ವೈರಲ್ ಆಗುತ್ತಿರುವ ಶಿಲ್ಪಾಶೆಟ್ಟಿ ಪೊಟೋಸ್!

ಮುಂಬೈ: ಬಾಲಿವುಡ್‌ನ ಹಿಟ್ ಚಿತ್ರಗಳಲ್ಲಿ ಒಂದಾದ ಬಾಜಿಗರ್ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶಿಲ್ಪಾಶೆಟ್ಟಿ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಇತ್ತೀಚಿಗಷ್ಟೆ ನಟಿ ಶಿಲ್ಪಾಶೆಟ್ಟಿ ಮಾಲ್ಡೀವ್ಸ್ ಟ್ರಿಪ್‌ಗೆ ತೆರಳಿದ್ದು, ಅಲ್ಲಿನ ಬಿಸಿ ಬಿಸಿ ಪೊಟೋಗಳನ್ನು ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಸೃಷ್ಟಿಸಿದೆ.

ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು ಸಮಯ ಕಳೆಯಲು ಮಾಲ್ಡೀವ್ಸ್ ಗೆ ತೆರಳುತ್ತಿದ್ದಾರೆ. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಸೇರಿದಂತೆ ದೇಶದ ಅನೇಕ ಸಿನೆಮಾ ತಾರೆಯರು ಮಾಲ್ಡೀವ್ಸ್ ಗೆ ತೆರಳಿ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ಈ ಸಾಲಿಗೆ ಶಿಲ್ಪಾಶೆಟ್ಟಿ ಸಹ ಸೇರಿದ್ದು, ಆಕೆಯ ಪತಿಯೊಂದಿಗೆ ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಪತಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಲೇ, ಬಿಕಿನಿಯೊಂದಿಗೆ ಪೋಸ್ ನೀಡಿ ಎಲ್ಲರನ್ನೂ ಆಕರ್ಷಿಸುತ್ತಿದೆ. ೪೫ ವರ್ಷ ವಯಸ್ಸಿನಲ್ಲೂ ಸಹ ಶಿಲ್ಪಾಶೆಟ್ಟಿ ಗ್ಲಾಮರ್ ಹಾಗೆಯೇ ಇದ್ದು ಯುವಜನತೆ ಶಾಕ್ ಆಗುತ್ತಿದ್ದಾರೆ.

ನಟಿ ಶಿಲ್ಪಾಶೆಟ್ಟಿ ಬಾಜಿಗರ್ ಚಿತ್ರದಲ್ಲಿ ನಟಿಸಿದ್ದು, ಮೊದಲನೇ ಚಿತ್ರದಲ್ಲೇ ದೊಡ್ಡ ಮಟ್ಟದಲ್ಲಿ ಕೀರ್ತಿಯನ್ನು ಗಳಿಸಿದ್ದರು. ಇದಾದ ಬಳಿಕ ಟಾಲಿವುಡ್ ಖ್ಯಾತ ನಿರ್ದೇಶಕ ಕೆ.ರಾಘವೇಂದ್ರರಾವ್ ತೆಲುಗು ಸಿನಿರಂಗಕ್ಕೂ ಶಿಲ್ಪಾಶೆಟ್ಟಿಯವರನ್ನು ಪರಿಚಿಯಿಸಿದರು. ಸಾಹಸ ವೀರುಡು ಸಾಗರ ಕನ್ಯ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಗೆ ಜೋಡಿಯಾಗಿ ನಟಿಸಿದ್ದು ಟಾಲಿವುಡ್‌ನಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದರು.

ಇನ್ನೂ ನಟಿ ಶಿಲ್ಪಾ ಶೆಟ್ಟಿ ವಿಡೆವಡಂಡಿ ಬಾಬು, ಆಜಾದ್, ಭಲೆವಾಡಿವಿ ಬಾಸು ಮೊದಲಾದ ಚಿತ್ರಗಳನ್ನು ನಟಿಸಿದ್ದು, ಈ ಚಿತ್ರಗಳಲ್ಲಿ ಅಷ್ಟೊಂದು ಪ್ಯಾಪುಲರ್ ಆಗದ ಕಾರಣ ಪುನಃ ಬಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದರು. ನಂತರ ಉದ್ಯಮಿಯಾದ ರಾಜ್‌ಕುಂದರಾನು ಎಂಬುವವರೊಂದಿಗೆ ವಿವಾಹ ಮಾಡಿಕೊಂಡ ಬಳಿಕ ಸಿನೆಮಾ ರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ.

Previous articleಮಾರ್ಚ್ 11 ರಂದು ಪವನ್-ಕ್ರಿಷ್ ಮೂವಿ ಬಿಗ್ ಅಪ್ಡೇಟ್!
Next articleಕೆಳಗೆ ಬಿದ್ದ ನಟಿ ಪ್ರಿಯಾ ವಾರಿಯರ್, ವಿಡಿಯೋ ವೈರಲ್!