ಶರ್ಟ್ ತೆಗೆದು ಹಾಟ್ ಪೋಸ್ ಕೊಟ್ಟ ಸಮೀರಾ ರೆಡ್ಡಿ, ಬಾಡಿ ಶೇಮಿಂಗ್ ಬಗ್ಗೆ ಸಹ ಆಕೆ ಏನು ಹೇಳಿದ್ರು ಗೊತ್ತಾ?

ಸಿನಿರಂಗಕ್ಕೆ ಅನೇಕ ನಟಿಯರು ಬರುತ್ತಾರೆ, ಅವರಲ್ಲಿ ಕೆಲವು ಮಂದಿ ಮಾತ್ರ ಸಕ್ಸಸ್ ಆಗುತ್ತಾರೆ. ಅದರಲ್ಲಿ ಕೆಲವರಿಗಂತೂ ಬ್ಯೂಟಿ, ಫಿಟ್ ನೆಸ್, ಅಭಿನಯ ಎಲ್ಲವೂ ಇದ್ದರೂ ಸಹ ಸಕ್ಸಸ್ ಕಂಡುಕೊಳ್ಳುವುದರಲ್ಲಿ ವಿಫಲರಾಗಿರುತ್ತಾರೆ. ಈ ಸಾಲಿಗೆ ಹಾಟ್ ನಟಿ ಸಮೀರಾರೆಡ್ಡಿ ಸಹ ಸೇರುತ್ತಾರೆ. ಟಾಲಿವುಡ್ ನಲ್ಲಿ ಸಾಲು ಸಾಲು ಅಪಜಯಗಳಿಂದ ಆಕೆ ಡಿಜಾಸ್ಟರ್‍ ನಟಿಯಾಗಿ ಉಳಿದರು. ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಂಡರೂ ಸಹ ಆಕೆ ಸ್ಟಾರ್‍ ನಟಿಯಾಗಲು ಹಿಂದೆ ಬಿದ್ದರು. ಇನ್ನೂ ಸಮೀರಾ ರೆಡ್ಡಿ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದಿದ್ದಾರೆ. ಸಿನೆಮಾಗಳಿಂದ ದೂರ ಉಳಿದರೂ ಸಹ ಆಕೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ನಟಿ ಸಮೀರಾ ರೆಡ್ಡಿ ಹಸರಿಗೆ ತೆಲುಗು ಹುಡುಗಿಯಾದರೂ ಸಹ ದೇಶವ್ಯಾಪಿ ಖ್ಯಾತಿಯನ್ನು ಗಳಿಸಿಕೊಂಡರು. ಸಮೀರಾರೆಡ್ಡಿ ಓದುವ ಸಮಯದಲ್ಲೇ ಮಾಡಲಿಂಗ್ ಆಗಿ ಕೆರಿಯರ್‍ ಅನ್ನು ಪ್ರಾರಂಭ ಮಾಡಿದ್ದರು. ಮೈನೇ ದಿಲ್ ತುಜಕೋ ದಿಯಾ ಎಂಬ ಬಾಲಿವುಡ್ ಸಿನೆಮಾದ ಮೂಲಕ ನಟಿಯಾಗಿ ಪರಿಚಯವಾದರು. ಆ ಬಳಿಕ ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳನ್ನು ಮಾಡುವ ಮೂಲಕ ದೇಶವ್ಯಾಪಿ ಫೇಮ್ ದಕ್ಕಿಸಿಕೊಂಡರು. ಬಳಿಕ ಆಕೆಗೆ ದಕ್ಷಿಣದ ಸಿನೆಮಾಗಳಲ್ಲೂ ಸಹ ಆಫರ್‍ ಗಳನ್ನು ದಕ್ಕಿಸಿಕೊಂಡರು. ಇನ್ನೂ ನಟಿ ಸಮೀರಾರೆಡ್ಡಿ ತೆಲುಗಿನಲ್ಲಿ ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ ನರಸಿಂಹುಡು ಎಂಬ ಸಿನೆಮಾದ ಮೂಲಕ ಕಾಲಿಟ್ಟರು. ಈ ಸಿನೆಮಾ ಆಕೆ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಬಳಿಕ ಮೆಗಾಸ್ಟಾರ್‍ ಚಿರಂಜೀವಿ ಜೊತೆ ಜೈ ಚಿರಂಜೀವ ಎಂಬ ಸಿನೆಮಾದಲ್ಲೂ ಕಾಣಿಸಿಕೊಂಡರು. ಈ ಸಿನೆಮಾ ಸಹ ಫೈಲ್ ಆಯಿತು. ಮತ್ತೊಮ್ಮೆ ಜೂನಿಯರ್‍ ಎನ್.ಟಿ.ಆರ್‍ ಜೊತೆ ಅಶೋಕ್ ಎಂಬ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾ ಸಹ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿತು. ಟಾಲಿವುಡ್ ನಲ್ಲಿ ಆಕೆ ನಟಿಸಿದ ಮೂರು ಸಿನೆಮಾಗಳೂ ಪ್ಲಾಪ್ ಆದವು.

