ಟ್ರೆಡಿಷನಲ್ ಲುಕ್ಸ್ ನೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದ ಸಮಂತಾ…!

ಸೌತ್ ಆರ್‍ ನಾರ್ಥ್ ಎಂದು ಬೇದಭಾವವಿಲ್ಲದೇ ಎರಡೂ ಸಿನಿರಂಗದಲ್ಲೂ ಮುನ್ನುಗ್ಗುತ್ತಿರುವ ಖ್ಯಾತ ನಟಿ ಸಮಂತಾ, ಇತ್ತೀಚಿಗೆ ಸಾಲು ಸಾಲು ಸಿನೆಮಾಗಳ ಮೂಲಕ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೇವಲ ಸಿನೆಮಾರಂಗದಲ್ಲ ಮಾತ್ರವಲ್ಲದೇ ಆಕೆ ಕೆಲವೊಂದು ಬ್ರಾಂಡ್ ಪ್ರಮೋಷನ್ ಗಳಲ್ಲೂ ಸಹ ತುಂಬಾನೆ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದರು. ಹಾಟ್ ಪೊಟೋ ಮೂಲಕ ಹವಾ ಹೆಚ್ಚಿಸುತ್ತಿದ್ದ ಈಕೆ ಈ ಬಾರಿ ಟ್ರೆಡಿಷನಲ್ ಲುಕ್ಸ್ ನಲ್ಲಿ ಫಿದಾ ಮಾಡಿದ್ದಾರೆ.

ನಟಿ ಸಮಂತಾ ನಾಗಚೈತನ್ಯರೊಂದಿಗೆ ವಿಚ್ಚೇದನ ಪಡೆದುಕೊಂಡ ಬಳಿಕ ತನ್ನ ಸಂಪೂರ್ಣ ಧ್ಯಾನವನ್ನು ಸಿನಿಮಾಗಳ ಮೇಲೆ ಇಟ್ಟಿದ್ದಾರೆ.  ಸದಾ ಸಿನೆಮಾಗಳ ಮೂಲಕ ತಮ್ಮ ಜೀವನವನ್ನು ತುಂಬಾನೆ ಬ್ಯುಸಿಯಾಗಿ ಮಾಡಿಕೊಂಡಿದ್ದಾರೆ. ಸಾಲು ಸಾಲು ಸಿನೆಮಾಗಳಿಗೆ ಸೈನ್ ಮಾಡಿದ್ದಾರೆ. ಕೆಲವೊಂದು ಬಾಲಿವುಡ್ ಸಿನೆಮಾಗಳ ಮೂಲಕವೂ ಸಹ ಆಕೆ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪುಷ್ಪಾ ಸಿನೆಮಾದ ಬಳಿಕ ಆಕೆಯ ಕ್ರೇಜ್ ದೊಡ್ಡದಾಗಿಯೇ ಹೆಚ್ಚಿದೆ. ಪುಷ್ಪಾ ಸಿನೆಮಾದಲ್ಲಿ ಸಮಂತಾ ರವರ ಐಟಂ ಸಾಂಗ್ ಇಡೀ ಸಿನೆಮಾಗೆ ಹೈಪ್ ತಂದುಕೊಂಟ್ಟಿದೆ ಎನ್ನಬಹುದಾಗಿದೆ. ಸಮಂತಾ ಈ ರೀತಿಯಲ್ಲಿ ಐಟಂ ಸಾಂಗ್ ನಲ್ಲಿ ಪ್ರದರ್ಶನ ಮಾಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇಂದಿಗೂ ಸಹ ಈ ಸಾಂಗ್ ದೇಶ ವಿದೇಶದಲ್ಲೂ ಸಹ ತುಂಬಾನೆ ಪಾಪ್ಯುಲರ್‍ ಆಗುತ್ತಿದೆ.

ಸದ್ಯ ಸಮಂತಾ ತನ್ನ ಕೆರಿಯರ್‍ ನಲ್ಲಿ ಭಾರಿ ಬಜೆಟ್ ನ ಎರಡು ಸಿನೆಮಾಗಳಲ್‌ಇ ನಟಿಸುತ್ತಿದ್ದಾರೆ. ಯಶೋಧ ಹಾಗೂ ಶಾಕುಂತಲಂ ಸಿನೆಮಾಗಳ ಮೂಲಕ ದೊಡ್ಡ ಬ್ರೇಕ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾಗಳು ತೆಲುಗು ಸೇರಿದಂತೆ ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲೂ ಸಹ ಬಿಡುಗಡೆಯಾಗಲಿದೆ. ಇನ್ನೂ ಯಶೋಧ ಸಿನೆಮಾದಲ್ಲಿ ಸಮಂತಾ ಈ ಹಿಂದೆ ಎಂದೂ ಮಾಡದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಈ ಸಿನೆಮಾದ ಪೋಸ್ಟರ್‍ ಹಾಗೂ ಫಸ್ಟ್ ಗ್ಲಿಂಪ್ಸ್ ಪ್ರೇಕ್ಷಕರನ್ನು ತುಂಬಾನೆ ಆಕರ್ಷಣೆ ಮಾಡಿದೆ. ಈ ಸಿನೆಮಾ ಶ್ರೀದೇವಿ ಮೂವಿಸ್ ಬ್ಯಾನರ್‍ ನಡಿ ನಿರ್ಮಾಣವಾಗುತ್ತಿದ್ದು, ಹರಿಶಂಕರ್‍ ಹಾಗೂ ಹರಿಶ್ ನಾರಾಯಣ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.

ಸದ್ಯ ಬಾಲವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಹಾಲಿವುಡ್ ನ ಒಂದು ಸಿನೆಮಾದಲ್ಲೂ ನಟಿಸುತ್ತಿದ್ದಾರೆ. ಸದ್ಯ ಅಭಿಮಾನಿಗಳಿಗೆ ಸೋಷಿಯಲ್ ಮಿಡಿಯಾ ಮೂಲಕ ಹತ್ತಿರವಾಗಿದ್ದಾರೆ. ತಮ್ಮ ಸಿನೆಮಾಗಳ ಪ್ರಮೋಷನ್ ಸೇರಿದಂತೆ ಹಾಟ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಟ್ರೆಡಿಷನಲ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ಈಕೆ ಅಭಿಮಾನಿಗಳನ್ನು ಫಿದಾ ಮಾಡಿದೆ. ಸಮಂತಾ ಟ್ರೆಂಡಿ ವೇರ್‍ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದು, ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಪೊಟೋಗಳಿಗೆ ಲೈಕ್ಸ್, ಕಾಮೆಂಟ್ಸ್ ಗಳ ಸುರಿಮಳೆಯಾಗುತ್ತಿದೆ.

Previous articleಕುಣಿದಾಡುತ್ತಾ ಸ್ಟನ್ನಿಂಗ್ ಲುಕ್ಸ್ ಕೊಟ್ಟ ಪೂನಂ ಬಾಜ್ವಾ, ಬೋಲ್ಡ್ ಸ್ಟಿಲ್ಸ್ ಗೆ ಫಿದಾ…!
Next articleಸೌಂದರ್ಯ ಪ್ರದರ್ಶನಕ್ಕೆ ನೋ ಲಿಮಿಟ್ಸ್ ಎಂದು ಸ್ಟನ್ನಿಂಗ್ ಲುಕ್ಸ್ ಕೊಟ್ಟ ತಾಪ್ಸಿ…!