ಮೂರು ಬಾರಿ ಮದುವೆ ಮಾಡಿಕೊಳ್ಳೊಣ ಎಂದು ಕೊಂಡೆ, ಆದರೆ ದೇವರು ಕಾಪಾಡಿಬಿಟ್ಟ ಎಂದ ಮಾಜಿ ಭುವನ ಸುಂದರಿ…!

90ರ ದಶಕದಲ್ಲಿ ಮಿಂಚಿದ ನಟಿ ಸುಸ್ಮಿತಾ ಸೇನ್ ದಸ್ತಕ್ ಎಂಬ ಹಿಂದಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಸಮಯದಲ್ಲಿ ಅದೆಷ್ಟೋ ಸೂಪರ್‍ ಡೂಪರ್‍ ಹಿಟ್ ಸಿನೆಮಾಗಳನ್ನು ನೀಡಿದ ಕೀರ್ತಿ ಈಕೆಗೆ ಸಲ್ಲುತ್ತದೆ. ಮಾಜಿ ಭುವನ ಸುಂದರಿಯ ಪಟ್ಟವನ್ನು ಸಹ ಈಕೆ ಮುಡಿಗೇರಿಸಿಕೊಂಡಿದ್ದರು. ಸದ್ಯ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ವೆಬ್ ಸೀರಿಸ್ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾರೆ. ಆಕ್ಷನ್ ಕಥನವುಳ್ಳ ಆರ್ಯ ಎಂಬ ವೆಬ್ ಸಿರೀಸ್ ಮೂಲಕ ಮತ್ತೆ ಆಕೆಯ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಕೆಲವೊಂದು ವಿಚಾರಗಳು ಹಾಟ್ ಟಾಪಿಕ್ ಆಗಿದೆ.

ದಶಕಗಳ  ಹಿಂದೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ ಸುಸ್ಮಿತಾ ಸೇನ್ ಸಿನೆಮಾಗಳಿಂದ ದೂರವುಳಿದ ಬಳಿಕ ಇದೀಗ ವೆಬ್ ಸಿರೀಸ್ ಮೂಲಕ ನಟನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ಪ್ರೀತಿ ವ್ಯವಹಾರದ ಜೊತೆಗೆ ಕೆಲವೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿದ್ದಾರೆ. ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಹಂಚಿಕೊಂಡ ಕೆಲವೊಂದು ವಿಚಾರಗಳು ಇದೀಗ ವೈರಲ್ ಆಗಿದೆ. ಆರ್ಯ ಎಂಬ ವೆಬ್ ಸೀರಿಸ್ ಮೂಲಕ ಮತ್ತೊಮ್ಮೆ ನಟನೆಯಲ್ಲಿ ಸೈ ಎನ್ನಿಸಿಕೊಂಡಿದ್ದು, ಇನ್ನೂ ಸಿನೆಮಾಗಳಲ್ಲಿ ನಟಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಸುಸ್ಮಿತಾ ಸೇನ್. ಈ ವೆಬ್ ಸಿರೀಸ್ ಬಳಿಕ ಆಕೆಗೆ ಇನ್ನೂ ಅನೇಕ ಅವಕಾಶಗಳು ಹುಡುಕಿಕೊಂಡು ಬಂದಿವೆ ಎಂದು ಹೇಳಲಾಗುತ್ತಿದೆ. ಸದ್ಯ ಆಕೆ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ಮಾತನಾಡುತ್ತಾ ಸುದ್ದಿಯಾಗಿದ್ದಾರೆ.