ಬಳಿಕ ಸಮೀರಾ ಟಾಲಿವುಡ್ ಬಿಟ್ಟು ಹಿಂದಿ, ಕನ್ನಡ, ತಮಿಳು ಹಾಗೂ ಬೆಂಗಾಲಿ ಸಿನೆಮಾಗಳಲ್ಲಿ ನಟಿಸಿದರು. ಈ ಭಾಷೆಗಳಲ್ಲಿ ಆಕೆ ನಟಿಸುತ್ತಾ ಸಾಲು ಸಾಲು ಆಫರ್‍ ಗಳನ್ನು ದಕ್ಕಿಸಿಕೊಂಡು ಬ್ಯುಸಿಯಾದರು. ಇನ್ನೂ ಕೃಷ್ಣಂ ವಂದೇ ಜಗದ್ಗುರಂ ಎಂಬ ಸಿನೆಮಾದಲ್ಲಿ ಐಟಂ ಸಾಂಗ್ ಒಂದಕ್ಕೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಇನ್ನೂ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಕಳೆದ 2014 ರಲ್ಲಿ ಅಕ್ಷಯ್ ಎಂಬಾತನೊಂದಿಗೆ ಮದುವೆಯಾದರು. ಮದುವೆಯಾದ ಕೂಡಲೇ ಇಬ್ಬರು ಮಕ್ಕಳಿಗೆ ಜನ್ಮನೀಡಿದ್ದರು. ಬಳಿಕ ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಾ ತನ್ನ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಆದರೆ ಸಮೀರಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿರುತ್ತಾರೆ. ಇದೇ ವೇದಿಕೆಯಲ್ಲೇ ಆಕೆ ತನ್ನ ವೈಯುಕ್ತಿಕ ಜೀವನದ ಬಗ್ಗೆ, ಹಾಟ್ ಪೊಟೋಗಳನ್ನು, ತನ್ನಕುಟುಂಬದೊಂದಿಗೆ ಪೊಟೋಗಳನ್ನುಶೇರ್‍ ಮಾಡುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.

ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಪೊಟೋಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡುತ್ತಾರೆ. ಇತ್ತಿಚಿಗೆ ಆಕೆ ಶರ್ಟ್ ಬಿಚ್ಚಿ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಆಕೆ ಹಂಚಿಕೊಂಡ ಪೊಟೋ ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಇನ್ನೂ ನಟಿ ಸಮೀರಾ ರೆಡ್ಡಿ ನನ್ನ ಬಾಡಿ ಅಂದರೇ ನನಗೆ ಇಷ್ಟ, ನನ್ನ ಶರೀರವನ್ನು ನಾನು ಇಷ್ಟಪಡುತ್ತೇನೆ. ನಾನು ಹೇಗಿದ್ದೀನಿ ಎಂದು ಬೇರೆಯವರು ಏನು ಹೇಳಿಕೊಳ್ಳುತ್ತಾರೋ ಎಂದು ತುಂಬಾ ದಿನಗಳ ಕಾಲ ಆಲೋಚನೆ ಮಾಡಿ ಟೈಂ ವ್ಯರ್ಥ ಮಾಡಿದ್ದೇನೆ. ನಾನು ಕ್ಯಾಮೆರಾ ಮುಂದೆ ಚೆನ್ನಾಗಿದ್ದೇನೆ. ನನಗೂ ಅನುಕೂಲಕರವಾಗಿದೆ. ಬೇರೆಯವರ ಬಗ್ಗೆ ಯೋಚನೆ ಮಾಡುವ ಅವಸರವೇ ಇಲ್ಲ. ದೇಹದಲ್ಲಿ ಬದಲಾವಣೆ ಸಾಮಾನ್ಯವಾಗಿದ್ದು. ಇರುವುದರಲ್ಲೇ ತೃಪ್ತಿಯನ್ನು ಪಡೆದುಕೊಳ್ಳಬೇಕೆಂದು ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ.

Previous articleಇಂಡಿಯನ್-2 ಸಿನೆಮಾದ ಬಿಗ್ ಅಪ್ಡೇಟ್, ಕಾಜಲ್ ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್…!
Next articleಸೆಂಟಿಮೆಂಟ್ ಡೈಲಾಗ್ ಹೊಡೆದ ಗೋವಾ ಬ್ಯೂಟಿ ಇಲಿಯಾನಾ, 15 ಮಿಲಿಯನ್ ಫಾಲೋವರ್ಸ್ ಹೊಂದಿದ ನಟಿ…!