ಶೀಘ್ರದಲ್ಲೇ ನಿಜಜೀವನದಲ್ಲಿ ಡಾಕ್ಟರ್ ಆಗಲಿದ್ದಾರೆ ನಟಿ ಶ್ರೀಲೀಲಾ…!

ದಕ್ಷಿಣ ಭಾರತದ ಕನ್ನಡ ಹಾಗೂ ತೆಲುಗು ಸಿನೆಮಾಗಳಲ್ಲಿ ಅತೀ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಹೊಂದಿರುವ ನಟರಿಯಲ್ಲಿ ಶ್ರೀಲೀಲಾ ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನ ಕಿಸ್ ಎಂಬ ಸಿನೆಮಾ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟ ಈಕೆ ಅತೀ ಕಡಿಮೆ ಸಮಯದಲ್ಲೇ ಹೆಚ್ಚು ಖ್ಯಾತಿ ಗಳಿಸಿಕೊಂಡರು. ಇಂದು (ಜೂನ್14) ನಟಿ ಶ್ರೀಲಿಲಾ ರವರ ಹುಟ್ಟುಹಬ್ಬವಾಗಿದ್ದು, ಇಂದು 21ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳೂ ಸೇರಿದಂತೆ ಸಿನಿರಂಗದ ಅನೇಕ ಸೆಲೆಬ್ರೆಟಿಗಳು ಶ್ರೀಲೀಲಾಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ.

ನಟಿ ಶ್ರೀಲೀಲಾ ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಕೇವಲ ಮೂರೇ ಮೂರು ಸಿನೆಮಾಗಳಲ್ಲಿ ಆದರೂ ಸಹ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮಿದ್ದಾರೆ.  ಸಾಮಾನ್ಯವಾಗಿ ನಟಿಯರು ತಮ್ಮ ವಯಸ್ಸನ್ನು ಹೇಳಲು ಹಿಂದೆ ಮುಂದೆ ನೋಡುತ್ತಾರೆ ಆದರೆ ಶ್ರೀಲೀಲಾ ತಮ್ಮ ವಯಸ್ಸನ್ನು ಹೇಳಿಕೊಂಡಿದ್ದಾರೆ. ಕಳೆದ 2001 ರಲ್ಲಿ ನಟಿ ಶ್ರೀಲೀಲಾ ಜನ್ಮ ತಾಳಿದ್ದಾರೆ. ಇನ್ನೂ ಆಕೆ 20 ವರ್ಷ ತುಂಬುವ ಮೊದಲೆ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ 21 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಟಿ ಶ್ರೀಲೀಲಾಗೆ ಸ್ಟಾರ್‍ ಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿರುವ ಅಭಿಮಾನಿಗಳಿಂದಲೂ ಸಹ ಶುಭಾಷಯಗಳ ಸುರಿಮಳೆಯಾಗುತ್ತಿದೆ.

ಇನ್ನೂ ನಟಿ ಶ್ರೀಲೀಲಾ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿರುವ ಪೆದ್ದಮ್ಮ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಕಿಸ್ ಸಿನೆಮಾ ಮೂಲಕ ಸಿನಿಲೋಕಕ್ಕೆ ಪಾದಾರ್ಪಣೆ ಮಾಡಿದ ಈಕೆ ಮೊದಲನೇ ಸಿನೆಮಾದಲ್ಲಿಯೇ ತಮ್ಮ ಕ್ಯೂಟ್ ಅಭಿನಯದ ಮೂಲಕ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿಕೊಂಡರು. ತಮ್ಮ ಮುದ್ದಾದ ಕ್ಯೂಟ್ ಲುಕ್ ನೊಂದಿಗೆ ಅದ್ಬುತವಾದ ನಟನೆಯೊಂದಿಗೆ ಎಲ್ಲರನ್ನೂ ಮೋಡಿ ಮಾಡಿದ್ದರು. ಇದೀಗ ಶ್ರೀಲೀಲಾ ಸಿನಿ ಜರ್ನಿ ಶರವೇಗದಿಂದ ಮುನ್ನುಗ್ಗುತ್ತಿದೆ. ನಟಿ ಶ್ರೀಲೀಲಾ ಕಿಸ್ ಸಿನೆಮಾದ ಮೂಲಕ ಎಂಟ್ರಿಕೊಟ್ಟು ಬಳಿಕ ರೋರಿಂಗ್ ಸ್ಟಾರ್‍ ಶ್ರೀಮುರಳಿ ಜೊತೆ ಭರಾಟೆ ಸಿನೆಮಾದಲ್ಲಿ ಬಳಿಕ ಬೈಟು ಲವ್ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಇನ್ನೂ ಈ ಮೂರು ಸಿನೆಮಾಗಳಲ್ಲಿ ನಟಿ ಶ್ರೀಲೀಲಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಎಲ್ಲರನ್ನು ರಂಜಿಸಿದ್ದಾರೆ.

ಇನ್ನೂ ಪೆಳ್ಳಿಸಂದD ಎಂಬ ಸಿನೆಮಾ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ. ಮೊದಲನೇ ಸಿನೆಮಾ ಮೂಲಕವೇ ಸ್ಟಾರ್‍ ನಟರ ಜೊತೆ ನಟಿಸುವಂತಹ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಮಾಸ್ ಮಹಾರಾಜ ರವಿತೇಜ ಅಭಿನಯಿಸುತ್ತಿರುವ ಧಮಾಕಾ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಟಿ ಶ್ರೀಲೀಲಾ ಕಾಸ್ಮೆಟಿಕ್ ಡಾಕ್ಟರ್‍ ಆಗುವ ಕನಸಿನಲ್ಲಿದ್ದಾರೆ. ಆಕೆ ಸಿನೆಮಾವನ್ನೆ ಸಂಪೂರ್ಣವಾಗಿ ಸಿನೆಮಾಗಳನ್ನೇ ನಂಬಿಕೊಂಡಿಲ್ಲ. ಬದಲಿಕೆ ಸಿನೆಮಾ ಹೊರತಾಗಿಯೂ ಆಕೆ ಕಾಸ್ಮೆಟಿಕ್ ವಿಭಾಗದಲ್ಲಿ ಎಂ.ಬಿ.ಬಿ.ಎಸ್ ಓದುತ್ತಿದ್ದು, ಶೀಘ್ರದಲ್ಲೇ ಡಾಕ್ಟರ್‍ ಪದವಿಯನ್ನು ಪಡೆದುಕೊಳ್ಳಲಿದ್ದಾರೆ.

Previous articleರಶ್ಮಿಕಾ ತನ್ನ ಬಾಡಿಗಾರ್ಡ್ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.. ಕಾರಣ ಏನು ಗೊತ್ತಾ?
Next articleಶೂಟಿಂಗ್ ನಲ್ಲಿದ್ದ ದೀಪಿಕ್ ದಿಡೀರ್ ನೆ ಆಸ್ಪತ್ರೆಗೆ ಓಡಿದ್ದಾರೆ.. ಏನಾಯ್ತು ದೀಪಿಕಾಗೆ?