ರಾಜಾ ರವೀಂದ್ರ ಹಾಗೂ ಸುರೇಖವಾಣಿ ಪಾರ್ಟಿಯಲ್ಲಿ ಸದ್ದು, ವೈರಲ್ ಆದ ವಿಡಿಯೋ….!

ತೆಲುಗು  ಬೆಳ್ಳಿತೆರೆಯ ಮೇಲೆ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅಭಿನಯಿಸುತ್ತಾ ದೊಡ್ಡ ಕ್ರೇಜ್ ಸಂಪಾದಿಸಿಕೊಂಡ ನಟಿ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಿಂತ ಕಡಿಮೆಯಿಲ್ಲ ಎಂಬಂತೆ ಸದ್ದು ಮಾಡುತ್ತಿರುತ್ತಾರೆ. ಸದಾ ಹಾಟ್ ಪೊಟೋಸ್, ರೀಲ್ಸ್ ಮಾಡುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಾರೆ. ಅದರಲ್ಲೂ ಆಕೆ ತನ್ನ ಮಗಳೊಂದಿಗೆ ಮಾಡುವ ರೀಲ್ಸ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ತನ್ನ ಸಹನಟನೊಂದಿಗೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜೋರಾಗಿಯೇ ಸದ್ದು ಮಾಡಿದ್ದಾರೆ.

ತೆಲುಗು ಸಿನಿರಂಗದಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಅನೇಕ ಸಿನೆಮಾಗಳ ಮೂಲಕ ಫೇಮಸ್ ಆದ ಸುರೇಖಾವಾಣಿ ಇತ್ತೀಚಿಗಷ್ಟೆ ನಡೆದ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಜೋರಾದ ಹಂಗಾಮ ಮಾಡಿದ್ದಾರೆ. ಸುಮಾರು ತಿಂಗಳುಗಳಿಂದ ಆಕೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಜೋರಾಗಿ ಸುದ್ದಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಹುಟ್ಟುಹಬ್ಬದ ಪಾರ್ಟಿಯೊಂದರಲ್ಲಿ ಆಕೆ ಮಾಡಿದ ಜೋರು ಅಷ್ಟಿಷ್ಟಲ್ಲ. ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಪುಲ್ ವೈರಲ್ ಆಗಿದೆ.  ಇತ್ತೀಚಿಗೆ ಸುರೇಖಾ ಸಿನಿರಂಗದ ಅನೇಕ ಕಲಾವಿದರ ಕಾರ್ಯಕ್ರಮಗಳು, ಹುಟ್ಟುಹಬ್ಬಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಜೋರು ಸದ್ದು ಮಾಡುತ್ತಿರುತ್ತಾರೆ. ಇನ್ನೂ ನಟಿ ಸುರೇಖಾವಾಣಿ ನಟಿ ರಜಿತಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದಾರೆ. ಸುರೇಖಾ ಜೊತೆಗೆ ಹೇಮಾ, ಸನ, ರಾಜಾ ರವೀಂದ್ರ ಸಹ ಇದೇ ಪಾರ್ಟಿಗೆ ಹಾಜರಾಗಿದ್ದಾರೆ. ಇನ್ನೂ ನಟಿ ಹೇಮಾ ಈ ಪಾರ್ಟಿಯಲ್ಲಿ ಹಾಜರಾದ ಎಲ್ಲಾ ಕಲಾವಿದರನ್ನು ಹಾಗೂ ರಜಿತ ಹುಟ್ಟುಹಬ್ಬದ ಕೇಕ್ ಕಟ್ ಮಾಡುವ ವಿಡಿಯೋ ಒಂದನ್ನು ಸಹ ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ಈ ವಿಡಿಯೋದಲ್ಲಿ ಸುರೇಖವಾಣಿ ಹಾಗೂ ರಾಜಾರವಿಂದ್ರ ಜೊತೆಗೆ ತುಂಬಾ ಕ್ಲೋಸ್ ಆಗಿರುವ ಕಾರಣ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ರವೀಂದ್ರ ಭುಜದ ಮೇಲೆ ಸುರೇಖಾ ಕೈಹಾಕಿ ಗಟ್ಟಿಯಾಗಿ ತಬ್ಬಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಹಿಂದೆ ಬೋಲ್ಡ್ ನೆಸ್ ಮೂಲಕ ಸದ್ದು ಮಾಡಿದ್ದ ಸುರೇಖ ಇದೀಗ ರಾಜಾ ರವೀಂದ್ರ ಜೊತೆಗೆ ಕ್ಲೋಸ್ ಆಗಿರುವ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ.  ಇನ್ನೂ ಈ ವಿಡಿಯೋಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ರೂಮರ್‍ ಗಳು ಸಹ ಹುಟ್ಟಿಕೊಂಡಿದ್ದು, ಸುರೇಖಾ ಅಷ್ಟೊಂದು ಕ್ಲೋಸ್ ಆಗಿರಲು ಕಾರಣ ಏನಿರಬಹುದು ಎಂಬ ಅನುಮಾನಗಳೂ ಸಹ ಅನೇಕರಲ್ಲಿ ಮೂಡಿದೆ.

ಇನ್ನೂ ಸುರೇಖಾ ಬಾಲ್ಯದಲ್ಲೇ ಆಂಕರ್‍ ಆಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಂದಿನಿಂದ ವಿವಿಧ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ನಿರ್ದೇಶಕ ಸಾಯಿ ಚರಣ್ ಎಂಬಾತನನ್ನು ಮದುವೆಯಾದರು. ಬಳಿಕ ಸಿನೆಮಾಗಳಲ್ಲೂ ಸಹ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ನಟಿಸುತ್ತಾ ತನ್ನದೇ ಆದ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಇದೀಗ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲೆ ಹೆಚ್ಚಿನ ಸದ್ದು ಮಾಡುತ್ತಿದ್ದು, ಆಕೆಯ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ.

Previous articleಬಾಹುಬಲಿ ಪ್ರಭಾಸ್ ಕುರಿತಂತೆ ಸಂಚಲನಾತ್ಮಕ ಸತ್ಯಗಳನ್ನು ಹೊರಹಾಕಿದ ಹಾಸ್ಯ ನಟ ಶ್ರೀನು….!
Next articleಟ್ರೆಡಿಷನಲ್ ಲುಕ್ಸ್ ನೊಂದಿಗೆ ಹುಚ್ಚರನ್ನಾಗಿ ಮಾಡಿದ ಮಲಯಾಳಿ ಬ್ಯೂಟಿ ಮಾಳವಿಕಾ ಮೋಹನನ್..!