Film News

ಬಂಧನದ ಭೀತಿಯಲ್ಲಿ ನಟಿ ಶೆರ್ಲಿನ್ ಚೋಪ್ರಾ!

ಮುಂಬೈ: ಮಾದಕ ನಟಿ ಶೆರ್ಲಿನ್ ಚೋಪ್ರಾ ಅಶ್ಲೀಲ ವಿಡಿಯೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿದ್ದು, ಈಗಾಗಲೇ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿಯನ್ನು ಸಹ ಸಲ್ಲಿಸಿದ್ದಾರಂತೆ.

ಖಾಸಗಿ ವ್ಯಕ್ತಿಯೊಬ್ಬರು ದೂರು ದಾಖಲು ಮಾಡಿದ್ದು, ಶೆರ್ಲಿನ್ ಚೋಪ್ರಾ ಅಶ್ಲೀಲ ವಿಡಿಯೋ ಒಂದರಲ್ಲಿ ನಟಿಸಿದ್ದು, ಆ ವಿಡಿಯೋವನ್ನು ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲು ಮಾಡಿದ್ದಾರಂತೆ. ಈ ಪ್ರಕರಣದಲ್ಲಿ ಶೆರ್ಲಿನ್ ಬಂಧನವಾಗಲಿದೆ ಎನ್ನಲಾಗುತ್ತಿದೆ. ಇದರಿಂದಾಗಿ ನಟಿ ಶೆರ್ಲಿನ್ ಬಾಂಬೆ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮಿನಿಗೆ ಅರ್ಜಿಯನ್ನು ಸಹ ಹಾಕಿದ್ದರಂತೆ. ಆದರೆ ಅಲ್ಲಿ ಅರ್ಜಿ ತಳ್ಳಿಹಾಕಿದ ಕಾರಣ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರಂತೆ.

ಈ ಕುರಿತು ಶೆರ್ಲಿನ್ ಪ್ರತಿಕ್ರಿಯೆ ನೀಡಿದ್ದು, ಆ ಅಶ್ಲೀಲ ವಿಡಿಯೋವನ್ನು ಅಂತರಾಷ್ಟ್ರೀಯ ವೆಬ್‌ಸೈಟ್ ಗಾಗಿ ಚಿತ್ರೀಕರಿಸಲಾಗಿತ್ತು. ಆದರೆ ಆ ವಿಡಿಯೋ ಲೀಕ್ ಆಗಿ ಬೇರೆ ವೆಬ್‌ಸೈಟ್‌ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಪ್ರಕರಣದಲ್ಲಿ ಕೃತಿಚೌರ್‍ಯ ಆಗಿದ್ದು, ನಾನು ಸಂತ್ರಸ್ತೆ ಆಗಿದ್ದೇನೆ ಎಂದಿದ್ದಾರೆ. ಇನ್ನೂ ಶೆರ್ಲಿನ್ ಅರ್ಜಿಯ ವಿಚಾರಣೆ ಫೆ.೨೨ ರಂದು ನಡೆಯಲಿದೆ. ಈ ಹಿಂದೆಯೂ ಸಹ ಶೆರ್ಲಿನ್ ಹಲವು ವಿವಾದಗಳಿಗೆ ಗುರಿಯಾಗಿದ್ದರು. ಕಾಮಸೂತ್ರ ೩ಡಿ ಎಂಬ ಚಿತ್ರದಲ್ಲಿ ಬೆತ್ತಲೆಯಾಗಿ ನಟಿಸಿ ಸುದ್ದಿಯಾಗಿದ್ದರು, ಜೊತೆಗೆ ಪ್ಲೇಬಾಯ್ ಮ್ಯಾಗಜೈನ್ ವೊಂದಕ್ಕೆ ಕವರ್ ಪೊಟೋಗಾಗಿ ಬೆತ್ತಲೆಯಾಗಿ ಪೋಸ್ ನೀಡಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೇ ಕೆಲವೊಂದು ವಿದೇಶಿ ಪೋರ್ನ್ ಅಂತರ್ಜಾಲ ತಾಣಗಳಿಶಗೆ ಶೆರ್ಲಿನ್ ವಿಡಿಯೋಗಳನ್ನು ಕಳುಹಿಸುತ್ತಾರಂತೆ.

Trending

To Top