ನೀವು ಒಂಟಿಯಾಗಿ ಸಾಯುತ್ತೀರಾ ಎಂದು ಹೇಳಿದ ಅಭಿಮಾನಿಗೆ ಸಮಂತ ನೀಡಿದ್ದು ಕೂಲ್ ಉತ್ತರ…..

ನಟಿ ಸಮಂತಾ ಇತ್ತೀಚಿಗೆ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದು, ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಬ್ಯುಸಿ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಜೊತೆಗೆ ಗೆಳೆಯರು ಹಾಗೂ ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯುತ್ತಿರುತ್ತಾರೆ. ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ನಟಿ ಸಮಂತಾಗೆ ಕೆಲವೊಂದು ಕಾಮೆಂಟ್ ಗಳು ಟೀಕೆಗಳು ಬಂದಿದ್ದು, ಇದಕ್ಕೆ ಸಮಂತಾರವರೇ ಕೂಲ್ ಆಗಿ ಖಡಕ್ ಆಗಿ ಉತ್ತರವೇ ನೀಡಿದ್ದಾರೆ.

ನಟಿ ಸಮಂತಾ ಇತ್ತೀಚಿಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಶ್ವಾನದ ಜೊತೆಗೆ ಇರುವ ಪೊಟೋ ಒಂದನ್ನು ಸ್ಟೇಟಸ್ ಗೆ ಹಾಕಿದ್ದರು. ಈ ಸ್ಟೇಟಸ್ ನಲ್ಲಿ ಶ್ವಾನದ ಜೊತೆಗೆ ಕಾಲ ಕಳೆಯುತ್ತಿದ್ದರು. ಇದಕ್ಕೆ ಅಭಿಮಾನಿಯೊಬ್ಬ ವ್ಯಂಗವಾಗಿ ಕಾಮೆಂಟ್ ಹಾಕಿದ್ದಾರೆ. ನಾಯಿ ಹಾಗೂ ಬೆಕ್ಕುಗಳ ಜೊತೆಗೆ ಒಂಟಿಯಾಗಿ ಸಾಯುತ್ತೀರಾ ಎಂದು ಕಾಮೆಂಟ್ಸ್ ಹಾಕಿದ್ದ. ಆದರೆ ಇದಕ್ಕೆ ನಟಿ ಸಮಂತಾ ಕೋಪಗೊಳ್ಳದೇ ನಾನು ಹಾಗೆ ಸಾಯಲು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಕೂಲ್ ಆಗಿ ಖಡಕ್ ಆಗಿದೆಯೇ ಉತ್ತರ ನೀಡಿದ್ದು, ಸಮಂತಾ ಉತ್ತರಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಕಳೆದ ವರ್ಷ ನಟಿ ಸಮಂತಾ ಹಾಗೂ ನಾಗಚೈತನ್ಯ ರವರ ಜೊತೆಗೆ ವಿಚ್ಚೇಧನ ಪಡೆದಿದ್ದು, ಈ ಸುದ್ದಿ ಆಗ ದೊಡ್ಡ ಹಾಟ್ ಟಾಪಿಕ್ ಆಗಿತ್ತು. ಪ್ರೀತಿಸಿ ಈ ಜೋಡಿ ಮದುವೆಯಾಗಿತ್ತು. ಆದರೆ ಅವರು ಯಾವ ಕಾರಣಕ್ಕೆ ವಿಚ್ಚೇಧನ ಪಡೆದರು, ಕಾರಣ ಏನು ಎಂಬುದು ಇಲ್ಲಿಯವರೆಗೂ ಯಾರಿಗೂ ಸರಿಯಾಗಿ ತಿಳಿದಿಲ್ಲ. ಇನ್ನೂ ನಾಗಚೈತನ್ಯ ಪಾಡಿಗೆ ಸಿನೆಮಾಗಳಲ್ಲಿ, ಸಮಂತಾ ಸಹ ಅವರದ್ದೇ ಆದ ಸಿನೆಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೆ ಅನೇಕರು ಸಮಂತಾ ರವರೇ ವಿಚ್ಚೇಧನಕ್ಕೆ ಕಾರಣ ಎಂಬೆಲ್ಲಾ ಮಾತುಗಳನ್ನು ಹೇಳುತ್ತಾ ಟೀಕೆಗಳನ್ನು ಮಾಡುತ್ತಿದ್ದರುತ್ತಾರೆ. ಆದರೆ ಇಂತಹ ಯಾವುದೇ ಕಾಮೆಂಟ್ ಗಳಿಗೆ ಸಮಂತಾ ಉತ್ತರವನ್ನು ಸಮಾದಾನವಾಗಿಯೆ ನೀಡುತ್ತಾರೆ.

ಇನ್ನೂ ನಟಿ ಸಮಂತಾ ಇತ್ತಿಚಿಗಷ್ಟೆ ಖುಷಿ ಎಂಬ ಸಿನೆಮಾದ ಶೂಟಿಂಗ್ ಕೆಲಸಗಳನ್ನು ಮುಗಿಸಿಕೊಂಡು ಹೈದರಾಬಾದ್ ಗೆ ಹಿಂದುರಿಗಿದ್ದರು. ಈ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ಸಮಂತಾ ನಟಿಸುತ್ತಿದ್ದಾರೆ. ಖುಷಿ ಸಿನೆಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ನಡುವೆ ಲಿಪ್ ಲಾಕ್ ಸೀನ್ಸ್ ಇದೆ ಎಂಬ ಸುದ್ದಿಯೂ ಸಹ ಹರಿದಾಡುತ್ತಿದೆ. ಸದ್ಯ ಈ ಸಿನೆಮಾದ ಮೊದಲನೇ ಹಂತದ ಶೂಟಿಂಗ್ ಮುಗಿದಿದೆ. ಅಷ್ಟೇ ಅಲ್ಲದೇ ನಟಿ ಸಮಂತಾ ರವರ ಶಾಕುಂತಲಂ, ಯಶೋಧ ಸಿನೆಮಾ ಶೀಘ್ರದಲ್ಲೆ ತೆರೆಗೆ ಬರಲಿದೆ.

Previous articleಕರಣ್ ಜೋಹರ್ ಬರ್ತಡೇ ಪಾರ್ಟಿಯಲ್ಲಿ ಅನನ್ಯಾ ಪಾಂಡೆ ಕಾಣಿಸಿಕೊಂಡ ಲುಕ್ ವೈರಲ್…
Next articleಶ್ರೀನಿಧಿ ಶೆಟ್ಟಿಯವರನ್ನು NTR31 ಸಿನೆಮಾದಲ್ಲಿ ನಟಿಯನ್ನಾಗಿ ಕರೆತನ್ನಿ ಎಂದು ಹೊಸ ಡಿಮ್ಯಾಂಡ್….!