Saturday, May 21, 2022
HomeFilm Newsಸಮಂತಾಳ ಫೈಟ್ ಮೋಡ್ ಪೊಟೋ ವೈರಲ್.. ಪಂಚ್ ನೀಡುತ್ತಿರುವ ಸಮ್ಮು….

ಸಮಂತಾಳ ಫೈಟ್ ಮೋಡ್ ಪೊಟೋ ವೈರಲ್.. ಪಂಚ್ ನೀಡುತ್ತಿರುವ ಸಮ್ಮು….

ದೇಶಿಯ ಸಿನೆಮಾರಂಗ ಮಾತ್ರವಲ್ಲದೇ ವಿದೇಶಿ ಸಿನೆಮಾಗಳಲ್ಲೂ ಸಹ ನಟಿಸುತ್ತಿರುವ ಬಹುಬೇಡಿಕೆ ನಟಿ ಸಮಂತಾ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲು ಸಹ ಸಕ್ರಿಯರಾಗಿರುವ ನಟಿ ಆಗಾಗ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುವ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಕ್ಸಿಂಗ್ ಪಂಚ್ ಹೊಡೆಯುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಈ ಪೊಟೋ ಸಖತ್ ವೈರಲ್ ಆಗುತ್ತಿದೆ.

ನಟಿ ಸಮಂತಾ ಫಿಟ್ ನೆಸ್ ಪ್ರಿಯೆ. ಪ್ರತಿನಿತ್ಯ ಜಿಮ್ ಗಾಗಿ ಸ್ವಲ್ಪ ಸಮಯ ಮೀಸಲಿಡುತ್ತಾರೆ. ಫಿಟ್ ನೆಸ್ ಕಾಪಾಡಿಕೊಳ್ಳಲು ಜಿಮ್ ನಲ್ಲಿ ವರ್ಕೌಟ್  ಮಾಡುತ್ತಾರೆ. ತಮ್ಮ ಫೀಟ್ ನೆಸ್ ಬಗ್ಗೆ ಇತ್ತೀಚಿಗಷ್ಟೆ ಹೇಳಿಕೊಂಡಿದ್ದರು. ನಾನು ತುಂಬಾ ಭಾರವನ್ನು ಹೊರಬಲ್ಲೆ, ಆದರೆ ನಾನು ಯಾನಿಮಲ್ ಪ್ರೋಟಿನ್ ಗಳನ್ನು ತೆಗೆದುಕೊಳ್ಳಲ್ಲ. ಬದಲಿಗೆ ತರಕಾರಿ ತಿನ್ನುತ್ತೇನೆ. ಬೆಳಿಗ್ಗೆ ಸಾಮಾನ್ಯ ಪ್ರೋಟಿನ್ ಶೇಕ್ಸ್ ಕುಡಿಯುತ್ತೇನೆ. ಇದರ ಜೊತೆಗೆ ನಿರಂತರವಾಗಿ ನೀರು ಕುಡಿಯುತ್ತೇನೆ. ಇದೇ ನನ್ನ ಫಿಟ್‌ನೆಸ್ ಸೀಕ್ರೇಟ್ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೇ ಜಿಮ್ ಗೆ ತೆರಳುವ ಮುನ್ನಾ ಮೊಟ್ಟೆ ಅಥವಾ ಬಟ್ಟರ್‍ ನಂತಹ ಆಹಾರವನ್ನು ಮಿತವಾಗಿ ಸೇವಿಸುವುದಾಗಿ ತಿಳಿಸಿದ್ದರು.

ಸದ್ಯ ಸಮಂತಾ ರವರ ಹೊಸ ಪೊಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ಸಮಂತಾ ಬಾಕ್ಸಿಂಗ್ ಗರ್ಲ್ ನಂತೆ ಕಾಣಿಸಿಕೊಂಡಿದ್ದಾರೆ.  ಬಿಗಿಯಾದ ಬಟ್ಟೆಯನ್ನು ಧರಿಸಿ ಕೈಗೆ ಬಾಕ್ಸಿಂಗ್ ಗ್ಲೌಜ್ ಧರಿಸಿ ಪಂಚ್ ಹೊಡೆಯುವ ರೀತಿಯ ಪೊಟೋ ಶೇರ್‍ ಮಾಡಿದ್ದಾರೆ. ಎರಡು ಕೈಗಳನ್ನು ಬಿಗಿದು ಪಂಚ್ ಹೊಡೆಯುವ ಸಮಂತಾ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಗಮನಿಸಿದರೇ ಸಮಂತಾ ಹೊಸ ಸಿನೆಮಾ ಪೋಸ್ಟರ್‍ ಇರಬಹುದಾ ಎಂಬ ಅನುಮಾನ ಬಂದರೂ ಬರಬಹುದು ಆದರೆ ಸಮಂತ ಮತಷ್ಟು ಫಿಟ್ ಆಗಿರಲು ಈ ಕ್ರಮವನ್ನು ಅನುಸರಿಸುತ್ತಿದ್ದಾರೆ. ಈ ಪೊಟೋ ಹಂಚಿಕೊಂಡು ಅದರ ಜೊತೆಗೆ ಫೈಟ್ ಮೋಡ್ ಎಂಬ ಕ್ಯಾಪ್ಷನ್ ಸಹ ಹಾಕಿದ್ದಾರೆ. ಸದ್ಯ ಈ ಪೊಟೋ ಸಮ್ಮು ಅಭಿಮಾನಿಗಳನ್ನು ಸೆಳೆಯುತ್ತಿದೆ.

ಇನ್ನೂ ಸಮಂತಾ ಕೆಲವೊಮ್ಮೆ ಜಿಮ್ ಗೆ ಬ್ರೇಕ್ ಕೊಟ್ಟು ಯೋಗಾ ಕ್ಲಾಸ್ ಗಳಿಗೆ ತೆರಳುತ್ತಾರೆ. ಮನಸ್ಸಿನ ಶಾಂತಿಗಾಗಿ ಯೋಗ ಧ್ಯಾನಗಳನ್ನು ಸಹ ಸಮಂತಾ ಮಾಡುತ್ತಾರೆ. ಆ ಸಮಯದಲ್ಲಿ ಪ್ರತ್ಯೇಕ ಆಹಾರವನ್ನು ಸಹ ಸೇವಿಸುತ್ತಾರಂತೆ. ಮೂಲತಃ ಸಮಂತಾ ನಾನ್ ವೆಜ್ ಪ್ರಿಯೆ. ಫಿಟ್ ನೆಸ್ ಗಾಗಿ ನಾನ್ ವೆಜ್ ಸಹ ಬಿಟ್ಟು ವರ್ಕೌಟ್ ಮಾಡುತ್ತಿರುತ್ತಾರೆ ಸಮಂತಾ. ಸದ್ಯ ಸಮಂತಾ ಯಶೋಧ, ಶಾಕುಂತಲಂ ಎಂಬ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

- Advertisement -

You May Like

More