ಈ ಹಿಂದೆ ನಾಗಚೈತನ್ಯ ಜೊತೆಗಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ…!

ದೇಶದ ಸಿನಿರಂಗದಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿರುವ ನಟಿಯರಲ್ಲಿ ಸಮಂತಾ ಸಹ ಒಬ್ಬರಾಗಿದ್ದಾರೆ. ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ಇತ್ತೀಚಿಗಷ್ಟೆ ಕಾಫಿ ವಿತ್ ಕರಣ್ ಎಂಬ ಶೋ ನಲ್ಲಿ ಭಾಗಿಯಾಗಿದ್ದರು. ಈ ಶೋ ನಲ್ಲೇ ಸಮಂತಾ ತಮ್ಮ ವಿಚ್ಚೇದನದ ಬಗ್ಗೆ ಮಾತನಾಡಿದ್ದರು. ಈಗಲೂ ಸಹ ಆಕೆ ನೀಡಿದ ಹೇಳಿಕೆಗಳು ವೈರಲ್ ಆಗುತ್ತಿವೆ. ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುವ ಸಮಂತಾ ಇದೀಗ ಮದುವೆಯಾದ ಸಮಯದಲ್ಲಿ ನಾಗಚೈತನ್ಯ ಜೊತೆಗಿದ್ದ ಮನೆಯನ್ನು ಖರೀದಿಸುವ ಮೂಲಕ ಸುದಿಯಾಗಿದ್ದಾರೆ. ಈ ಮನೆಗೆ ಆಕೆ ದುಬಾರಿ ಬೆಲೆಯನ್ನು ಕೊಟ್ಟು ಖರೀದಿ ಮಾಡಿದ್ದು ದೊಡ್ಡ ಸುದ್ದಿಯಾಗಿದೆ.

