ಬಿಗ್ ಬಾಸ್ ಮೊದಲನೇ ದಿನವೇ ಕಣ್ಣೀರಿಟ್ಟ ಶುಭಾ ಪೂಂಜಾ

ಬೆಂಗಳೂರು: ಉತ್ಸಾಹದಿಂದ ಬಿಗ್ ಬಾಸ್ ಮನೆ ಪ್ರವೇಶಿಸಿದ ನಟಿ ಶುಭಾ ಪೂಂಜಾ ಮೊದಲನೇ ದಿನವೇ ಕಣ್ಣೀರಿಟ್ಟಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಕಣ್ಣಿರಿಡುವ ಪ್ರಸಂಗಗಳು ನಡೆಯುತ್ತಿರುತ್ತೆ. ಆದರೆ ಶುಭಾ ಪೂಂಜಾ ಮೊದಲನೇ ದಿನವೇ ಕಣ್ಣಿರಿಟ್ಟದ್ದಾರೆ.

ಬಿಗ್ ಬಾಸ್ ಸೀಸನ್ ೮ರ ಮೊದಲನೇ ವಾರದ ಕ್ಯಾಪ್ಟನ್ ಆಗಿ ಬ್ರೋ ಗೌಡ ರವರು ಆಯ್ಕೆಯಾಗಿದ್ದರು. ನಂತರ ನಾಲ್ಕು ತಂಡಗಳಾಗಿ ಆಯ್ಕೆ ಮಾಡಿ ಟಾಸ್ಕ್ ನೀಡಲಾಗಿತ್ತು. ಈ ತಂಡಗಳ ಪೈಕಿ ಶುಭಾ ಪೂಂಜಾ ತಂಡ ಸೋತಿದ್ದಾರೆ. ಅದರಲ್ಲೂ ಇವರ ತಂಡದಲ್ಲಿದ್ದ ನಿರ್ಮಲಾ ಸತ್ಯ ಕಳಪೆ ಆಟ ಪ್ರದರ್ಶನ ಮಾಡಿದ್ದಾರೆ ಎಂದು ಬಿಗ್ ಬಾಸ್ ನೇರವಾಗಿ ನಾಮಿನೇಟ್ ಮಾಡಿ, ಲಗೇಜ್ ಪ್ಯಾಕ್ ಮಾಡಿಕೊಳ್ಳುವಂತೆ ಸಹ ಸೂಚನೆ ನೀಡಿದ್ದರು. ಇದರಿಂದ ಶುಭಾ ಪೂಂಜಾ ಕಣ್ಣಿರಿಟ್ಟಿದ್ದಾರೆ. ನಾಮಿನೇಟ್ ಆಗುತ್ತಾರೆ ಎಂಬ ವಿಚಾರ ತಿಳಿಯದೇ ತಪ್ಪು ಮಾಡುಬಿಟ್ವಿ ಎಂದು ಕಣ್ಣಿರು ಸುರಿಸಿದ್ದಾರೆ.

ಇನ್ನೂ ಶುಭಾ ಪೂಂಜಾ ತಂಡದಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಧನುಶ್ರೀ ಹಾಗೂ ನಿರ್ಮಾಲಾ ಸತ್ಯ ಇದ್ದರು. ಇಲ್ಲಿ ಬಿಗ್ ಬಾಸ್ ನಿಮ್ಮ ನಾಲ್ಕು ಸದಸ್ಯರ ಪೈಕಿ ಯಾರು ಕಳಪೆ ಪ್ರದರ್ಶನ ಮಾಡಿದ್ದಾರೆ ಎಂಬುದನ್ನು ಒಮ್ಮತದಿಂದ ಆಯ್ಕೆ ಮಾಡಿ ಎಂದು ಹೇಳಿದ್ದು, ಈ ಆಯ್ಕೆ ಮಾಡಲು ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ ನಿರ್ಮಲಾ ಮಾತ್ರ ಸ್ವ ಇಚ್ಚೆಯಿಂದ ನಾನೇ ಕಳಪೆ ಎಂದು ತೀರ್ಮಾನಿಸಿದರು.  ಇದಕ್ಕೆ ಒಪ್ಪದ ಇತರೆ ತಂಡದ ಸದಸ್ಯರು ನಾಮಿನೇಟ್ ಆದರೆ ನಾಲ್ಕು ಜನ ಇರಲಿ, ಶಿಕ್ಷೆ ಇದ್ದರೆ ನಿರ್ಮಲಾ ಮಾತ್ರ ಅನುಭವಿಸುತ್ತಾರೆ ಎಂದು ಎಲ್ಲರೂ ಬಿಗ್ ಬಾಸ್ ಮುಂದೆ ಹೇಳಿದರು. ಆದರೆ ಬಿಗ್ ಬಾಸ್ ನಿರ್ಮಲಾ ರವರನ್ನು ನಾಮಿನೇಟ್ ಮಾಡಿದರು.

Previous articleBigBoss-8: 2ನೇ ದಿನ 4 ಮಂದಿ ನಾಮಿನೇಟ್
Next articleಹರ್ಭಜನ್ ಹಾಗೂ ಅರ್ಜುನ್ ಸರ್ಜಾ ಅಭಿನಯದ ಮೂವಿ ಟೀಸರ್ ಬಿಡುಗಡೆ