ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಎಲ್ಲರಂತೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಫಿಟ್ ನೆಸ್ ಟ್ರಿಕ್ಸ್ ಹಾಗೂ ಸ್ಪೂರ್ತಿ ನೀಡುವಂತಹ ಪೊಸ್ಟ್ ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಆದರೆ ಸದಾ ಸೋಷಿಯಲ್ ಮಿಡಿಯಾಗಳಲ್ಲಿ ಸಕ್ರಿಯರಾಗಿರುವ ಈಕೆ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ.
ಬಾಲಿವುಡ್ ರಂಗದ ಫಿಟ್ನೆಸ್ ಬ್ಯೂಟಿ ಶಿಲ್ಪಾ ಶೆಟ್ಟಿ, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದಾಗಿ ಹೇಳಿ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ತಾವು ಇನ್ನೂ ಮುಂದೆ ಇನ್ಸ್ಟಾಗ್ರಾಂ ಟ್ವಿಟರ್ ಬಳಕೆ ಮಾಡಲ್ಲ. ಇವುಗಳಿಂದ ದೂರ ಉಳಿಯುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಒಂದೇ ರೀತಿಯ ಪದ್ದತಿಯಿಂದ ನನಗೆ ಬೇಸರವಾಗಿದೆ. ಎಲ್ಲವೂ ಒಂದೆ ಮಾದರಿಯಲ್ಲಿದೆ. ಆ ಕಾರಣದಿಂದ ತಾನು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದಾಗಿ ನನ್ನಲ್ಲಿ ಹೊಸತನ ಕಂಡುಕೊಂಡ ಬಳಿಕ ಸಾಮಾಜಿಕ ಜಾಲತಾಣಗಳಿಗೆ ಗುಡ್ ಬೈ ಹೇಳುತ್ತಿದೇನೆ ಎಂದು ತಿಳಿಸಿದ್ದಾರೆ.
ನಟಿ ಶಿಲ್ಪಾ ಸದಾ ಸೋಷಿಯಲ್ ಮಿಡೀಯಾಗಳ ಮೂಲಕ ವ್ಯಕ್ತಿತ್ವದ ಬಗ್ಗೆ ಫಿಟ್ ನೆಸ್ ಬಗ್ಗೆ ಸ್ಪೂರ್ತಿದಾಯಕ ಸಾಲುಗಳನ್ನು ಬರೆಯುತ್ತಿದ್ದರು. ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ನಾವು ಅನನ್ಯರು ಎಂದು ಹೇಳಲಾಗುತ್ತದೆ. ಆದ್ದರಿಂದ ನಾವು ಇನ್ನೊಬ್ಬರನ್ನು ಫಾಲೋ ಮಾಡಲು ಪ್ರಯತ್ನಿಸುವುದರಲ್ಲಿ ಯಾವುದೇ ರೀತಿಯ ಅರ್ಥವಿಲ್ಲ. ನಮ್ಮದೇ ಆದ ವ್ಯಕ್ತಿತ್ವ ನಮಗಿರುತ್ತದೆ. ಯಾರೂ ಸಹ ಇಲ್ಲಿ ಪರಿಪೂರ್ಣರಲ್ಲ. ಯಾರೂ ಕೆಟ್ಟವರಲ್ಲ, ಒಳ್ಳೆಯವರೂ ಅಲ್ಲ. ಎಲ್ಲರೂ ತಮ್ಮ ವೈಯುಕ್ತಿಕ ವ್ಯಕ್ತಿತ್ವಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಅವುಗಳನ್ನೇ ಸಕಾರಗೊಳಿಸೋಣ ಎಂಬ ಮಾತುಗಳನ್ನು ಪೋಸ್ಟ್ ಮಾಡಿದ್ದರು.
ಇನ್ನೂ ಇಂತಹ ಸ್ಪೂರ್ತಿದಾಯಕ ವಿಚಾರಗಳನ್ನು ಹಂಚುತ್ತಿದ್ದ ನಟಿ ಧಿಡೀರ್ ನೇ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಈ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ಆಕ್ಟೀವ್ ಆಗಿದ್ದ ನಟಿ ಸಡನ್ ಆಗಿ ಇಂತಹ ನಿರ್ಧಾರಕ್ಕೆ ಬರಲು ಕಾರಣವಾದರೂ ಏನು ಎಂಬ ಚಿಂತೆ ಅಭಿಮಾನಿಗಳಲ್ಲಿ ಮೂಡಿದೆ. ದೊಡ್ಡ ಸಂಖ್ಯೆಯ ಫಾಲೋವರ್ಸ್ಗಳನ್ನು ಹೊಂದಿರುವ ಶಿಲ್ಪಾ ಶೆಟ್ಟಿ ಯವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ತುಂಬಾ ಬೇಸರ ತಂದಿದ್ದು, ಏತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೀರಾ ಎಂಬೆಲ್ಲಾ ಪ್ರಶ್ನೆಗಳು ಬರುತ್ತಿವೆ. ಬಹುಭಾಷ ನಟಿಯಾಗಿ ಶಿಲ್ಪಾ ಶೆಟ್ಟಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚಿನ ಅಭಿಮಾನಿಗಳು ಅವರ ಅಪ್ಡೇಟ್ ಗಾಗಿ ಕಾಯುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ನಟಿಯ ಈ ನಿರ್ಧಾರ ಬೇಸರ ತಂದಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಒತ್ತಾಯ ಹೆಚ್ಚಾಗುತ್ತಿದೆ. ಆದರೆ ಶಿಲ್ಪಾ ಶೆಟ್ಟಿ ಏನು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.