ನಟಿ ಸಮಂತಾ ವಿಚ್ಚೇದನದ ಬಳಿಕ ಸಿನೆಮಾ ರಂಗದಲ್ಲಿ ದೊಡ್ಡ ಹವಾ ಸೃಷ್ಟಿ ಮಾಡಿಕೊಂಡಿದ್ದಾರೆ. ವಿಚ್ಚೇದನದ ನೋವಿನಿಂದ ಆಕೆ ಹೊರಬಂದು ಸಾಲು ಸಾಲು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ದಿನೇ ದಿನೇ ಆಕೆಯ ನೇಮ್, ಫೇಮ್ ಹಾಗೂ ಫಾಲೋಯಿಂಗ್ ಸಹ ದೊಡ್ಡದಾಗುತ್ತಿದೆ. ಇನ್ನೂ ಸಮಂತಾರವರ ಬೆಂಬಲಕ್ಕೆ ಅವರ ಅಭಿಮಾನಿಗಳೂ ಸಹ ಸಹಕರಿಸುತ್ತಿದ್ದಾರೆ. ಸದ್ಯ ಸಮಂತಾ ಕೈತುಂಬಾ ಸಿನೆಮಾಗಳಿವೆ. ಯಶೋಧ, ಶಾಕುಂತಲಂ ಎಂಬ ಪ್ಯಾನ್ ಇಂಡಿಯಾ ಸಿನೆಮಾಗಳು ಬಿಡುಗಡೆಗೆ ಸಮೀಪವಿದೆ. ಇದರ ಜೊತೆಗೆ ಬಾಲಿವುಡ್ ನ ಒಂದೆರಡು ಸಿನೆಮಾಗಳಲ್ಲಿ ನಟಿಸಲಿದ್ದಾರೆ.  ಹಾಲಿವುಡ್ ನಲ್ಲೂ ಸಹ ಒಂದು ಸಿನೆಮಾದಲ್ಲಿ ನಟಿಸುತ್ತಿರುವುದಾಗಿ ಸುದ್ದಿಯಿದೆ. ಸಾಲು ಸಾಲು ಸಿನೆಮಾಗಳ ಮೂಲಕ ಆಕೆ ತನ್ನ ಜೀವನವನ್ನು ಬ್ಯುಸಿಯಾಗಿಟ್ಟುಕೊಂಡಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದ ಬಳಿಕ ಒಟ್ಟಾಗಿ ಜೀವನ ನಡೆಸುತ್ತಿದ್ದ ಮನೆಯನ್ನು ಸಮಂತಾ ದುಬಾರಿ ಬೆಲೆಗೆ ಖರೀದಿ ಮಾಡಿದ್ದಾರಂತೆ. ವಿಚ್ಚೇಧನ ಪಡೆದುಕೊಂಡು ಹಳೇಯ ನೆನಪುಗಳನ್ನು ಮರೆಯಬೇಕಿದ್ದ ಸಮಂತಾ ಈ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಿದ್ದಾದರೂ ಏಕೆ ಎಂಬ ಚರ್ಚೆಗಳು ಸಿನಿವಲಯದಲ್ಲಿ ಜೋರಾಗಿಯೇ ಚರ್ಚೆಗಳು ನಡೆಯುತ್ತಿದೆ. ಇನ್ನೂ ಸಮಂತಾಗೆ ಈ ಮನೆ ಎಂದರೇ ತುಂಬಾ ಸೆಂಟಿಮೆಂಟ್ ಅಂತೆ. ಮದುವೆಯಾದ ಬಳಿಕವೂ ಸಮಂತಾ ಅದೇ ಮನೆಯಲ್ಲಿ ವಾಸವಿದ್ದರು. ಇದೀಗ ಅದೇ ಮನೆಯನ್ನು ಸಮಂತಾ ನೂರು ಕೋಟಿ ಕೊಟ್ಟು ಈ ಮನೆ ಖರೀದಿ ಮಾಡಿದ್ದಾರೆ.  ಇನ್ನೂ ಈ ವಿಚಾರವನ್ನು ಹಿರಿಯ ನಟ ಮುರಳಿ ಮೋಹನ್ ರಿವೀಲ್ ಮಾಡಿದ್ದಾರೆ. ಸದ್ಯ ಈ ವಿಚಾರವಂತೂ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ಸಮಂತಾ ಈ ಮನೆಯನ್ನು ಖರೀದಿ ಮಾಡಿದ್ದು, ನೆನಪಿಗಾಗಾ ಅಥವಾ ದ್ವೇಷಕ್ಕಾಗಾ ಎಂಬುದು ಮುಂದೆ ತಿಳಿಯಬಹುದಾಗಿದೆ. ಸದ್ಯ ಮುರಳಿ ಮೋಹನ್ ಸಮಂತಾ ಮನೆ ಖರೀದಿ ಬಗ್ಗೆ ಮಾತನಾಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗೆ ನಾಗಚೈತನ್ಯ ಅಭಿಮಾನಿಗಳು ಟಾಂಗ್ ನೀಡಲು ಪ್ರಾರಂಭ ಮಾಡಿದ್ದಾರೆ. ಈಗಲೂ ಸಹ ಆಗಾಗ ಸಮಂತಾ ಅಭಿಮಾನಿಗಳೂ ಹಾಗೂ ನಾಗ ಚೈತನ್ಯ ಅಭಿಮಾನಿಗಳ ನಡುವೆ ಸೋಷಿಯಲ್ ಮಿಡಿಯಾದಲ್ಲಿ ವಾರ್‍ ನಡೆಯುತ್ತಲೇ ಇರುತ್ತದೆ.

Previous articleರಣವೀರ್ ಬೆತ್ತಲೆಯಾಗಿ ಕಾಣಿಸಿಕೊಳ್ಳಲು ತೆಗೆದುಕೊಂಡ ಸಂಭಾವನೆ ಎಷ್ಟೊ ಗೊತ್ತಾ? ಕೇಳಿದ್ರೆ ಶಾಕ್ ಆಗೋದು ಖಚಿತ…!
Next articleನೈಟ್ ವೇರ್ ನಲ್ಲಿ ನಾಗಿನಿಯಂತೆ ಪಡ್ಡೆಹುಡುಗರನ್ನು ಕಚ್ಚುತ್ತಿರುವ ಮೌನಿ…!