Film News

ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಶ್ರೀರೆಡ್ಡಿ ನಟನೆ!

ಹೈದರಾಬಾದ್: ಸೋಷಿಯಲ್ ಮಿಡೀಯಾದಲ್ಲೇ ರಾಜಕಾರಣಿಗಳನ್ನು ಹಾಗೂ ದೊಡ್ಡ ದೊಡ್ಡ ನಟರನ್ನು ಟೀಕಿಸುವಂತಹ ನಟಿ ಶ್ರೀರೆಡ್ಡಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ದಶಕಗಳ ಹಿಂದಿನ ಮಾದಕ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ನಟಿ ಶ್ರೀರೆಡ್ಡಿ ಸುಮಾರು ದಿನಗಳ ಹಿಂದೆ ನಿಮಗೆ ಶೀಘ್ರದಲ್ಲೇ ಗುಡ್‌ನ್ಯೂಸ್ ನೀಡುವುದಾಗಿ ಹೇಳುತ್ತಾ ಬರುತ್ತಿದ್ದರು. ಅವರ ಪೋಸ್ಟ್‌ಗಳಿಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ಸ್ ಸಹ ಹಾಕುತ್ತಿದ್ದರು. ಜೊತೆಗೆ ದೊಡ್ಡ ಮಟ್ಟದಲ್ಲಿ ಟ್ರೋಲ್ ಸಹ ಮಾಡುತ್ತಿದ್ದರು. ಆದರೆ ಇದೀಗ ನಟಿ ಶ್ರೀ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿ ನನಗೆ ದೊಡ್ಡ ಅವಕಾಶ ಬಂದಿದೆ ಎಂದಿದ್ದಾರೆ.

ನಟಿ ಶ್ರೀರೆಡ್ಡಿ ಶೇರ್ ಮಾಡಿದ ವಿಡಿಯೋದಲ್ಲಿ ನಾನು ಬಯೋಪಿಕ್ ಒಂದರಲ್ಲಿ ನಟಿಸಲಿದ್ದು, ದಶಕಗಳ ಕಾಲದ ದಿಗ್ಗಜ ನಟಿ, ಗ್ಲಾಮರಸ್ ನಟಿ, ಸೋ ಹಾಟ್ ಇನ್ನೂ ಆಕೆಯ ಕುರಿತು ಒಂದು ಪದದಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆಕೆ ಬೇರೆ ಯಾರು ಅಲ್ಲ ಸಿಲ್ಕ್ ಸ್ಮಿತ ಮೇಡಂ. ಅವರ ಬಯೋಪಿಕ್‌ನಲ್ಲಿಯೇ ನಾನು ಅವರ ಪಾತ್ರವನ್ನು ಪೋಷಣೆ ಮಾಡಲಿದ್ದೇನೆ. ಈ ಸಿನೆಮಾ ನಿರ್ದೇಶಕ ಮಧು ಸಾರಥ್ಯದಲ್ಲಿ ಬರಲಿದ್ದು, ಆತನು ಸಹ ಪಕ್ಕದಲ್ಲಿಯೇ ಇದ್ದಾರೆ ಎಂದು ಅವರನ್ನು ಸಹ ತೋರಿಸಿದ್ದು, ಈ ಸಿನೆಮಾ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಇನ್ನೂ ಈ ವಿಡಿಯೋ ಬಿಡುಗಡೆಯ ನಂತರ ಸ್ವಲ್ಪ ಸಮಯದಲ್ಲೆ ಸಿಲ್ಕ್ ಸ್ಮಿತಾ ಗೆಟಪ್‌ನಲ್ಲಿರುವ ಪೊಟೋವೊಂದನ್ನು ಶೇರ್ ಮಾಡಿದ್ದರು. ಈ ಪೊಟೋಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯಲ್ಲಿ ಕಾಮೆಂಟ್ಸ್‌ಗಳನ್ನು ಮಾಡುತ್ತಿದ್ದು, ಕೆಲವು ಪಾಸಿಟೀವ್ ಆಗಿ ಕೆಲವರು ನೆಗೆಟೀವ್ ಕಾಮೆಂಟ್ಸ್‌ಗಳನ್ನು ಹಾಕುತ್ತಿದ್ದಾರೆ.

Trending

To Top