ನಟಿ ತಮನ್ನಾ ಮದುವೆ ಫಿಕ್ಸ್ ಅಂತೆ, ಅದಕ್ಕೆ ಚಿರಂಜೀವಿ ಕಾರಣವಂತೆ….!

ಟಾಲಿವುಡ್ ನಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಯಲಾಗುವ ನಟಿ ತಮನ್ನಾ ಸದ್ಯ ಬಹುಬೇಡಿಕೆ ನಟಿಯಾಗಿದ್ದಾರೆ. ಮುಂಬೈನಲ್ಲಿ ಜನಿಸಿದ ಈಕೆ ಚಿಕ್ಕವಯಸ್ಸಿನಲ್ಲಿಯೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಯಾವುದೇ ಬ್ಯಾಕ್ ಗ್ರೌಂಡ್ ಸಪೋರ್ಟ್ ಇಲ್ಲದೇಯೆ ಪೋಷಕರ ಸಹಕಾರದೊಂದಿಗೆ ಸ್ಟಾರ್‍ ನಟಿಯಾದ ಈಕೆ ಸದ್ಯ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದಾರೆ.

ಕೆಲವು ದಿನಗಳಿಂದ ನಟಿ ಸಿನಿರಂಗದಲ್ಲಿ ಸ್ವಲ್ಪ ಸ್ಲೋ ಆದರೂ ಸಹ ಸಾಲು ಸಾಲು ಸಿನೆಮಾಗಳು, ವೆಬ್ ಸಿರೀಸ್ ಗಳಲ್ಲಿ ನಟಿಸುವುದರ ಜೊತೆಗೆ ಕೆಲವೊಂದು ಐಟಂ ಸಾಂಗ್ ಗಳಲ್ಲೂ ಸಹ ನಟಿಸುತ್ತಿದ್ದಾರೆ. ಆ ಮೂಲಕ ಆಕೆಯೂ ಸಹ ಬ್ಯುಸಿಯನ್ನು ಮೈಂಟೈನ್ ಮಾಡುತ್ತಿದ್ದಾರೆ.  ಸದ್ಯ 30 ರ ವಯಸ್ಸಿನಲ್ಲಿರುವ ನಟಿ ತಮನ್ನಾ ಮದುವೆ ಬಗ್ಗೆ ಚರ್ಚೆಗಳು ಬರುತ್ತಿವೆ. ಈಗಾಗಲೇ ಅನೇಕ ಬಾರಿ ಅಭಿಮಾನಿಗಳು ಸಹ ತಮನ್ನಾ ರವರಿಗೆ ಮದುವೆ ಯಾವಾಗ ಎಂದು ಸೋಷಿಯಲ್ ಮಿಡಿಯಾ ಮೂಲಕ ಕೇಳುತ್ತಿದ್ದಾರೆ.  ಈ ಹಿಂದೆ ತಮನ್ನಾ ರವರಿಗೆ ಮದುವೆ ಸೆಟ್ ಆಗಿದೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳು ಜೋರಾಗಿ ಹರಿದಾಡಿತ್ತು. ಆದರೇ ಈ ರೂಮರ್‍ ರೂಮರ್‍ ಗಳಾಗಿಯೇ ಉಳಿದಿವೆ. ಆದರೆ ಇದೀಗ ನಟಿ ತಮನ್ನಾ ರವರ ಮದುವೆ ಫಿಕ್ಸ್ ಆಗಲಿದೆ ಎಂಬ ಮತ್ತೊಂದು ರೂಮರ್‍ ಇದೀಗ ಹರಿದಾಡುತ್ತಿದೆ.

