ಹೈದರಾಬಾದ್: ತೆಲುಗು ಟೆಲಿವಿಷನ್ ರಂಗದಲ್ಲಿ ಯಾಂಕರ್ ಆಗಿ ತನ್ನದೇ ಆದ ಕ್ರೇಜ್ ಹೆಚ್ಚಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡಿರುವ ಶ್ರೀಮುಖಿ ಕೆಲವೊಂದು ಪೊಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ನಟಿ ಶ್ರೀಮುಖಿ ತುಂಬಾ ದಿನಗಳ ನಂತರ ಗ್ಲಾಮರಸ್ ಹಾಗೂ ರೊಮ್ಯಾಂಟಿಕ್ ಪೊಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ಪೊಟೋಗಳನ್ನು ನೋಡಿದ ಕೂಡಲೇ ಎಲ್ಲರೂ ಶಾಕ್ ಆಗಿದ್ದಾರೆ. ನ್ಯೂಸ್ ಪೇಪರ್ ಗಳನ್ನು ಸುತ್ತಿಕೊಂಡು ತನ್ನ ಮೈಮಾಟವನ್ನು ಪ್ರದರ್ಶಿಸುವ ಹಾಗೆ ಕೆಲವೊಂದು ಪೊಟೋಗಳನ್ನು ಶೇರ್ ಮಾಡಿದ್ದಾರೆ. ಆದರೆ ನ್ಯೂಸ್ ಪೇಪರ್ ಡಿಸೈನ್ ನಿಂದ ಕೂಡಿದ ಉಡುಪನ್ನು ಸಿದ್ದಪಡಿಸಿಕೊಂಡ ಶ್ರೀಮುಖಿ ನೂತನ ರೀತಿಯಲ್ಲಿ ದರ್ಶನ ಕೊಟ್ಟಿದ್ದಾರೆ.
ತೆಲುಗು ಪಟಾಸ್ ಎಂಬ ಕಾರ್ಯಕ್ರಮದ ಮೂಲಕ ಹೆಸರು ಗಳಿಸಿದ ಶ್ರೀಮುಖಿ ಕೆಲವು ದಿನಗಳಿಂದ ರಿಯಾಲಿಟಿ ಶೋ ಗಳಿಂದ ದೂರವುಳಿದಿದ್ದಾರೆ. ಇನ್ನೂ ಇದೀಗ ಶ್ರಿಮುಖಿ ಶೇರ್ ಮಾಡಿದ ಪೊಟೋಗಳು ಈ ಹಿಂದಿನ ಪೊಟೋ ಶೂಟ್ಗಳಲ್ಲಿ ತೆಗೆದ ಪೋಸ್ಗಳಿಗಿಂತ ಭಿನ್ನವಾಗಿದೆ. ಕೆಲ ನೆಟ್ಟಿಗರು ನೆವರ್ ಬಿಪೋರ್, ಎವರ್ ಆಫರ್ ಎಂಬ ಕಾಮೆಂಟ್ಸ್ಗಳನ್ನು ಸಹ ಮಾಡುತ್ತಿದ್ದಾರೆ.
ಇನ್ನೂ ಈ ಪೊಟೋಗಳನ್ನು ಶೇರ್ ಮಾಡುವುದರ ಜೊತೆಗೆ ಫೆಬ್ರವರಿ 14, ಲವರ್ಸ್ ಡೇ ದಿನದಂದು ಒಂದು ಗ್ರೇಟ್ ನ್ಯೂಸ್ ನೀಡಲಿದ್ದೇನೆ ಎಂದು ಸಹ ತಿಳಿಸಿದ್ದಾರೆ. ಶ್ರೀಮುಖಿ ಈ ಪೊಸ್ಟ್ ತುಂಬಾ ಕುತೂಹಲ ಕೆರಳಿಸಿದ್ದು, ಶ್ರೀಮುಖಿ ಹೊಸ ಸಿನೆಮಾ ಘೊಷಣೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿದೆ. ಅಂದಹಾಗೆ ಸದ್ಯ ಶ್ರೀಮುಖಿ ಎರಡು ತೆಲುಗು ಸಿನೆಮಾಗಳಲ್ಲಿ ನಟಿಸುತ್ತಿರುವುದಾಗಿ ತಿಳಿದುಬಂದಿದೆ.
