Film News

ಸಲಾರ್ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಆಯ್ಕೆ

ಹೈದರಾಬಾದ್: ಹೈವೋಲ್ಟೇಜ್ ಸಿನೆಮಾ ಎಂದೇ ಕರೆಯಲಾಗುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಲಾರ್ ಚಿತ್ರದ ನಾಯಕಿ ಆಯ್ಕೆ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಇದೀಗ ಶ್ರುತಿ ಹಾಸನ್ ರವರನ್ನು ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ.

ದಕ್ಷಿಣ ಭಾರತದಲ್ಲಿ  ಬಹುಬೇಡಿಕೆ ನಟಿಯರಲ್ಲೊಬ್ಬರಾದ ಶ್ರುತಿ ಹಾಸನ್ ಪ್ರಭಾಸ್ ಜೊತೆ ಹೆಜ್ಜೆ ಹಾಕುವುದು ಖಚಿತವಾಗಿದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರಲಿರುವ ಸಲಾರ್ ಚಿತ್ರ ಕೆಲವು ದಿನಗಳ ಹಿಂದೆಯಷ್ಟೆ ಮೂಹೂರ್ತ ಸಹ ನೆರವೇರಿತ್ತು. ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಇದೀಗ ಚಿತ್ರದಲ್ಲಿ ನಾಯಕಿ ಯಾರೆಂಬುದನ್ನು ಬಹಿರಂಗ ಪಡಿಸುವ ಮೂಲಕ ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ ಸಲಾರ್ ಚಿತ್ರತಂಡ.

ಇನ್ನೂ ಈ ಚಿತ್ರದ ಮೂಲಕ ಪ್ರಭಾಸ್ ಹಾಗೂ ಶ್ರುತಿ ಹಾಸನ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದು, ಇಬ್ಬರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದು ನಟಿ ಶ್ರುತಿ ಹಾಸನ್ 35 ನೇ ವಸಂತಕ್ಕೆ ಕಾಲಿಡುತ್ತಿದ್ದು, ಶ್ರುತಿ ಹಾಸನ್ ರವರಿಗೆ ಚಿತ್ರತಂಡ ಉಡುಗೊರೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಹೊಂಬಾಳೆ ಸಂಸ್ಥೆ ಶ್ರುತಿ ಹಾಸನ್ ರವರು ಸಲಾರ್ ಸಿನೆಮಾ ನಾಯಕಿಯೆಂದು ಅಧಿಕೃತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದು, ನೀವು ತೆರೆಮೇಲೆ ನಟಿಸುವುದನ್ನು ನೋಡಲು ಕಾತುರರಾಗಿದ್ದೇವೆ ಎಂಬ ಪೋಸ್ಟರ್ ಶೇರ್ ಮಾಡಿದ್ದಾರೆ.

ಜೊತೆಗೆ ನಟ ಶ್ರುತಿ ಹಾಸನ್ ರವರಿಗೆ ಪ್ರಭಾಸ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಈ ಕುರಿತು ಫೇಸ್‌ಬುಕ್ ನಲ್ಲಿ ಪ್ರಭಾಸ್ ಹುಟ್ಟುಹಬ್ಬದ ಶುಭಾಷಯಗಳು ಶ್ರುತಿ ಹಾಸನ್, ನಾನು ನಿಮ್ಮ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಸಹ ಅಭಿನಯಿಸಲಿದ್ದಾರೆ ಎನ್ನಲಾಗಿದ್ದು, ಚಿತ್ರದ ಶೂಟಿಂಗ್ ಜ.29 ರಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

Trending

To Top