Film News

ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಶ್ರುತಿ ಹಾಸನ್!

ಚೆನೈ: ಕಾಲಿವುಡ್‌ನ ಖ್ಯಾತ ನಟ ಕಮಲ್ ಹಾಸನ್ ರವರ ಪುತ್ರಿ ಶ್ರುತಿ ಹಾಸನ್ ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಶ್ರುತಿ ಹಾಸನ್ ರವರ ಇನ್ಸ್ಟಾಗ್ರಾಂ ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ಶಾಂತವಾಗಿ ಉತ್ತರ ನೀಡಿದ್ದಾರೆ.

 

ಇನ್ಸ್ಟಾಗ್ರಾಂನಲ್ಲಿ ಶ್ರುತಿ ಹಾಸನ್ ರವರಿಗೆ ಒಬ್ಬ ಅಭಿಮಾನಿ ಮದುವೆಯ ಬಗ್ಗೆ ಪ್ರಸ್ರಾಪಿಸಿದ್ದಾರೆ. ನೀವು ಈ ವರ್ಷ ಮದುವೆಯಾಗುವ ಸಾಧ್ಯತೆ ಇದೆಯೇ ಎಂದು ಕೇಳಿದ್ದು, ಅದಕ್ಕೆ ಶ್ರುತಿ ಕೇವಲ ಒಂದೇ ಪದದಲ್ಲಿ ಇಲ್ಲ ಎಂದು ಉತ್ತರಿಸಿದ್ದಾರೆ. ಇನ್ನೊಬ್ಬ ಅಭಿಮಾನಿ ನಿಮ್ಮ ಎಕ್ಸ್ ಬಾಯ್‌ಪ್ರೆಂಡ್ ನನ್ನು ದ್ವೇಷಿಸುತ್ತಿರಾ ಎಂದು ಸಹ ಕೇಳಿದ್ದಾರೆ. ಅದಕ್ಕೆ ಉತ್ತರ ನೀಡಿದ ಶ್ರುತಿ ನಾನು ಯಾರನ್ನು ದ್ವೇಷ ಮಾಡುವುದಿಲ್ಲ, ಬದಲಿಗೆ ಆಳವಾದ ಎಮೋಷನ್ ನನಗಿದೆ ಎಂದು ಕೂಲ್ ಆಗೆ ಉತ್ತಿರಿಸಿದ್ದಾರೆ. ಅಂದಹಾಗೆ ಕೆಲವು ವರ್ಷಗಳ ಹಿಂದೆ ವಿದೇಶಿ ಸ್ನೇಹಿತ ಮೈಕಲ್ ಕೊರ್ಸಲ್ ರವರೊಂದಿಗೆ ರಿಲೇಷನ್‌ಶಿಪ್ ಇತ್ತು ಎನ್ನಲಾಗಿತ್ತು. ಇದೀಗ ಅವರಿಬ್ಬರೂ ಬೇರೆಯಾಗಿದ್ದಾರಂತೆ.

ಇದೇ ರೀತಿಯಾಗಿ ಮತ್ತೊಬ್ಬ ಅಭಿಮಾನಿಯಿಂದ ಪ್ರಶ್ನೆ ಬಂದಿದ್ದು, ನೀವು ನಿಮ್ಮ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಾರಾ? ಎಂದು ಕೇಳಿದ್ದಾರೆ. ಹೌದು ಕಳೆದ 11 ವರ್ಷಗಳ ಹಿಂದೆ ನಾನು ನನ್ನ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದೇನೆ. ಅದನ್ನು ಬಿಟ್ಟು ಬೇರೆ ಕೇಳಿ ಎಂದಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾದ ಕ್ರ್ಯಾಕ್ ಸಿನೆಮಾ ಕುರಿತಂತೆ ಸಹ ಪ್ರಶ್ನೆ ಬಂದಿತ್ತು. ಸಿನೆಮಾ ಪ್ರಮೋಷನ್ ಕಾರ್ಯಕ್ರಮಕ್ಕೆ ತಾವು ಗೈರು ಆಗಿದ್ದು ಯಾಕೆ ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿದ ಶ್ರುತಿ ಕ್ರ್ಯಾಕ್ ಸಿನೆಮಾ ಪ್ರಮೋಷನ್ ಕಾರ್ಯಕ್ರಮಕ್ಕೆ ಭಾಗಯಾಗದೇ ಇರುವುದು ನನಗೆ ಬೇಸರ ಇದೆ. ಸಿನೆಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿ ನನಗಿರಲಿಲ್ಲ ಎಂದಿದ್ದಾರೆ.

Trending

To Top