ನಟಿ ಶಾಲಿನಿ ಪಾಂಡೆಯವರ ಹೊಸ ಲುಕ್ ನೋಡಿದ್ರಾ? ಶಾಲಿನಿ ಶಾಕಿಂಗ್ ಲುಕ್ ನಲ್ಲಿ ಪ್ರತ್ಯಕ್ಷ….

ಟಾಲಿವುಡ್ ನಲ್ಲಿ ಮೊದಲನೇ ಸಿನೆಮಾದ ಮೂಲಕ ಪಾಪ್ಯುಲರ್‍ ಆದಂತಹ ನಟಿಯರಲ್ಲಿ ಶಾಲಿನಿ ಪಾಂಡೆ ಸಹ ಒಬ್ಬರು. ನಟ ವಿಜಯದೇವರಕೊಂಡ ನಾಯಕನಾಗಿ ನಟಿಸಿದ್ದ ಅರ್‍ಜುನ್ ರೆಡ್ಡಿ ಸಿನೆಮಾದಲ್ಲಿ ನಟಿಸಿದ್ದ ಶಾಲಿನಿ ಪಾಂಡೆ ಫೇಮಸ್ ಆಗಿದ್ದರು. ಮೊದಲನೇ ಸಿನೆಮಾ ಮೂಲಕವೇ ಸಕ್ಸಸ್ ಆಗಿದ್ದ ಈಕೆ ಸ್ಟಾರ್‍ ನಟಿಯಾಗುತ್ತಾರೆ ಎಂದು ಭಾವಿಸಿದ್ದರು ಅಭಿಮಾನಿಗಳು ಆದರೆ ನಟಿಗೆ ಮಾತ್ರ ಅವಕಾಶಗಳು ಬಂದಿದ್ದು ಕಡಿಮೆ. ಅವಕಾಶಗಳಿಗಾಗಿ ಶಾಲಿನಿ ಪಾಂಡೆ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.

ನಟಿ ಶಾಲಿನಿ ಅರ್‍ಜುನ್ ರೆಡ್ಡಿ ಸಿನೆಮಾ ಮೂಲಕ ಪರಿಚಯವಾದ ಬಳಿಕ ಅನೇಕ ಸಿನೆಮಾಗಳ ಆಫರ್‍ ಗಳು ಬರುತ್ತವೆ ಎಂದು ಕೊಂಡಿದ್ದರು. ಆದರೆ ಆಕೆ ಮಾತ್ರ ಆಫರ್‍ ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ವಿಜಯದೇವರಕೊಂಡ ಮಾತ್ರ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಮುನ್ನುಗ್ಗುತ್ತಿದ್ದಾರೆ. ತಮ್ಮ ಕ್ಯೂಟ್ ನಟನೆಯ ಮೂಲಕ ಅರ್‍ಜುನ್ ರೆಡ್ಡಿ ಸಿನೆಮಾದಲ್ಲಿ ಅನೇಕರನ್ನು ರಂಜಿಸಿದ್ದರು. ಅದರಲ್ಲೂ ವಿಜಯದೇವರಕೊಂಡ ಹಾಗೂ ಶಾಲಿನಿಯವರ ರೊಮ್ಯಾಂಟಿಕ್ ಸೀನ್ ಗಳಿಗೆ ಎಲ್ಲರೂ ಫಿದಾ ಆಗಿದ್ದರು. ಆಕೆಯ ನಟನೆಗೆ ಅನೇಕರು ಆಕೆಯ ಅಭಿಮಾನಿಗಳಾದರು. ಆದರೆ ಇದೀಗ ನಟಿ ಶಾಲಿನಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.

ಇನ್ನೂ ಮೊದಲನೇ ಸಿನೆಮಾದಲ್ಲಿ ಕೊಂಚ ದಪ್ಪವಿದ್ದ ಈಕೆ ಬಳಿಕ ಮತಷ್ಟು ತೂಕ ಹೆಚ್ಚಿಸಿಕೊಂಡರು. ಅದರ ಜೊತೆಗೆ ಆಕೆಯ ಸಿನೆಮಾಗಳೂ ಸಹ ಸಕ್ಸಸ್ ಆಗಲಿಲ್ಲ. ಇದಕ್ಕೆ ತನ್ನ ದೇಹದ ತೂಕ ಹೆಚ್ಚಾಗಿರುವುದು ಕಾರಣ ಎಂದು ಭಾವಿಸಿ ಆಕೆ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಕೆಲವು ದಿನಗಳ ಹಿಂದೆ ತೂಕ ಇಳಿಸಿಕೊಂಡ ಬಳಿಕ ಒಂದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಶಾಲಿನ ತೂಕ ಇಳಿದ ಬಳಿಕ ಕ್ಯೂಟ್ ಆಗಿದ್ದಾರೆ ಎಂದು ಕಾಮೆಂಟ್ ಗಳು ಬಂದಿದ್ದವು. ಇದೀಗ ಮತಷ್ಟು ತೂಕ ಇಳಿಸಿಕೊಂಡು ಹೊಸ ಲುಕ್ ನೊಂದಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಶಾಲಿನಿ ಇದೀಗ ಸ್ಲಿಮ್ ಆಗಿದ್ದು, ಆಕೆಯ ಪೊಟೋಗಳನ್ನು ನೋಡಿದ ಅನೇಕರು ಶಾಲಿನಿ ಈಗ ಮುದ್ದಾಗಿದ್ದಾರೆ ಎಂದು ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ ಮತ್ತೆ ಕೆಲವರು ಶಾಲಿನಿ ಮೊದಲೇ ಚೆನ್ನಾಗಿದ್ದರು ಮುದ್ದು ಮುದ್ದಾಗಿ ಈಗ ಏಕೆ ಹೀಗೆ ಆಗಿದ್ದಾರೆ ಎಂದು ಸಹ ಹೇಳುತ್ತಿದ್ದಾರೆ. ತುಂಬಾ ಸಣ್ಣ ಆಗಿರುವುದರಿಂದ ಆಕೆ ನೋಡಲು ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಕಾಮೆಂಟ್‌ ಗಳು ಬರುತ್ತಿವೆಯಂತೆ. ಶಾಲಿನಿ ತೆಲುಗು ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಸದ್ಯ ಆಕೆಗೆ ಸಿನೆಮಾ ಆಫರ್‍ ಗಳು ಬರುತ್ತಿಲ್ಲ. ಇದೀಗ ಸಣ್ಣ ಆಗಿರುವ ಕಾರಣ ಬರುವಂತಹ ಆಫರ್‍ ಗಳು ಸಹ ಬರುವುದಿಲ್ಲ ಎಂಬ ಕಾಮೆಂಟ್‌ಗಳು ಸಹ ಹರಿದು ಬರುತ್ತಿವೆ.

Previous articleಮತ್ತೆ ಹಾಟ್ ಅಂಡ್ ಬೋಲ್ಡ್ ಪೊಟೋಗಳನ್ನು ಹಂಚಿಕೊಂಡ ಕಿರಿಕ್ ಹುಡುಗಿ ಸಂಯುಕ್ತಾ…..
Next articleಸ್ಪೋರ್ಟ್ಸ್ ಬ್ರಾ ಧರಿಸಿ ಸೆಲ್ಫಿಗೆ ಪೋಸ್ ಕೊಟ್ಟ ರಶ್ಮಿಕಾ… ವೈರಲ್ ಆಯ್ತು ಪೊಟೋ…