ಸಮಂತಾ ಮಾಡಿದ ಆ ಒಂದು ಕಾಮೆಂಟ್ ಟಾಕ್ ಆಫ್ ದಿ ಇಂಡ್ರಸ್ಟಿ ಆಗಿದೆ…

ಬಹುಬೇಡಿಕೆ ನಟಿ ಸಮಂತಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಆಸ್ಕ್ ಸ್ಯಾಮ್ ಎಂಬ ಕಾನ್ಸೆಪ್ಟ್ ಮೂಲಕ ಅಭಿಮಾನಿಗಳ ಜೊತೆ ಸಂವಾದ ಸಹ ನಡೆಸುತ್ತಾರೆ. ಇನ್ನೂ ಸಮಂತಾ ಇತ್ತೀಚಿಗೆ ಸಮಾಜದ ಕುರಿತಂತೆ ಕಾಮೆಂಟ್ಸ್ ಹಾಕಿದ್ದು, ಈ ಕಾಮೆಂಟ್ಸ್ ಟಾಕ್ ಆಫ್ ದಿ ಇಂಡ್ರಸ್ಟಿಯಾಗಿದೆ.

ಟಾಲಿವುಡ್ ಹಿರೋಯಿನ್ ಸಮಂತಾ ಸಮಾಜದ ಬಗ್ಗೆ ಕಾಂಮೆಂಟ್ಸ್ ಮಾಡಿದ್ದಾರೆ. ಸಮಾಜದಲ್ಲಿ ನಿಜಕ್ಕಿಂತ ಸುಳ್ಳುಗಳನ್ನೇ ಹೆಚ್ಚಾಗಿ ನಂಬುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಇದೀಗ ಈ ಕಾಮೆಂಟ್ಸ್ ಗಳು ಸಖತ್ ವೈರಲ್ ಆಗುತ್ತಿವೆ. ಇನ್ನೂ ತಮ್ಮ ಸೋಷಿಯಲ್ ಮಿಡೀಯಾ ಖಾತೆಯಲ್ಲಿ ಯಾರನ್ನೋ  ಟಾರ್ಗೆಟ್  ಮಾಡಿ ಈ ಕಾಮೆಂಟ್ಸ್ ಗಳನ್ನು ಹಾಕಿದ ಮಾದರಿಯಲ್ಲಿದೆ ಎಂಬ ಭಾವನೆ ನೆಟ್ಟಿಗರಲ್ಲಿ ಮೂಡಿದೆ. ಅಷ್ಟಕ್ಕೂ ಸಮಂತಾ ಮಾಡಿದ ಕಾಮೆಂಟ್ ಏನು ಗೊತ್ತಾ. ನಿಜ ಎಂಬುದು ತುಂಬಾ ಕಡಿಮೆಯಾಗಿ ಹೊರ ಬರುತ್ತದೆ. ಆದರೆ ಸಮಾಜ ಮಾತ್ರ ನಿಜಕ್ಕಿಂತ ಸುಳ್ಳುಗಳನ್ನೆ ಹೆಚ್ಚಾಗಿ ನಂಬುತ್ತದೆ.  ಸುಳ್ಳಿನ ವಿಚಾರಗಳೇ  ಸಮಾಜದಲ್ಲಿ ಹೆಚ್ಚಾಗಿ ಪ್ರಚಾರದಲ್ಲಿರುತ್ತದೆ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಸಮಂತಾರ ಈ ಕಾಮೆಂಟ್ ಗಳನ್ನು ನೋಡಿದ ನೆಟ್ಟಿಗರು ಸಮಂತಾ ಜೀವನದಲ್ಲಿ ಸುಳ್ಳಗಳ ಕಾರಣದಿಂದ ತುಂಬಾ ನೋವು ಪಟ್ಟಿದ್ದಾರೆ. ಆದ್ದರಿಂದಲೇ ಅಂತಹ ಕಾಮೆಂಟ್ಸ್‌ ಗಳನ್ನು ಹಾಕುತ್ತಾರೆ ಎಂದು ಭಾವಿಸಿದ್ದಾರೆ. ಇನ್ನೂ ಸಮಂತಾಳ ಈ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಸಹ ಆಗುತ್ತಿವೆ.

ಇನ್ನೂ ಸಮಂತಾ ಅಭಿನಯದ ಎರಡು ಪ್ಯಾನ್ ಇಂಡಿಯಾ ಸಿನೆಮಾಗಳು ತೆರೆಗೆ ಬರಲು ಸಿದ್ದವಾಗುತ್ತಿವೆ. ಮೊದಲಿಗೆ ಯಶೋಧ ಎಂಬ ಥ್ರಿಲ್ಲರ್‍ ಮೂವಿ ಆ.12 ರಂದು ತೆರೆಗೆ ಬರಲಿದೆ. ಬಳಿಕ ಖ್ಯಾತ ನಿರ್ದೇಶಕ ಗುಣಶೇಖರ್‍ ಸಾರಥ್ಯದಲ್ಲಿ ಮೂಡಿ ಬರಲಿರುವ ಶಾಕುಂತಲಂ ಸಿನೆಮಾ ಸಹ ಶೂಟಿಂಗ್ ಕೆಲಸಗಳನ್ನು ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗಿದೆ. ಅಷ್ಟೇ ಅಲ್ಲದೇ ಹಾಲಿವುಡ್ ರಂಗಕ್ಕೂ ಎಂಟ್ರಿ ಕೊಟ್ಟ ಸಮಂತಾ ಜಾನ್ ಫಿಲಪ್ ನಿರ್ದೇಶನದ ಅರೆಂಜ್ ಮೆಂಟ್ ಆಫ್ ಲವ್ ಎಂಬ ಸಿನೆಮಾದಲ್ಲಿ ನಟಿಸಲಿದ್ದಾರೆ.

Previous articleವಿಕ್ರಾಂತ್ ರೋಣ ಅಪ್ಡೇಟ್ ಬಾರದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಮಾಡಿದ ಕಿಚ್ಚ ಅಭಿಮಾನಿ….
Next articleದಾಖಲೆ ಮೊತ್ತಕ್ಕೆ ಸೇಲ್ ಆದ ಕನ್ನಡ ಮೊದಲ ಸಿನೆಮಾ… ವಿಕ್ರಾಂತ್ ರೋಣ 10 ಕೋಟಿಗೆ ಸೇಲ್