ಮಗನ ಮುದ್ದಿನ ಮುಖ ತೋರಿಸಿದ ಸಂಜನಾ, ಮಗನ ಕೈಗೆ ಕ್ಯಾಮೆರಾ ಕೊಟ್ಟಿದ್ದು ಯಾಕೆ?

ದಕ್ಷಿಣ ಭಾರತದ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ನಟಿ ಸಂಜನಾ ಗಲ್ರಾನಿ ಸದ್ಯ ಗಂಡು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ತಾನು ಗರ್ಭಿಣಿಯಾದ ಪೊಟೋಗಳು, ಬೇಬಿ ಬಂಪ್ ಪೊಟೋಗಳು, ಸೀಮಂತದ ಪೊಟೋಗಳು ಮೊದಲಾದ ವಿಚಾರಗಳಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಆದರೆ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯುಸಿಯಾಗಿಯೇ ಇದ್ದಾರೆ. ಇನ್ನೂ ತನ್ನ ಮುದ್ದಿನ ಮಗನಿಗೆ ಅಲಾರಿಕ್ ಎಂದು ಹೆಸರಿಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಮಗನೊಂದಿಗೆ ರೀಲ್ಸ್ ಮಾಡಿದ್ದು, ವಿಡಿಯೋ ವೈರಲ್ ಸಹ ಆಗಿದೆ.

ನಟಿ ಸಂಜನಾ ಮದುವೆಯಾದಾಗಿನಿಂತ ಅವರ ಪ್ರತಿಯೊಂದು ಸಂತಸದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇತ್ತೀಚಿಗೆ ತಮ್ಮ ಮಗುವಿನ ವಿಡಿಯೋ ಹಾಗೂ ಪೊಟೋಗಳನ್ನು ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಂಡಿದ್ದರು. ಸದಾ ಮಗುವಿನ ಬಗ್ಗೆ ಪೋಸ್ಟ್ ಮಾಡುತ್ತಾ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ತನ್ನ ಮಗನ ಹೆಸರಿನಲ್ಲಿ ಇನ್ಸ್ಟಾ ಖಾತೆಯನ್ನು ತೆರೆದಿದ್ದು, ಆ ಖಾತೆಯಲ್ಲಿಯೇ ಮಗನ ಪೊಟೋಗಳು, ವೀಡಿಯೋಗಳನ್ನು ಹಂಚಿಕೊಂಡಿದ್ದರು. ಆದರೆ ತನ್ನ ಮಗನ ಮುಖ ಮಾತ್ರ ತೋರಿಸಿರಲಿಲ್ಲ. ಇದೀಗ ಮೊದಲ ಬಾರಿಗೆ ತನ್ನ ಮಗನ ಮುಖವನ್ನು ಆಕೆ ಪ್ರಪಂಚಕ್ಕೆ ತೋರಿಸಿದ್ದಾರೆ. ತನ್ನ ಮುದ್ದಾದ ಮಗನ ಮುಖವನ್ನು ಸೋಷಿಯಲ್ ಮಿಡಿಯಾದಲ್ಲಿ ತೋರಿಸಿದ್ದಾರೆ. ಅಲಾರಿಕ್ ಪೊಟೋಶೂಟ್ ಮಾಡಿಸಿ ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿದ್ದಾರೆ. ಇನ್ನೂ ಅಲಾರಿಕ್ ಮುದ್ದಾದ ಮುಖವನ್ನು ನೋಡಿ ಸಂಜನಾ ಅಭಿಮಾನಿಗಳೂ ಸಹ ಶುಭ ಕೋರುತ್ತಿದ್ದಾರೆ.

ಇನ್ನೂ ಸಂಜನಾ ಮಗನ ಕೈಗೆ ಕ್ಯಾಮೆರಾ ಸೇರಿದಂತೆ ಕೆಲವೊಂದು ಪರಿಕರಗಳನ್ನು ಜೊತೆಗೆ ಮುದ್ದಾದ ಪೊಟೋಶೂಟ್ ಮಾಡಿಸಿದ್ದಾರೆ. ಜೊತೆಗೆ ವಿಡಿಯೋ ಸಹ ಹಂಚಿಕೊಂಡಿದ್ದಾರೆ. ಇನ್ನೂ ಸಂಜನಾ ನಟಿ, ಆಕೆಯ ಪತಿ ಅಜೀಜ್ ಪಾಷಾ ಡಾಕ್ಟರ್‍ ಆಗಿದ್ದಾರೆ. ಈ ಕಾರಣಕ್ಕೆ ಎರಡು ಥೀಮ್ ನಲ್ಲಿ ಪೊಟೋಶೂಟ್ ಮಾಡಿಸಿದ್ದಾರೆ. ಪ್ರಸ್ತುತ ಸಂಜನಾ ಆಕ್ಟರ್‍ ಥೀಮ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕ್ಟರ್‍ ಥೀಮ್ ಪೊಟೋಶೂಟ್ ನಲ್ಲಿ ಕ್ಲಾಪ್ ಬೋರ್ಡ್, ಕ್ಯಾಮೆರಾ ಮೊದಲಾದ ಪರಿಕರಗಳನ್ನು ಇಟ್ಟು ಪೊಟೋಶೂಟ್ ಮಾಡಿಸಿದ್ದಾರೆ. ಜೊತೆಗೆ ಕ್ಯಾಮೆರಾ ಒಂದನ್ನು ಮಗನ ಕೈಗಿಟ್ಟು ಪೊಟೋ ಕ್ಲಿಕ್ಕಿಸಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಜೊತೆಗೆ ಸಂಜನಾ ಅಭಿಮಾನಿಗಳೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ಮೊದಲ ಬಾರಿಗೆ ಸಂಜನಾ ತನ್ನ ಮಗನ ಮುಖವನ್ನು ತೋರಿಸಿದ್ದಾರೆ. ಪೊಟೋಗಳಲ್ಲಿ ಅಲಾರಿಕ್ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಸದ್ಯ ಆಕೆ ಆಕ್ಟರ್‍ ಥೀಮ್ ನ ಪೊಟೋಗಳನ್ನು ಶೇರ್‍ ಮಾಡಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಶೀಘ್ರವಾಗಿ ಡಾಕ್ಟರ್‍ ಥೀಮ್ ಪೊಟೋಗಳನ್ನು ಹಂಚಿಕೊಳ್ಳಿ ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

Previous articleಮೈಂಡ್ ಬ್ಲೋಯಿಂಗ್ ಸೆಲ್ಫಿ ಪೊಟೋ ಹಂಚಿಕೊಂಡ ಹೆಬ್ಬಾ ಪಟೇಲ್…..!
Next articleಬಿಕಿನಿ ಧರಿಸಿ ಬೆಟ್ಟಗಳ ಮಧ್ಯೆ ಹಾಟ್ ಪೋಸ್ ಕೊಟ್ಟ ಸ್ಯಾಂಡಲ್ ವುಡ್ ತಾರೆ ಶಾನ್ವಿ…!