Film News

ನೆಟ್ಟಿಗರ ಪ್ರಶ್ನೆಗಳಿಗೆ ಬೋಲ್ಡ್ ಉತ್ತರ ನೀಡಿದ ನಟಿ ಶಾನ್ವಿ!

ಬೆಂಗಳೂರು: ಉತ್ತರ ಭಾರತ ಮೂಲದ ನಟಿ ಶಾನ್ವಿ ಶ್ರೀವಾಸ್ತವ ಸ್ಯಾಂಡಲ್‌ವುಡ್ ರಂಗದಲ್ಲಿ ಸ್ಟಾರ್ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ. ಶಾನ್ವಿ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಸಂವಾದ ಮಾಡುತ್ತಿರುತ್ತಾರೆ. ಇದರ ಹಾದಿಯಲ್ಲೇ ಲೈವ್ ಗೆ ಬಂದಿದ್ದ ಶಾನ್ವಿಗೆ ವಿಧ ವಿಧವಾದ ಪ್ರಶ್ನೆಗಳು ಬಂದಿದ್ದು, ಎಲ್ಲದಕ್ಕೂ ಬೋಲ್ಡ್ ಆಗೇ ಉತ್ತರ ನೀಡಿದ್ದಾರೆ.

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿನೆಮಾ ನಟಿಯರಿಗೆ ಆಗಾಗ ಅನೇಕ ರೀತಿಯಲ್ಲಿ ಪ್ರಶ್ನೆಗಳು ಅಭಿಮಾನಿಗಳಿಂದ ಬರುತ್ತಿರುತ್ತದೆ. ಇತ್ತೀಚಿಗಷ್ಟೆ ನಟಿ ಶಾನ್ವಿ ಶ್ರೀವಾಸ್ತವ ತಮ್ಮ ಅಭಿಮಾನಿಗಳಿಗೆ ಏನಾದರೂ ಪ್ರಶ್ನೆಗಳಿದ್ದರೇ ಕೇಳಿ ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದರು. ಇನ್ನೂ ಪೋಸ್ಟ್ ಹಾಕಿದ್ದೇ ತಡ ವಿವಿಧ ರೀತಿಯ ಪ್ರಶ್ನೆಗಳು ಅಭಿಮಾನಿಗಳಿಂದ ಸುರಿಮಳೆಯಾಗಿದೆ. ನಿಮಗೆ ಇಷ್ಟವಾದ ಸ್ಥಳ ಯಾವುದು, ಸುಂದರ ಪೊಟೋಗಳನ್ನು ಶೇರ್ ಮಾಡಿ, ನೀವು ಕನ್ನಡ ಭಾಷೆಯನ್ನು ಹೇಗೆ ಕಲಿತಿದ್ದು ಎಂದೆಲ್ಲಾ ಪ್ರಶ್ನೆಗಳು ಎದುರಾಗಿದೆ.

ಇನ್ನೂ ಒಬ್ಬ ನೆಟ್ಟಿಗ ಏಕಾಏಕಿ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ವರ್ಜಿನ್ ಆ ಎಂದು ಪ್ರಶ್ನೆ ಮಾಡಿದ್ದು, ಬೋಲ್ಡ್ ಆಗೆ ಉತ್ತರ ನೀಡಿದ್ದಾರೆ. ಇನ್ನೂ ಈ ಪ್ರಶ್ನೆಯನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಶೇರ್ ಮಾಡಿದ್ದು, ಚಪ್ಪಾಳೆ ತಟ್ಟಿ, ಶೇರ್ ಮಾಡಿ, ಎಂಥಾ ಪ್ರಶ್ನೆಗಳನ್ನು ಕೇಳುತ್ತಿರಿ ಎನ್ನುವ ಅರ್ಥ ಬರುವ ಹಾಗೆ ಸಿಗ್ನಲ್ ಹಾಕಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ನಟಿ ಶಾನ್ವಿ ಸ್ಯಾಂಡಲ್‌ವುಡ್‌ನ ಬ್ಯಾಂಗ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ಇನ್ನೂ ಮೊದಲ ಬಾರಿಗೆ ಶಾನ್ವಿ ಇಂತಹ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ನಟಿ ಶಾನ್ವಿ ಮಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದು, ಸಿನೆಮಾ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

Trending

To Top