Film News

ಶೀಘ್ರದಲ್ಲಿಯೇ ಶ್ರೀದೇವಿ ದ್ವಿತೀಯ ಪುತ್ರಿ ಸಿನೆಮಾರಂಗಕ್ಕೆ ಎಂಟ್ರಿ!

ಮುಂಬೈ: ದಕ್ಷಿಣ ಭಾರತದ ಎವರ್‌ಗ್ರೀನ್ ಹಿರೋಯಿನ್ ಎಂದು ಕರೆಯಲಾಗುವ ನಟಿ ಶ್ರೀದೇವಿ ತಮ್ಮ ಮಕ್ಕಳನ್ನು ಸಹ ಸಿನೆಮಾ ರಂಗದಲ್ಲಿ ಮಿಂಚುವಂತೆ ಮಾಡಲು ಆಸೆಯಿಟ್ಟುಕೊಂಡಿದ್ದು, ಮೊದಲನೆ ಮಗಳಾದ ಜಾಹ್ನವಿಯನ್ನು ನಟಿಯನ್ನಾಗಿ ಮಾಡಿದರು. ಆದರೆ ದುರದೃಷ್ಟಾವಶತ್ ಈ ಚಿತ್ರ ಬಿಡುಗಡೆಗೂ ಮುನ್ನವೇ ನಟಿ ಶ್ರೀದೇವಿ ಮೃತಪಟ್ಟರು.

ಈಗಾಗಲೇ ನಟಿ ಜಾಹ್ನವಿ ಕಪೂರ್ ಬಾಲಿವುಡ್ ನ ಯುವ ನಟಿಯರಲ್ಲಿ ಒಬ್ಬರಾಗಿದ್ದು, ಅನೇಕ ಚಿತ್ರಗಳಲ್ಲಿ ನಟಿಸುವ ಆಫರ್‍ಸ್ ಬರುತ್ತಿದೆ ಎನ್ನಲಾಗಿದೆ. ಇದೀಗ ಶ್ರೀದೇವಿ ಯವರ ಎರಡನೇ ಪುತ್ರಿ ಖುಷಿ ಕಪೂರ್ ಸಹ ಸಿನೆಮಾ ರಂಗಕ್ಕೆ ಕಾಲಿಡುತ್ತಿದ್ದು, ಈ ಬಗ್ಗೆ ಅವರ ತಂದೆ ಬೋನಿ ಕಪೂರ್ ರವರೇ ಮಾಹಿತಿ ರಿವೀಲ್ ಮಾಡಿದ್ದಾರೆ. ಇನ್ನೂ ಖುಷಿ ಕಪೂರ್ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದು, ಬಿಗ್ ಬ್ಯಾನರ್ ನಲ್ಲಿಯೇ ಚಿತ್ರ ಮೂಡಿಬರಲಿದೆ ಎನ್ನಲಾಗುತ್ತಿದೆ.

ಇತ್ತೀಚಿಗೆ ಮಾದ್ಯಮವೊಂದಕ್ಕೆ ಮಾಹಿತಿ ನೀಡಿರುವ ನಿರ್ಮಾಪಕ ಬೋನಿ ಕಪೂರ್ ನನ್ನ ಮಗಳಾದ ಖುಷಿಗೆ ನಟನೆಯೆಂದರೇ ಬಹಳ ಆಸಕ್ತಿಯಿದೆ. ಕೆಲವೇ ದಿನಗಳಲ್ಲಿಯೇ ಆಕೆ ನಟಿಯಾಗಲಿದ್ದಾರೆ. ಶೀಘ್ರದಲ್ಲಿಯೇ ದೊಡ್ಡ ಘೋಷಣೆಯೊಂದನ್ನು ಸಹ ಮಾಡಲಿದ್ದೇವೆ ಎಂದಿದ್ದು, ಮತ್ತೊಂದು ವಿಚಾರವನ್ನು ಸಹ ಹಂಚಿಕೊಂಡಿದ್ದಾರೆ. ನಾನು ನನ್ನ ಮಕ್ಕಳ ಸಿನೆಮಾ ನಿರ್ಮಾಣ ಮಾಡುವುದಿಲ್ಲ. ಬೇರೆ ನಿರ್ಮಾಪಕರು ನನ್ನ ಮಗಳ ಸಿನೆಮಾ ನಿರ್ಮಾಣ ಮಾಡಿದರೇ ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ. ಜಾಹ್ನವಿ ಕಪೂರ್ ಹಾಗೂ ಅರ್ಜುನ್ ಕಪೂರ್ ಇವರಿಬ್ಬರ ಚಿತ್ರಗಳನ್ನು ಸಹ ಬೇರೆ ನಿರ್ಮಾಪಕರು ನಿರ್ಮಾಣ ಮಾಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

Trending

To Top