Film News

ಮಾಲಿವುಡ್ ಗೆ ಎಂಟ್ರಿ ಕೊಟ್ಟ ಶಾನ್ವಿ ಶ್ರೀವಾಸ್ತವ್!

ತಿರುವನಂತಪುರಂ: ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿ ಹೊರಹೊಮ್ಮುತ್ತಿದ್ದ ಖ್ಯಾತ ನಟಿ ಶಾನ್ವಿ ಶ್ರೀವಾಸ್ತವ್ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಮಾಲಿವುಡ್‌ಗೂ ಸಹ ಎಂಟ್ರಿ ಕೊಟ್ಟಿದ್ದು, ಸ್ಟಾರ್ ನಟನೊಂದಿಗೆ ಬಣ್ಣ ಹಚ್ಚಲಿದ್ದಾರೆ.

ನಟಿ ಶಾನ್ವಿಗೆ ಮಲಯಾಳಂ ಸಿನಿರಂಗದಲ್ಲಿ ಮೊದಲ ಸಿನೆಮಾ ಇದಾಗಿದ್ದು, ಮಾಲಿವುಡ್‌ನ ಸ್ಟಾರ್ ನಟ ನಿವಿನ್ ಪೌಲಿ ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಶಾನ್ವಿ ನಟಿಸಲಿದ್ದಾರೆ. ಕಳೆದ ದಿನವಷ್ಟೆ ಜೈಪುರದಲ್ಲಿ ಈ ಚಿತ್ರ ಮೂಹೂರ್ತ ಕಾರ್ಯಕ್ರಮ ಸಹ ನೆರವೇರಿದೆ. ಇನ್ನೂ ಈ ಚಿತ್ರವನ್ನು ಅಬ್ರಿಡ್ ಶೈನ್ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಮಹಾವೀರ್ಯರ್ ಎಂಬ ಟೈಟಲ್ ಸಹ ಇಡಲಾಗಿದೆ. ಈ ಚಿತ್ರದಲ್ಲಿ ನಿವಿನ್ ಪೌಲಿ ಹಾಗೂ ಆಸಿಫ್ ಅಲಿ ಇಬ್ಬರು ನಾಯಕರಿದ್ದು, ಇವರ ಜೊತೆ ಪ್ರಧಾನ ಪಾತ್ರದಲ್ಲಿ ಶಾನ್ವಿ ಕಾಣಿಸಿಕೊಳ್ಳಲಿದ್ದಾರೆ.

2012 ರಲ್ಲಿ ತೆಲುಗಿನ ಲವ್ಲಿ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು, ರೌಡಿ, ಪ್ಯಾರ್ ಮೈನೇ ಪಡಿಪೋಯಿನೆ, ಅಡ್ಡ ಎಂಬ ಸಿನೆಮಾಗಳಲ್ಲಿ ನಟಿಸಿದ್ದು, ಚಂದ್ರಲೇಖ ಸಿನೆಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಇದೀಗ ಮಲಯಾಳಂ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಮಹಾವೀರ್ಯರ್ ಚಿತ್ರದ ಮೂಹೂರ್ತ ಕಾರ್ಯಕ್ರಮದ ಪೊಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ನೂತನ ವರ್ಷದ ಪ್ರಾರಂಭದಲ್ಲಿ ಒಂದು ಒಳ್ಳೆಯ ಹೆಜ್ಜೆ ಇಡುವ ಮೂಲಕ ಆರಂಭಿಸಿದ್ದೇನೆ, ಒಳ್ಳೆಯದಾಗಲಿ ಎಂದು ಎಲ್ಲರೂ ಶುಭ ಹಾರೈಸಿ ಎಂದು ವಿನಂತಿಸಿದ್ದಾರೆ.

ನಟಿ ಶಾನ್ವಿ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದರು. ರಕ್ಷಿತ್ ಶೆಟ್ಟಿ ಅಭಿನಯದ ಸೂಪರ್ ಹಿಟ್ ಚಿತ್ರ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸಿ ಮತಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಕಸ್ತೂರಿ ಮಹಲ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಶಾನ್ವಿ ನಟಿಸಿದ್ದಾರೆ.

Trending

To Top