ಟಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ಕಿಸ್ ಚಿತ್ರದ ನಟಿ ಶ್ರಿಲೀಲಾ!

ಬೆಂಗಳೂರು: ಟಾಲಿವುಡ್ ನ ಖ್ಯಾತ, ದಿಗ್ಗಜ ನಿರ್ದೇಶಕ, ನಿರ್ಮಾಪಕರಾದ ಕೆ.ರಾಘವೇಂದ್ರರಾವ್ ನಿರ್ಮಾಣ ಮಾಡುತ್ತಿರುವ ಚಿತ್ರವೊಂದರಲ್ಲಿ ಸ್ಯಾಂಡಲ್ ವುಡ್‌ನ ನಟಿ ಶ್ರಿಲೀಲಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಕೆ.ರಾಘವೇಂದ್ರ ರಾವ್ ನಿರ್ದೇಶನದಲ್ಲಿ ಬಂದ 1990 ರ ದಶಕದಲ್ಲಿ ಪ್ರೇಮಿಗಳ ಮನಗೆದ್ದ ಚಿತ್ರವೊಂದರ ಮುಂದಿನ ಭಾಗವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ಕನ್ನಡ ಸಿನಿರಂಗದ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಅಂದಹಾಗೆ ಆ ಚಿತ್ರ ಪೆಳ್ಳಿಸಂದಡಿ-೨. ಶ್ರೀಕಾಂತ್ ಅಭಿನಯದ ಪೆಳ್ಳಿಸಂದಂಡಿ ಚಿತ್ರ 1996 ರಲ್ಲಿ ತೆರೆಕಂಡು ಭಾರಿ ಹಿಟ್ ಹೊಡೆದಿತ್ತು. ಈ ಚಿತ್ರದಲ್ಲಿ ಶ್ರೀಕಾಂತ್ ಜೊತೆಗೆ ರವಳಿ ಹಾಗೂ ದೀಪ್ತಿ ಭಟ್ನಾಗರ್ ನಾಯಕಿಯಾಗಿ ನಟಿಸಿದ್ದರು. ಪ್ರಸ್ತುತ ಈ ಚಿತ್ರ ೨೫ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆ.ರಾಘವೇಂದ್ರ ರಾವ್ ರವರು ಪೆಳ್ಳಿಸಂದಡಿ-2 ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಇನ್ನೂ ಈ ಚಿತ್ರದ ನಾಯಕಿಯನ್ನಾಗಿ ನಟಿ ಶ್ರೀಲೀಲಾ ರವರನ್ನು ಅಧಿಕೃತವಾಗಿ ಘೋಷಣೆ ಸಹ ಮಾಡಲಾಗಿದೆ.

ಮತ್ತೋಂದು ಇಂಟ್ರಸ್ಟಿಂಗ್ ವಿಚಾರವೆಂದರೇ ಪೆಳ್ಳಿಸಂದಡಿ-2 ಚಿತ್ರದ ನಾಯಕನ ಬಗ್ಗೆ. ಹೌದು ಪೆಳ್ಳಿಸಂದಡಿ ಚಿತ್ರದಲ್ಲಿ ಶ್ರೀಕಾಂತ್ ರವರ ಅಭಿನಯ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಮುಟ್ಟುವಲ್ಲಿ ಯಶಸ್ವಿಯಾಗಿತ್ತು. ಇದೀಗ ಪೆಳ್ಳಿಸಂದಡಿ-2 ಚಿತ್ರಕ್ಕೆ ನಾಯಕನ ಮೇಲೂ ಸಹ ಭಾರಿ ನೀರಿಕ್ಷೆಯಿದ್ದು, ನಟ ಶ್ರೀಕಾಂತ್ ಮಗ ರೋಷನ್ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನೂ ಈ ಚಿತ್ರವನ್ನು ಗೌರಿ ರೋಣಂಕಿ ನಿರ್ದೇಶಿಸುತ್ತಿದ್ದು, ಕೆ.ರಾಘವೇಂದ್ರ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಕನ್ನಡ ಚಿತ್ರದ ಮೂಲಕ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟ ರಶ್ಮೀಕಾ ಮಂದಣ್ಣ ಇದೀಗ ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಇದೇ ಹಾದಿಯಲ್ಲಿ ನಟಿ ಶ್ರೀಲೀಲಾ ಸಹ ದಕ್ಷಿಣ ಭಾರತದಲ್ಲಿ ಮೋಡಿ ಮಾಡುತ್ತಾರೆಯೆ ಎಂಬುದನ್ನು ಕಾದು ನೋಡಬೇಕಿದೆ.

Previous articleಶೀಘ್ರದಲ್ಲೇ ತೆರೆ ಮೇಲೆ ಬರಲಿದೆ 30 ರೋಜುಲ್ಲೋ ಪ್ರೇಮಿಚಡಂ ಎಲಾ?
Next articleಕಬ್ಜ ಚಿತ್ರಕ್ಕೆ ಕಿಚ್ಚ ಸುದೀಪ್ ಎಂಟ್ರಿ! ಚಿತ್ರತಂಡ ನೀಡಲಿರುವ ಸರ್ಪ್ರೈಸ್ ಇದೇನಾ?