ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿದ ಶ್ರುತಿ ಹಾಸನ್.. ವೈರಲ್ ಆಯ್ತು ಆಕೆಯ ಹೇಳಿಕೆಗಳು….!

ದಕ್ಷಿಣ ಭಾರತದಲ್ಲಿ ಕ್ರೇಜಿ ಹಾಗೂ ಬಹುಬೇಡಿಕೆಯ ನಟಿಯರಲ್ಲಿ ಶ್ರುತಿ ಹಾಸನ್ ಸಹ ಒಬ್ಬರಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‍ ನಟರ ಜೊತೆಗೆ ಸಿನೆಮಾಗಳನ್ನು ಮಾಡುತ್ತಾ ಕ್ರೇಜ್ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಕಾಲಿವುಡ್ ಖ್ಯಾತ ನಟ ಕಮಲ್ ಹಾಸನ್ ಪುತ್ರಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸಹ ಆಕೆ ಮಾತ್ರ ತಮ್ಮ ಪ್ರತಿಭೆಯ ಮೂಲಕವೇ ಖ್ಯಾತಿ ಗಳಿಸಿಕೊಂಡರು. ನಟಿಯಾಗಿ, ಸಿಂಗರ್‍ ಆಗಿಯೂ ಆಕೆ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿಕೊಡಿದ್ದಾರೆ. ಸದ್ಯ ಈಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಅವು ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಹೆಚ್ಚು ಸಕ್ರಿಯರಾಗಿರುತ್ತಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಕಾಲಕಳೆಯುವ ಆಕೆ ಅನೇಕ ಪೊಟೋಗಳನ್ನು, ವಿಡಿಯೋಗಳನ್ನು ಸೇರಿದಂತೆ ತಮ್ಮ ಬಗೆಗಿನ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿರುತ್ತಾರೆ. ನಟಿಯಾಗಿ ಹಾಗೂ ಗಾಯಕಿಯಾಗಿ ಫೇಮ್ ದಕ್ಕಿಸಿಕೊಂಡ ನಟಿ ಶ್ರುತಿ ಹಾಸನ್ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಅಭಿಮಾನಿಗಳೊಂದಿಗೆ ಆಸ್ಕ್ ಮಿ ಎನಿಥಿಂಗ್ ಎಂಬ ಸೆಷನ್ ಸಹ ಮಾಡುತ್ತಿರುತ್ತಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಹ ನೀಡುತ್ತಿರುತ್ತಾರೆ. ಇನ್ನೂ ಇತ್ತೀಚಿಗೆ ನಟಿ ಶ್ರುತಿ ಹಾಸನ್ ಕೆಲವೊಂದು ಹೇಳಿಕೆಗಳನ್ನು ನಿಡಿದ್ದು ಅವು ಎಲ್ಲೆಡೆ ವೈರಲ್ ಆಗುತ್ತಿದೆ. ಆಕೆ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಈ ಹೇಳಿಕೆಗಳು ಟ್ರೆಂಡ್ ಆಗಿದೆ.

ಇನ್ನೂ ನಟಿ ಶ್ರುತಿ ಹಾಸನ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗ ಕೆಲವೊಂದು ವೈಯುಕ್ತಿಕ ಕಾರಣಗಳಿಂದಾಗಿ ಸಿನೆಮಾಗಳಿಂದ ದೂರ ಉಳಿದಿದ್ದರು. ಕ್ರಾಕ್ ಸಿನೆಮಾದ ಮೂಲಕ ಮತ್ತೆ ಎಂಟ್ರಿಕೊಟ್ಟ ಈಕೆ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಸಿನೆಮಾದಲ್ಲಿ ಕಾಣಿಸಿಕೊಂಡು ಮತ್ತೆ ಸಕ್ಸಸ್ ಕಂಡುಕೊಂಡರು. ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ಸದ್ಯ ಪ್ರಭಾಸ್ ಜೊತೆ ಸಲಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ, ಗೋಪಿಚಂದ್, ಮೆಗಾಸ್ಟಾರ್‍ ಚಿರಂಜೀವಿ ಸಿನೆಮಾಗಳಲ್ಲೂ ಸಹ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯ ನಡುವೆಯೇ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್ನೂ ಈಕೆ ಹಂಚಿಕೊಂಡ ಪೊಟೋ ಒಂದು ಇದೀಗ ವೈರಲ್ ಆಗಿದೆ.

ನಟಿ ಶ್ರುತಿ ಕಠಿಣವಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಶೇರ್‍ ಮಾಡಿದ್ದಾರೆ. ಸದ್ಯ ನಾನು ಪಿಸಿಒಎಸ್, ಎಂಡೊಮೆಟೆರಿಯಾಸಿಸ್ ಎಂಬ ಹಾರ್ಮೋನ್ ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಈ ಸಮಸ್ಯೆಯಿಂದ ಹೊರಬರಲು ತುಂಬಾನೆ ಹೋರಾಟ ಮಾಡುತ್ತಿದ್ದೇನೆ. ಸರಿಯಾಗಿ ತಿನ್ನುವುದು, ಚೆನ್ನಾಗಿ ನಿದ್ದೆ ಮಾಡುವುದು ನನ್ನ ಕೆಲಸವನ್ನು ಆಸ್ವಾದಿಸುವ ಮೂಲಕ ನನ್ನ ಮನಸ್ಸನ್ನು ದೃಢವಾಗಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಹಾರ್ಮೊನ್ ಗಳ ಸಮಸ್ಯೆಯಿಂದ ಹೊರಬರುವುದು ಒಂದು ದೊಡ್ಡ ಸವಾಲ್ ಎಂಬುದು ಎಲ್ಲ ಮಹಿಳೆಯರಿಗೂ ತಿಳಿದಿದೆ. ಆದರೆ ನಾನು ಇದನ್ನು ಸಮಸ್ಯೆಯಾಗಿ ಕಾಣದೇ, ಮಹಿಳೆಯರಲ್ಲಿ ನಡೆಯುವ ಸಹಜ ಪ್ರಕ್ರಿಯೆ ಎಂದು ಭಾವಿಸುತ್ತೇನೆ.ಸದ್ಯ ನಾನು ಶಾರೀರಿಕವಾಗಿ ಫರ್‍ಫೆಕ್ಟ್ ಆಗಿಲ್ಲ. ಆದರೆ ಮಾನಸಿಕವಾಗಿ ತುಂಭಾ ದೃಢವಾಗಿ ಇದ್ದೇನೆ ಎಂದು ಹೇಳುವ ಮೂಲಕ ಇತರೆ ಮಹಿಳೆಯರಿಗೂ ಸ್ಪೂರ್ತಿನೀಡುವ  ಮಾತುಗಳನ್ನಾಡಿದ್ದಾರೆ.

Previous articleಅಬ್ಬಾ ನಿರ್ದೇಶಕನೇ ನಟಿಯ ಅರೆನಗ್ನ ಪೊಟೋ ಶೇರ್ ಮಾಡಿ, ಜೊತೆಗೆ ಹಾಟ್ ಕಾಮೆಂಟ್ ಬೇರೆ…!
Next articleಅಪ್ಪನ ಹಾಗೇ ಪೋಸ್ ಕೊಟ್ಟ ಜೂನಿಯರ್ ಯಶ್, ಕೆಜಿಎಫ್ ಸಿನೆಮಾದಲ್ಲಿ ಯಶ್ ನಂತೆ ಸ್ಟೈಲಿಷ್ ಲುಕ್.!