Film News

15 ಮಿಲಿಯನ್ ಹಿಂಬಾಲಕರನ್ನು ಹೊಂದಿದ ಸಮಂತಾ!

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ಸಮಂತಾ ಅಕ್ಕಿನೇನಿ ರವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 15 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದು, ದಾಖಲೆ ಬರೆದಿದ್ದಾರೆ. ಇನ್ನೂ ಇನ್ಸ್ಟಾಗ್ರಾಂ ನಲ್ಲಿ ಫಾಲೋ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ನಟಿ ಸಮಂತಾ ತಮ್ಮ ಸಿನೆಮಾಗಳ ಕುರಿತು ಹಾಗೂ ವೈಯುಕ್ತಿಕ ಜೀವನದ ಅನೇಕ ವಿಚಾರಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಇನಷ್ಟು ಹತ್ತಿರವಾಗುತ್ತಿರುತ್ತಾರೆ. ಇನ್ನೂ ಸಾಮಾನ್ಯವಾಗಿ ನಟಿ ಸಮಂತಾ ಅನೇಕ ಪೊಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ಆಗಾಗ ತಮ್ಮ ಫಾಲೋವರ್‍ಸ್‌ಗೆ ರಿಪ್ಲೆಗಳನ್ನು ಸಹ ನೀಡುತ್ತಿರುತ್ತಾರೆ. ಜೊತೆಗೆ ಪತಿ ನಾಗಚೈತನ್ಯ ರವರ ಜೊತೆ ತೆಗೆದುಕೊಂಡಂತಹ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ 15 ಮಿಲಿಯನ್ ಫಾಲೋವರ್ಸ್ ಗಳನ್ನು ಗಳಿಸಿಕೊಂಡ ಸಮಂತಾ ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದು, ನಾನು ಈಗಷ್ಟೆ ಚಿತ್ರೀಕರಣ ಮುಗಿಸಿ ಬಂದಿದ್ದು, ಇನ್ಸ್ಟಾಗ್ರಾಂನಲ್ಲಿ 15 ಮಿಲಿಯನ್ ಫಾಲೋವರ್ಸ್ ಆಗಿರುವ ವಿಷಯ ತಿಳಿದು ಸಂತಸಗೊಂಡಿದ್ದೇನೆ. ಇನ್ನೂ ನನ್ನ ಇನ್ಸ್ಟಾ ದಲ್ಲಿರುವ ಎಲ್ಲರೂ ನನ್ನ ಕುಟುಂಬವಿದ್ದಂತೆ. ನನ್ನ ಫಾಲೋವರ್ಸ್ ನೀಡುವ ಪ್ರತಿಯೊಂದು ಲೈಕ್, ಕಾಮೆಂಟ್ ಎಲ್ಲದಕ್ಕೂ ತುಂಬು ಹೃದಯದ ಧನ್ಯವಾದಗಳು. ಇದರಿಂದ ನಾನು ಮತಷ್ಟು ಉತ್ತಮವಾಗಿ ಬೆಳೆಯಲು ಸಹಕಾರಿಯಾಗಿದೆ. ಲವ್ ಯೂ ಆಲ್ ಎಂದು ಪೋಸ್ಟ್ ವೊಂದನ್ನು ಸಹ ಹಂಚಿಕೊಂಡಿದ್ದಾರೆ.

ಅಂದಹಾಗೆ ಇನ್ಸ್ಟಾಗ್ರಾಂ ನಲ್ಲಿ 15 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ದಕ್ಷಿಣ ಭಾರತದ ನಟಿಯರ ಪಟ್ಟಿಯಲ್ಲಿ ಮೊದಲನೆ ಸ್ಥಾನ ಕಾಜಲ್ ಅಗರ್ವಾಲ್ ರವರು ಪಡೆದುಕೊಂಡಿದ್ದು, ಈ ಸಾಲಿನಲ್ಲಿ ನಟಿ ಸಮಂತಾ ಸಹ ಸ್ಥಾನ ಪಡೆದುಕೊಂಡಿದ್ದಾರೆ.

Trending

To Top