Film News

ನಟಿ ಸುಹಾಸಿನಿ ತಂಗಿ ಕೂಡ ಫೇಮಸ್ ಕನ್ನಡ ನಟಿ? ಯಾರು ಗೊತ್ತಾ, ನಿಮಗೆ ಗೊತ್ತಿರದ ಸುದ್ದಿ

ದಕ್ಷಿಣ ಭಾರತದ ಸಿನಿಪ್ರಿಯರಲ್ಲಿ ನಟಿ ಸುಹಾಸಿನಿ ಎಂದರೆ ಗೊತ್ತಿಲ್ಲದವರು ಇರಲಿಕ್ಕೆ ಸಾಧ್ಯವಿಲ್ಲ. ಸುಹಾಸಿನಿ ಅವರ ನಗು ಬಹಳ ಅದ್ಭುತವಾದದ್ದು ಎಂದು ಹೇಳಿದರೆ ತಪ್ಪಾಗಲಾರದು. ಸುಹಾಸಿನಿ ಅವರು ಮೂಲತಃ ತಮಿಳುನಾಡಿನವರು. 1961 ರಲ್ಲಿ ಚೆನ್ನೈ ನಲ್ಲಿ ಜನಿಸಿದರು.

80ರ ದಶಕದಲ್ಲಿ ಮೊದಲಿಗೆ ಕ್ಯಾಮೆರಾ ಹಿಂದೆ ಅಸಿಸ್ಟಂಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು ಸುಹಾಸಿನಿ. ಮೊದಲಿಗೆ ಅವರಿಗೆ ನಟನೆಯಲ್ಲಿ ಆಸಕ್ತಿ ಇರಲಿಲ್ಲ, ಕ್ಯಾಮೆರಾ ಹಿಂದಿನ ಕೆಲಸಗಳನ್ನು ಮಾಡಬೇಕೆಂದು ಆಸೆಪಟ್ಟಿದ್ದರು ನಟಿ ಸುಹಾಸಿನಿ. ಆದರೆ ವಿಧಿಯ ಆಟವೇ ಬೇರೆ. ಇವರನ್ನು ನಟಿಯನ್ನಾಗಿ ಮಾಡಿತು. ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸುಹಾಸಿನಿ ನಟಿಸಿದ್ದಾರೆ.

ವಿಷ್ಣುವರ್ಧನ್, ರಜನಿಕಾಂತ್, ಚಿರಂಜೀವಿ, ಶರತ್ ಬಾಬು, ಮೋಹನ್, ಮೋಹನ್ ಲಾಲ್, ಮಮ್ಮೂಟಿ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ನಟರ ಜೊತೆಯಲ್ಲಿ ನಟಿಸಿದ ಹೆಗ್ಗಳಿಕೆ ಸುಹಾಸಿನಿ ಅವರದ್ದು. ಜೊತೆಗೆ ಎಲ್ಲಾ ಪ್ರಸಿದ್ಧ ನಿರ್ದೇಶಕರ ಜೊತೆಯಲ್ಲೂ ಕೆಲಸ ಮಾಡಿದ್ದಾರೆ. ಇವರ ನಟನಾ ಚಾತುರ್ಯತೆಗೆ, ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು, ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಬಂದಿದೆ.

ಸುಹಾಸಿನಿ ಅವರು ನಟಿಯಷ್ಟೇ ಅಲ್ಲ, ಅವರೊಬ್ಬ ನಿರ್ದೇಶಕಿ, ನಿರ್ಮಾಪಕಿ ಹಾಗೂ ಬರಹಗಾರ್ತಿ ಕೂಡ ಹೌದು. 1988ರಲ್ಲಿ ಪ್ರಖ್ಯಾತ ನಿರ್ದೇಶಕ ಮಣಿರತ್ನಂ ಅವರೊಡನೆ ವಿವಾಹವಾದರು. ಇವರಿಗೆ ಒಬ್ಬ ಮಗನಿದ್ದಾನೆ. ಜೊತೆಗೆ, ಮಣಿರತ್ನಂ ಅವರ ಸಿನಿಮಾಗಳಲ್ಲಿ ಸಹ ಕೆಲಸ ಮಾಡಿದ್ದಾರೆ ಸುಹಾಸಿನಿ.

ಇನ್ನು ಸುಹಾಸಿನಿ ಅವರ ಕುಟುಂಬದ ವಿಷಯಕ್ಕೆ ಬಂದರೆ, ಇವರ ತಂದೆ ಚಾರು ಹಾಸನ್ ಹಾಸನ್ ಸಹ ದಕ್ಷಿಣ ಭಾರತದ ಮೇರು ನಟ, ನೀಲಾಂಬರಿ, ದುರ್ಗಶಕ್ತಿ ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲೂ ಸಹ ಚಾರು ಹಾಸನ್ ನಟಿಸಿದ್ದಾರೆ. ಇನ್ನು ಸುಹಾಸಿನಿ ಅವರ ಚಿಕ್ಕಪ್ಪ ಭಾರತ ಚಿತ್ರರಂಗದ ಅತ್ಯದ್ಭುತ ಪ್ರತಿಭೆ ಕಮಲ್ ಹಾಸನ್. ಇವರೂ ಕೂಡ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಮಾತ್ರವಲ್ಲದೆ, ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.

ಇವರ ಜೊತೆ ಸುಹಾಸಿನಿ ಅವರಿಗೆ ಒಬ್ಬ ತಂಗಿ ಕೂಡ ಇದ್ದಾರೆ, ಸುಹಾಸಿನಿ ಅವರ ಸ್ವಂತ ತಂಗಿ ಅಲ್ಲ, ಅವರ ಚಿಕ್ಕಪ್ಪನ ಮಗಳು, ಅವರ ಹೆಸರು ಅನು ಹಾಸನ್, ಅನು ಹಾಸನ್ ಅವರು ಸಹ ನಟಿ. 90 ರ ದಶಕದಲ್ಲಿ ಹಲವಾರು ತಮಿಳ್ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಅನು ಹಾಸನ್. ಸುಹಾಸಿನಿ ಅವರು ನಿರ್ದೇಶಿಸಿದ ಮೊದಲ ಚಿತ್ರ “ಇಂದ್ರ” ದಲ್ಲಿ ನಾಯಕಿಯಾಗಿ ನಟಿಸಿದ್ದರು ಅನು. ನಟನೆಯ ಜೊತೆಗೆ ಉತ್ತಮ ನಿರೂಪಕಿ ಅನು ಹಾಸನ್. ತಮಿಳಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.

ಕನ್ನಡದಲ್ಲಿ ಗೋಲ್ ಮಾಲ್ ಸಿನಿಮಾ ಮತ್ತು ಗೌರಮ್ಮ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಅನು ಹಾಸನ್. ಅಕ್ಕನಂತೆಯೇ ಇವರು ಸಹ ಒಳ್ಳೆಯ ನಟಿ.

Trending

To Top