ನಟಿ ಸುಸ್ಮಿತಾ ಸೇನ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಬಗ್ಗೆ ಕೆಲವೊಂದು ಆಸಕ್ತಿಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹೇಳಿರುವ ಮಾಹಿತಿ ಹೈಲೈಟ್ ಆಗಿದೆ ಎನ್ನಲಾಗಿದೆ. ಸುಸ್ಮಿತಾ ಸೇನ್ ಮಾತನಾಡುತ್ತಾ, ನನ್ನ ಜೀವನದಲ್ಲಿ ಹಾಗೂ ಸಿನೆಮಾ ಕೆರಿಯರ್‍ ನಲ್ಲಿ ಸಾಕಷ್ಟು ಆಸಕ್ತಿಕರವಾದ ವ್ಯಕ್ತಿಗಳನ್ನು ಭೇಟಿಯಾದೆ, ಅವರ ಪೈಕಿ ಕೆಲವರು ನನ್ನ ಜೀವನಕ್ಕೆ ತುಂಬಾನೆ ಹತ್ತಿರವಾದವರು ಅನ್ನಿಸಿತ್ತು. ಆದರೆ ಅವರನ್ನು ಮದುವೆಯಾಗುವ ಮನಸ್ಸು ಮಾತ್ರ ನನ್ನಲ್ಲಿ ಮೂಡಲಿಲ್ಲ. ಅವರು ತುಂಬಾನೆ ಡಲ್ ಆಗಿ ಕಾಣಿಸಿಕೊಂಡರು. ನನ್ನ ವೈಯುಕ್ತಿಕ ಜೀವನಕ್ಕೂ, ನನ್ನ ಮಕ್ಕಳಿಗೂ ಯಾವುದೇ ಸಂಬಂಧವಿಲ್ಲ. ನಾನು ಆ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಎಂದಿಗೂ ಅವರು ತಪ್ಪು ಎನ್ನುವುದಿಲ್ಲ. ನನ್ನ ರಿಲೇಷನ್ ಶಿಪ್ ಬಗ್ಗೆ ಅವರು ಯಾವುದೇ ಪ್ರಶ್ನೆಗಳನ್ನು ಸಹ ಕೇಳಿಲ್ಲ. ನನ್ನ ಇಬ್ಬರೂ ಮಕ್ಕಳೂ ಸಹ ನಾಣು ತೆಗೆದುಕೊಂಡ ನಿರ್ಣಯಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೇ ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.

ಅಷ್ಟೇಅಲ್ಲದೇ ನನ್ನ ಜೀವನದಲ್ಲಿ ಮೂರು ಬಾರಿ ಮದುವೆ ಮಾಡಿಕೊಳ್ಳಲು ಯೋಚನೆ ಮಾಡಿದ್ದೆ,. ಆ ವೇಳೆ ನಾನು ಮದುವೆಯಾಗಲು ಬಯಸಿದ ವ್ಯಕ್ತಿಯ ಬಗ್ಗೆ ನನಗೆ ತಿಳಿದ ಕಾರಣ ಮದುವೆ ಕ್ಯಾನ್ಸಲ್ ಆಯಿತು. ಇನ್ನೂ ಅವರ ಬಗ್ಗೆ ನನಗೆ ಸ್ಪಷ್ಟತೆ ದೊರೆಯಲು ಸಾಕಷ್ಟು ಸಮಯವೇನೂ ತೆಗೆದುಕೊಳ್ಳಲಿಲ್ಲ. ಈ ವಿಚಾರದಲ್ಲಿ ದೇವರು ನನ್ನನ್ನು ರಕ್ಷಣೆ ಮಾಡಿದ ಎಂದು ತಮ್ಮ ಪ್ರೀತಿಯ ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದು ಎಲ್ಲೆಡೆ ವೈರಲ್ ಆಗಿದೆ.

Previous articleಮಕ್ಕಳೊಂದಿಗೆ ಹಾಲಿಡೇಸ್ ಎಂಜಾಯ್ ಮಾಡುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ!
Next articleಮದುವೆ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ನಟಿ ಶ್ರುತಿ ಹಾಸನ್, ಊಹಿಸದ ರೀತಿಯಲ್ಲಿ ಉತ್ತರ ಕೊಟ್ಟ ನಟಿ…!