ದುಡ್ಡು ಸಂಪಾದನೆಗಾಗಿಯೇ ಸಿನೆಮಾಗಳಲ್ಲಿ ನಟಿಸುತ್ತಿದ್ದೇನೆ ಎಂದ ನಟಿ ಸೋನಾಲಿ ಬಿಂದ್ರೆ….

ಬಾಲಿವುಡ್ ನ ಖ್ಯಾತ ನಟಿ ಸೋನಾಲಿ ಬಿಂದ್ರೆ 90 ರ ದಶಕದಲ್ಲಿ ಮೋಸ್ಟ್ ವಾಟೆಂಡ್ ನಟಿಯಾಗಿದ್ದರು. ಆಗ್ ಎಂಬ ಸಿನೆಮಾ ಮೂಲಕ ಬಾಲಿವುಡ್ ನ ಸಿನಿರಂಗಕ್ಕೆ ಕಾಲಿಟ್ಟ ಈಕೆ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದರು. ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಅನೇಕ ಸಿನೆಮಾಗಳಲ್ಲೂ ಸಹ ಬಣ್ಣ ಹಚ್ಚಿದ ಈಕೆ ಒಂದು ಕಾಲದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ನಟಿ ಸೋನಾಲಿ ಬಿಂದ್ರೆ ಹಾಠಾತ್ ಕ್ಯಾನ್ಸರ್‍ ವ್ಯಾಧಿಗೆ ತುತ್ತಾಗಿ ತುಂಬಾ ಸಂಕಷ್ಟಕ್ಕೆ ತುತ್ತಾಗಿದ್ದರು.

ಆಗ್ ಸಿನೆಮಾ ಮೂಲಕ ಬಾಲಿವುಡ್ ಗೆ, ಪ್ರೀತ್ಸೆ ಸಿನೆಮಾ ಮೂಲಕ ಸ್ಯಾಂಡಲ್ ವುಡ್ ಗೆ ಹಾಗೂ ಮುರಾರಿ ಸಿನೆಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಸೋನಾಲಿ ಬಿಂದ್ರೆ ಮಾಡಿದಂತಹ ಬಹುತೇಕ ಎಲ್ಲಾ ಸಿನೆಮಾಗಳೂ ಸಹ ಬಾಕ್ಸ್ ಆಫಿಸ್ ನಲ್ಲಿ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಂತಹ ಸಿನೆಮಾಗಳೇ ಆಗಿದೆ. ಮುರಾರಿ, ಇಂದ್ರ, ಮನ್ಮಥುಡು, ಶಂಕರ್‍ ದಾದಾ ಎಂಬಿಬಿಎಸ್, ಖಡ್ಗಂ ಹೀಗೆ ಸಾಲು ಸಾಲು ಹಿಟ್ ಸಿನೆಮಾಗಳನ್ನು ನೀಡಿದ ಕೀರ್ತಿ ಸೋನಾಲಿಗೆ ಸಲ್ಲುತ್ತದೆ. ಆ ಮೂಲಕ ಸೊನಾಲಿ ತೆಲುಗು ಸಿನಿರಂಗದಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಕ್ರೇಜ್ ಹಾಗೂ ಸ್ಟಾರ್‍ ಡಮ್ ಸಂಪಾದಿಸಿದಕೊಂಡರು.

ಹೀಗೆ ಬಾಲಿವುಡ್ ಟಾಲಿವುಡ್ ಅನ್ನದೇ ಸಿನಿರಂಗದಲ್ಲಿ ಪುಲ್ ಬ್ಯುಸಿಯಾಗಿರುವ ಸಮಯದಲ್ಲೇ ಈಕೆ ಕ್ಯಾನ್ಸರ್‍ ಬಾದೆಗೆ ತುತ್ತಾಗಿಬಿಟ್ಟರು. ಬಳಿಕ ವಿದೇಶಕ್ಕೆ ತೆರಳಿ ಕ್ಯಾನ್ಸರ್‍ ಚಿಕಿತ್ಸೆಯನ್ನು ಸಹ ಪಡೆದುಕೊಂಡರು. ಕ್ಯಾನ್ಸರ್‍ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿ ಇಂಡಿಯಾಗೆ ವಾಪಸ್ಸು ಬಂದಿದ್ದಾರೆ. ಸದ್ಯ ಸಿನಿರಂಗಕ್ಕೂ ಸಹ ರಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಮೊದಲಿನಂತೆ ಸೊನಾಲಿಗೆ ಸಿನೆಮಾ ಆಫರ್‍ ಗಳು ಬರುತ್ತಿಲ್ಲ. ಆಕೆಯ ವಯಸ್ಸಿಗೆ ತಕ್ಕಂತ ಪಾತ್ರಗಳಿರುವ ಸಿನೆಮಾಗಳಲ್ಲಿ ನಟಿಸಲು ಮಾತ್ರ ಆಸಕ್ತಿ ತೋರುತ್ತಿದ್ದಾರೆ. ದಿ ಬ್ರೋಕನ್ ನ್ಯೂಸ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ಈಕೆ ಕಾಣಿಸಿಕೊಂಡಿದ್ದರು.

ದಿ ಬ್ರೋಕನ್ ನ್ಯೂಸ್ ಎಂಬ ವೆಬ್ ಸೀರಿಸ್ ನ ಪ್ರಮೊಷನ್ ನಿಮಿತ್ತ ಸೊನಾಲಿ ಬಿಂದ್ರೆ ಸಿನೆಮಾಗಳಲ್ಲಿ ಮತ್ತೆ ನಟಿಸಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ಕೆಲವು ದಿನಗಳಿಂದ ಸೊನಾಲಿ ರವರ ಕುಟುಂಬ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದ್ದು, ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ಕೇವಲ ಹಣ ಸಂಪಾದನೆಗಾಗಿಯೇ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಗಿ ಈಕೆ ಹೇಳಿಕೊಂಡಿದ್ದಾರೆ. ಇನ್ನೂ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕೊರಟಾಲ ಶಿವ ಸಿನೆಮಾದಲ್ಲಿ ಸೊನಾಲಿ ನಟಿಸಲಿದ್ದಾರೆ ಎಂಬ ವಾರ್ತೆಗಳು ಬಂದಿದ್ದು, ಇದನ್ನು ನಟಿ ಸೊನಾಲಿ ಅಲ್ಲಗೆಳೆದಿದ್ದಾರೆ.

Previous articleಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ದರ್ಶನ ಕೊಟ್ಟ ಶ್ರಿಯಾ ಶರಣ್.. ಬ್ರಾ ಸೆಲ್ಫಿಗೆ ಫಿದಾ ಆದ ನೆಟ್ಟಿಗರು….
Next articleಡಾ.ರಾಜಕುಮಾರ್ ಮೊಮ್ಮಗಳು ಶೀಘ್ರದಲ್ಲೇ ಟಾಲಿವುಡ್, ಕಾಲಿವುಡ್ ಗೆ ಎಂಟ್ರಿ…!