ಸದ್ಯ ತಮನ್ನಾ ರವರ ಮದುವೆ ಶೀಘ್ರದಲ್ಲೇ ಫಿಕ್ಸ್ ಆಗಲಿದೆ ಎಂಬೆಲ್ಲಾ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಇದಕ್ಕೆ ಕಾರಣ ಮೆಗಾಸ್ಟಾರ್‍ ಚಿರಂಜೀವಿ ಎಂದು ಸಹ ಹೇಳಲಾಗುತ್ತಿದೆ. ನಿಮಗೆಲ್ಲಾ ಅನ್ನಿಸಬಹುದು ತಮನ್ನಾ ಮದುವೆಗೂ ಚಿರಂಜೀವಿಗೂ ಏನು ಸಂಬಂಧ ಎಂದು. ಅದಕ್ಕೂ ಬಲವಾದ ಕಾರಣವಿದೆ. ಸಿನಿರಂಗದಲ್ಲಿ ಸೆಂಟಿಮೆಂಟ್ಸ್ ಗೆ ತುಂಬಾ ಬೆಲೆ ಕೊಡುತ್ತಾರೆ. ಈ ಹಾದಿಯಲ್ಲೇ ಸೆಂಟಿಮೆಂಟ್ ಒಂದರ ಪ್ರಕಾರ ನಟಿ ತಮನ್ನಾ ರವರಿಗೆ ಮದುವೆಯಾಗಲಿದೆಯಂತೆ. ಮೆಗಾಸ್ಟಾರ್‍ ಚಿರಂಜೀವಿ ಜೊತೆ ಎರಡನೇ ಸಿನೆಮಾದಲ್ಲಿ ನಟಿಸಲು ಒಪ್ಪಿಗೆ ಕೊಟ್ಟ ನಟಿಯರಿಗೆ ಮದುವೆ ಆಗುತ್ತಿದೆಯಂತೆ. ಈ ಸೆಂಟಿಮೆಂಟ್ ನಂತೆ ತಮನ್ನಾ ರವರಿಗೆ ಶೀಘ್ರದಲ್ಲೇ ಮದುವೆ ಫಿಕ್ಸ್ ಆಗಲಿದೆ ಎಂಬ ಮಾತುಗಳು ಇದೀಗ ಹರಿದಾಡುತ್ತಿವೆ.

ನಟಿ ತಮನ್ನಾ ರವರ ಮದುವೆ ಫಿಕ್ಸ್ ಆಗಲಿದೆ ಎಂದು ಹೇಳಲು ಒಳ್ಳೆಯ ಉದಾಹರಣೆಗಳೂ ಸಹ ಇದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಈ ಹಿಂದೆ ಚಿರಂಜೀವಿ ಜೊತೆ ನಟಿಸಿದಂತಹ ಕಾಜಲ್ ಹಾಗೂ ನಯನತಾರಾ ಇಬ್ಬರ ಮದುವೆ ಫಿಕ್ಸ್ ಆದ ಕಾರಣ ಕೊಡುತ್ತಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಖೈದಿ ನಂಬರ್‍ 150 ನಲ್ಲಿ ಕಾಜಲ್ ಬಣ್ಣ ಹಚ್ಚಿದ್ದರು. ಬಳಿಕ ಆಚಾರ್ಯ ಸಿನೆಮಾಗೂ ಸಹ ಸೈನ್ ಹಾಕಿದ್ದರು. ಈ ಸಿನೆಮಾ ಶೂಟಿಂಗ್ ಪ್ರಾರಂಭದಲ್ಲೇ ಆಕೆ ಮದುವೆಯಾದರು. ಅದೇ ರೀತಿ ನಯನತಾರಾ ಸಹ ಸೈರಾ ನರಸಿಂಹರೆಡ್ಡಿ ಸಿನೆಮಾದಲ್ಲಿ ಚಿರು ಜೊತೆ ನಟಿಸಿದ್ದರು, ಸದ್ಯ ಚಿರಂಜೀವಿಯವರ ಗಾಡ್ ಫಾದರ್‍ ಸಿನೆಮಾಗೆ ಒಪ್ಪಿಗೆ ನೀಡಿದ್ದ ನಯನತಾರಾಗೆ ವಿಘ್ನೇಶ್ ಶೀವನ್ ಜೊತೆ ಮದುವೆಯಾಗಲಿದ್ದಾರೆ. ಸದ್ಯ ತಮನ್ನಾ ಸಹ ಎರಡನೇ ಬಾರಿಗೆ ಚಿರು ಜೊತೆ ಭೋಳಾ ಶಂಕರ್‍ ಜೊತೆ ನಟಿಸುತ್ತಿದ್ದು, ತಮನ್ನಾ ರವರಿಗೂ ಸಹ ಮದುವೆ ಫಿಕ್ಸ್ ಆಗಲಿದೆ ಎಂಬ ಮಾತುಗಳು ಇದೀಗ ನೆಟ್ ನಲ್ಲಿ ಹರಿದಾಡುತ್ತಿವೆ.

Previous articleಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ….
Next articleನಟಿಯಾಗುವುದಕ್ಕೂ ಮುನ್ನಾ ಸಾಯುತ್ತೇನೋ ಎಂದುಕೊಂಡಿದ್ದರಂತೆ ಆಂಕರ್ ವಿಷ್ಣುಪ್ರಿಯಾ