ಬೆತ್ತಲೆ ಪೊಟೋ ಕೇಳಿದ ನೆಟ್ಟಿಗನಿಗೆ ಶಾಕಿಂಗ್ ಉತ್ತರ ಕೊಟ್ಟ ಶ್ರೀಮುಖಿ!

ಹೈದರಾಬಾದ್: ತೆಲುಗು ಸಿನಿರಂಗದ ನಟಿ ಹಾಗೂ ಟೆಲೆವಿಜನ್ ಆಂಕರ್ ಶ್ರೀಮುಖಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಹಲವು ಪೊಟೋಗಳನ್ನು ಸಹ ಹಾಕುತ್ತಾ ತಮ್ಮ ಅಭಿಮಾನಿಗಳಿಗೆ ಮತಷ್ಟು ಹತ್ತಿರವಾಗುತ್ತಿರುತ್ತಾರೆ. ಇದೀಗ ಶ್ರೀಮುಖಿಗೆ ಒಬ್ಬ ನೆಟ್ಟಿಗೆ ಬೆತ್ತಲೆ ಪೊಟೋ ಕೇಳಿದ್ದು, ಇದಕ್ಕೆ ಶಾಕಿಂಗ್ ಉತ್ತರ ನೀಡಿದ್ದಾಳೆ ಶ್ರೀಮುಖಿ.

ನಟಿ ಶ್ರೀಮುಖಿ ತಮ್ಮ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಯಲ್ಲಿ ಸಕ್ರಿಯರಾಗಿದ್ದು, ವಿವಿಧ ಭಂಗಿಯಲ್ಲಿ ಪೊಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಇನ್ಸ್ಟಾಗ್ರಾಂನಲ್ಲಿ ಕೆಲವೊಂದು ಪೊಟೋಗಳನ್ನು ಹಾಕಿದ್ದರು. ಜೊತೆಗೆ ನೀವು ಯಾವುದೇ ಪೊಟೋ ಕೇಳಿದರೂ ಕಳಿಸುತ್ತೇನೆ ಎಂತಲೂ ಶೇರ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನೆಟ್ಟಿಗನೊಬ್ಬ ನಿಮ್ಮ ನೆಕೆಡ್ ಪೊಟೋ ಕಳಿಸಿ ಎಂದಿದ್ದಾರೆ. ಹಿಂದೆ ಮುಂದೆ ಯೋಚಿಸದೇ ಶ್ರೀಮುಖಿ ಪೊಟೋಗಳನ್ನು ಸಹ ಕಳುಹಿಸಿ ಬಿಟ್ಟಿದ್ದಾರೆ.

ಅಂದಹಾಗೆ ಆಕೆ ಸೆಂಡ್ ಮಾಡಿದ್ದು ಆಕೆಯ ನೆಕೆಡ್ ಪೊಟೋಗಳಲ್ಲ. ಬದಲಿಗೆ ಕಾಂಟ್ರವರ್ಸಿ ನಿರ್ದೇಶಕ ಎಂತಲೇ ಕರೆಯುವ ರಾಮ್ ಗೋಪಾಲ್ ವರ್ಮಾ ನಿರ್ದೇಶನ ನಗ್ನಂ ಎಂಬ ಚಿತ್ರಕ್ಕೆ ಸಂಬಂಧಿಸಿದ ಪೊಟೋಗಳನ್ನು ಕಳಿಸಿದ್ದಾರೆ. ಈ ಪೊಟೋಗಳನ್ನು ಕಂಡ ನೆಟ್ಟಿಗನ ಮೈಂಡ್ ನಿಜಕ್ಕೂ ಬ್ಲಾಕ್ ಆಗಿರುತ್ತದೆ. ಇತ್ತೀಚಿಗಷ್ಟೆ ನಟಿ ಶ್ರೀಮುಖಿ ಗೋವಾದಲ್ಲಿನ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

ಇನ್ನೂ ಆಂಕರ್ ಶ್ರೀಮುಖಿ ತನ್ನದೇ ಆದ ವಾಕ್ ಚಾರ್ತುಯ್ಯದಿಂದ ನಾನ್ ಸ್ಟಾಪ್ ಡೈಲಾಗ್‌ಗಳ ಮೂಲಕ ಯಾರಾದರೂ ಫಿದಾ ಆಗುವಂತೆ ಮಾಡಬಲ್ಲವಳಾಗಿದ್ದಾಳೆ. ಜುಲಾಯಿ, ನೇನು ಶೈಲಜಾ, ನಾನಿ ಜೆಂಟಲ್‌ಮೆನ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಶ್ರೀಮುಖಿ ನಂತರ ಟೆಲೆವಿಜನ್ ನಲ್ಲಿ ಆಂಕರ್ ಆಗಿ ಖ್ಯಾತಿ ಗಳಿಸಿದ್ದಾರೆ.

Previous articleಸಿನಿಮಾರಂಗದಲ್ಲಿ 11 ವರ್ಷ ಪೂರೈಸಿದ ಸಮಂತಾ!
Next articleಶಾರ್ಟ್ಸ್ ಡ್ರೆಸ್ಗಳನ್ನು ಧರಿಸಿ, ಹಾಟ್ ಪೋಸ್ ಕೊಟ್ಟ ನಿಹಾರಿಕಾ!