ಮಕ್ಕಳೊಂದಿಗೆ ಸಂತೋಷದಿಂದ ಕಾಣಿಸಿಕೊಂಡ ಸ್ನೇಹಾ, ಪೊಟೋಸ್ ವೈರಲ್ ….!

ಸಿನಿರಂಗದಲ್ಲಿ ಕೆಲ ನಟಿಯರು ಬಂದ ಕಡಿಮೆ ಸಮಯದಲ್ಲೇ ದೊಡ್ಡ ಕ್ರೇಜ್ ದಕ್ಕಿಸಿಕೊಳ್ಳುತ್ತಾರೆ. ಈ ಸಾಲಿಗೆ ನಟಿ ಸ್ನೇಹಾ ಸಹ ಸೇರುತ್ತಾರೆ. ಮಲಯಾಳಂ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳ ಮೂಲಕ ದೊಡ್ಡ ಫ್ಯಾನ್ ಫಾಲೋಯಿಂಗ್ ದಕ್ಕಿಸಿಕೊಂಡರು. ತೆಲುಗಿನ ಪ್ರಿಯಮೈನ ನೀಕು ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಅದರಲ್ಲೂ ಆಕೆಯ ಕ್ಯೂಟ್ ಸ್ಮೈಲ್ ಯುವಜನತೆಯ ಹೃದಯದಲ್ಲಿ ಈಗಲೂ ಸಹ ಬೇರೂರಿದೆ. ಅಪಾರ ಸಂಖ್ಯೆಯ ತೆಲುಗು ಪ್ರೇಕ್ಷಕರನ್ನು ಗಳಿಸಿಕೊಂಡ ಈಕೆ ದೊಡ್ಡ ದೊಡ್ಡ ಸ್ಟಾರ್‍ ನಟರೊಂದಿಗೆ ತೆರೆ ಹಂಚಿಕೊಂಡು ಬಹುಬೇಡಿಕೆ ನಟಿಯಾಗಿದ್ದರು.

ನಟಿ ಸ್ನೇಹಾ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ನಟ ಪ್ರಸನ್ನ ಎಂಬಾತನನ್ನು ಪ್ರೀತಿಸಿ ಮದುವೆಯಾದರು. ಪ್ರೀತಿಸಿ ದೊಡ್ಡವರ ಅಂಗೀಕಾರದೊಂದಿಗೆ ಮದುವೆಯಾದರು. ಸಿನಿರಂಗದಲ್ಲಿ ಅನ್ಯೋನ್ಯ ಜೋಡಿಗಳ ಸಾಲಿನಲ್ಲಿ ಇವರು ಸಹ ಸೇರುತ್ತಾರೆ. ಮದುವೆಯಾದಾಗಿನಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ ಈ ಜೋಡಿ. ಅವರ ಪ್ರೀತಿಯ ಫಲವಾಗಿ ಒಂದು ಹೆಣ್ಣು, ಒಂದು ಗಂಡಿಗೆ ಜನ್ಮ ನೀಡಿದ್ದಾರೆ. ಇನ್ನೂ ಸ್ನೇಹ ಮದುವೆಯಾದ ಬಳಿಕ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಕೆಲವು ದಿನಗಳ ಬಳಿಕ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ತನ್ನ ಮಕ್ಕಳೊಂದಿಗೆ ಸಂತಸದಿಂದ ಕಾಲ ಕಳೆಯುವ ನಿಟ್ಟಿನಲ್ಲಿ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ತಮ್ಮ ಮಕ್ಕಳೊಂದಿಗೆ ಸಂತೋಷದಿಂದ ಕಳೆಯುವ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿಗಷ್ಟೆ ಸ್ನೇಹ ಮಗನ ಹುಟ್ಟುಹಬ್ಬದಲ್ಲಿ ತೆಗೆದ ಕೆಲವೊಂದು ಪೊಟೋಗಳು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಹುಟ್ಟುಹಬ್ಬದಂದು ಮಕ್ಕಳೊಂದಿಗೆ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಅದರಲ್ಲೂ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಕ್ಕಳೊಂದಿಗೆ ಆಡುತ್ತಿರುವ ಪೊಟೋಗಳು  ಹಾಗೂ ಮಕ್ಕಳಿಗೆ ಹೊಸ ಬಟ್ಟೆ ತೊಡಿಸುವ ಪೊಟೋಗಳು ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಸ್ನೇಹಾ ಅಭಿಮಾನಿಗಳೂ ಸಹ ಈ ಮುದ್ದಾದ ಪೊಟೊಗಳಿಗೆ ಲೈಕ್ ಗಳು ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

ಇನ್ನೂ ನಟಿ ಸ್ನೇಹಾ ವೆಂಕಟೇಶ್, ನಾಗಾರ್ಜುನ್, ರವಿತೇಜ, ಶ್ರೀಕಾಂತ್  ಮೊದಲಾದ ಸ್ಟಾರ್‍ ನಟರ ಜೊತೆಗೆ ಸಿನೆಮಾಗಳನ್ನು ಮಾಡಿದ್ದರು. ಅದರಲ್ಲೂ ಶ್ರೀರಾಮದಾಸು, ಸಂಕ್ರಾಂತಿ, ರಾಧಾಗೋಪಾಲಂ ಮೊದಲಾದ ಹಿಟ್ ಸಿನೆಮಾಗಳನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜೊತೆಗೆ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿಯೂ ಸಹ ರಂಜಿಸಿದ್ದರು.  ಮತ್ತೆ ಆಕೆಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Previous articleಟ್ರಾನ್ಸಫರೆಂಟ್ ಮಾರ್ಡನ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಪ್ರಗ್ಯಾ….!
Next articleಮತ್ತೊಬ್ಬ ಸ್ಟಾರ್ ನಟನ ಸಿನೆಮಾದಲ್ಲಿ ಚಾನ್ಸ್ ಹೊಡೆದ ಮಿಲ್ಕಿ ಬ್ಯೂಟಿ ತಮನ್ನಾ….!