Film News

ಶ್ರುತಿ ಹಾಸನ್ ಪಿಯಾನೋ ನುಡಿಸುತ್ತಿರುವ ವಿಡಿಯೋ ಆಯ್ತು ವೈರಲ್!

ಚೆನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಶ್ರುತಿ ಹಾಸನ್ ಪಿಯಾನೋ ನುಡಿಸುತ್ತಿರುವ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದ್ದು, ಶ್ರುತಿ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬರುತ್ತಿದೆ.

ನಟಿ ಶ್ರುತಿ ಹಾಸನ್ ತಮಿಳು ಸೇರಿದಂತೆ ತೆಲುಗು, ಹಿಂದಿ ಭಾಷೆಗಳಲ್ಲಿ ಮಿಂಚುತ್ತಿದ್ದು, ಇತ್ತೀಚಿಗಷ್ಟೆ ಮಾಸ್ ಮಹಾರಾಜ ರವಿತೇಜ ಅಭಿನಯದ ಕ್ರ್ಯಾಕ್ ಸಿನೆಮಾದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇತ್ತೀಚಿಗೆ ಕೆಲವು ದಿನಗಳಿಂದ ಸಿನಿಮಾ ಕ್ಷೇತ್ರದಿಂದ ದೂರವುಳಿದಿದ್ದ ಶ್ರುತಿ ಇದೀಗ ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶ್ರುತಿ ಹಾಸನ್ ರವರ ವಿಡಿಯೋ ವೈರಲ್ ಆಗುತ್ತಿದೆ. ಅಂದಹಾಗೆ ಶ್ರುತಿ ಪಿಯಾನೋ ಸಂಗೀತ ಸಾಧನವನ್ನು ಖರೀದಿಸಿದ್ದು, ಅದನ್ನು ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇನ್ನೂ ಶ್ರುತಿ ಹಾಸನ್ ರವರಿಗೆ ಸಂಗೀತ ಎಂದರೇ ಪಂಚಪ್ರಾಣವಾಗಿದ್ದು, ಅನೇಕ ಹಾಡುಗಳನ್ನು ಸಹ ಸ್ವತಃ ಅವರೇ ಹಾಡಿದ್ದಾರೆ. ಇದೀಗ ಹೊಸ ಪಿಯಾನೋ ಖರೀದಿಸಿ ಅದನ್ನು ನುಡಿಸುತ್ತಾ ಆನಂದಿಸುತ್ತಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನನ್ನ ಹೊಸ ಸ್ನೇಹಿತೆ ಪಿಯಾನೋ, ನಾನು ಅವಳಿಗೆ ಏನಂತಾ ಹೆಸರನ್ನಿಡಲಿ, ಬಹುಶಃ ಲೈರಾ? ಎಂದು ಇಡಲೇ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಶ್ರುತಿ ಹಾಸನ್ ಈ ವಿಡಿಯೋದಲ್ಲಿ ಬ್ಯಾಕ್ ಲೆಸ್ ಡ್ರೆಸ್ ಧರಿಸಿದ್ದು, ಸಖತ್ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ವಿಡಿಯೋಗೆ ಶ್ರುತಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ನಟಿ ಶ್ರುತಿ ಹಾಸನ್ ಹಾಗೂ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಸಿನೆಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೆ ತೆರೆಗೆ ಬರಲಿದ್ದು, ಬಾಲಿವುಡ್ ನ ’ದಿ ಪವರ್’ಎಂಬ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ.

Trending

To Top