Film News

ಮದುವೆ ಕುರಿತು ಅಭಿಮಾನಿ ಕೇಳಿದ ಪ್ರಶ್ನೆಗೆ ಡಿಫರೆಂಟ್ ಆಗಿ ಉತ್ತರ ನೀಡಿದ ನಟಿ

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ಅಭಿಮಾನಿಗಳಿಗಾಗಿ ಲೈವ್‌ನಲ್ಲಿ ಬರುತ್ತಿರುತ್ತಾರೆ. ಈ ಹಾದಿಯಲ್ಲೇ ಮದುವೆಯ ಕುರಿತು ಪ್ರಶ್ನೆ ಕೇಳಿದ ಅಭಿಮಾನಿಯೊಬ್ಬರಿಗೆ ಡಿಫರೆಂಟ್ ಆಗಿ ಉತ್ತರ ನೀಡಿದ್ದಾರೆ ಶ್ರುತಿ ಹಾಸನ್.

ಇತ್ತೀಚಿಗಷ್ಟೆ ನಟಿ ಶ್ರುತಿ ಹಾಸನ್ ತಮ್ಮ ಇನ್ಸ್ಟಾ ಫಾಲೋವರ್ಸ್‌ಗೆ ಏನಾದರೂ ಪ್ರಶ್ನೆಗಳನ್ನು ಕೇಳಿ ಎಂದು ಪೋಸ್ಟ್ ಹಾಕಿದ್ದರು. ನಟಿಯ ಈ ಪೋಸ್ಟ್ ಶೇರ್ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಇನ್ನೂ ಶ್ರುತಿ ಮಾತ್ರ ಕೆಲವೊಂದು ಆಯ್ದ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಿದ್ದಾರೆ. ಈ ಪೈಕಿ ಮದುವೆಯ ಕುರಿತು ಅಭಿಮಾನಿ ಕೇಳಿದ ಪ್ರಶ್ನೆಗೆ ಡಿಫರೆಂಟ್ ಆಗಿ ಉತ್ತರ ನೀಡಿದ್ದಾರೆ.

ಇನ್ನೂ ಶ್ರುತಿ ಹಾಸನ್ ರವರಿಗೆ ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದು, ಇದಕ್ಕೆ ಕಣ್ಣುಗಳಲ್ಲೇ ಶ್ರುತಿ ಉತ್ತರ ನೀಡಿದ್ದಾರೆ. ಇನ್ನೂ ನನ್ನ ಕಣ್ಣುಗಳನ್ನು ರೋಲ್ ಮಾಡಲು ಆಗುವುದಿಲ್ಲ ಎಂದು ಉತ್ತರ ನೀಡಿದ್ದಾರೆ. ಇದೇ ರೀತಿಯಲ್ಲಿ ಮತ್ತೊಬ್ಬ ಅಭಿಮಾನಿ ನಮ್ಮಿಬ್ಬರ ಮದುವೆ ಯಾವಾಗ ಎಂದು ಕೇಳಿದ್ದಾನೆ. ಇದಕ್ಕೆ ನೀವು ರಾಂಗ್ ನಂಬರ್ ಗೆ ಕರೆ ಮಾಡಿದ್ದೀರಿ ಎಂದಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಬ್ಬ ಅಭಿಮಾನಿ ನಾನು ನಿಮ್ಮನ್ನು ಮದುವೆಯಾಗಲು ಸುಲಭದ ದಾರಿ ಯಾವುದೆಂದು ಕೇಳಿದ್ರೆ ಸ್ಟಾಪಿಟ್ ಎಂದು ಉತ್ತರಿಸಿದ್ದಾರೆ.

ಇನ್ನೂ ಶ್ರುತಿ ಹಾಸನ್ ಕಾಲಿವುಡ್ ನ ಖ್ಯಾತ ನಟ ವಿಜಯ್ ಸೇತುಪತಿ ಅಭಿನಯದ ಲಾಂಬಮ್ ಎಂಬ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಭ್ ಚಿತ್ರದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.

Trending

To Top