಮತಾ ಒಂದು ವೇಳೆ ಆನ್ ಸ್ಕ್ರೀನಿಂಗ್ ಕಿಸ್ಸಿಂಗ್ ನಿಯಮ ತೆಗೆದು ಬಿಟ್ಟರೇ, ನೀವು ಯಾವ ಹಿರೋಗೆ ಕಿಸ್ ಮಾಡಲು ಇಷ್ಟಪಡುತ್ತೀರಿ ಎಂದು ಕೇಳಿದ್ದು, ಇದಕ್ಕೆ ತಟ್ ಎಂದು ವಿಜಯ್ ದೇವರಕೊಮಡ ರವರಿಗೆ ಮುತ್ತು ಕೊಡಲು ಇಷ್ಟ ಎಂದು ಹೇಳಿದ್ದಾರೆ. ಇನ್ನೂ ತಮನ್ನಾ ಮದುವೆಯ ಬಗ್ಗೆ ಮಾತುಕತೆ ನಡೆದಿದ್ದು, ಸಮಂತಾ ನನ್ನ ಗಂಡನ ತಮ್ಮ ಅಖಿಲ್ ರನ್ನು ಮದುವೆಯಾಗುವುದಾದರೇ ನಮ್ಮ ಮನೆಯಲ್ಲಿ ಮಾತನಾಡುತ್ತೇನೆ, ಅಖಿಲ್ ನಿನಗಿಂತ ಸ್ವಲ್ಪ ವಯಸ್ಸಿನಲ್ಲಿ ಚಿಕ್ಕವನು ಎಂದರೇ, ಅದಕ್ಕೆ ತಮನ್ನಾ ಪ್ರೀತಿಗೆ ವಯಸ್ಸಿಲ್ಲ ಎಂದಿದ್ದಾರೆ.
ಇನ್ನೂ ತಮನ್ನಾ ಕವನಗಳನ್ನು ಬರೆಯುವ ಹವ್ಯಾಸ ಹೊಂದಿದ್ದು, ಈ ಬಗ್ಗೆ ಕೇಳಿದರೇ, ನಾನು ಭಗ್ನ ಪ್ರೇಮಿ, ನನ್ನ ಹೃದಯ ಒಡೆಯಲ್ಪಟ್ಟಿದೆ ಆದ್ದರಿಂದ ಕವನಗಳನ್ನು ಬರೆಯುತ್ತೇನೆ ಎಂದಿದ್ದಾರೆ. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸಮಂತಾ ನಿನ್ನ ಹೃದಯ ಒಡೆದವರ್ಯಾರು ಹೇಳು ನಾನು ಅವರನ್ನು ನೋಡಿಕೊಳ್ಳುತ್ತೇನೆ ಎಂದು ಕಿಚಾಡಿಸಿದ್ದಾರೆ.
