ನಟಿ ಸಮಂತಾ ಹಾಗೂ ವಿಜಯ್ ದೇವರಕೊಂಡ ರವರ ಖುಷಿ ಸಿನೆಮಾದ ಶೂಟಿಂಗ್ ಕೆಲಸಗಳು ಕಾಶ್ಮೀರದಲ್ಲಿ ನಡೆಯುತ್ತಿರುವುದು ತಿಳಿದ ವಿಚಾರವೇ. ಇದೀಗ ಈ ಸಿನೆಮಾ ಶೂಟಿಂಗ್ ವೇಳೆ ನಟ ನಟಿಯಿದ್ದ ಕಾರು ಅಪಘಾತವಾಗಿದೆ. ಈ ವೇಳೆ ನಟ ವಿಜಯ್ ಹಾಗೂ ಸಮಂತಾ ಗಾಯಗೊಂಡಿದ್ದು, ಹೆಚ್ಚಿನ ತೊಂದರೆಯಾಗಿಲ್ಲ ಎಂದು ಹೇಳಲಾಗುತ್ತಿದೆ.
ಬಹುನಿರೀಕ್ಷಿತ ಖುಷಿ ಸಿನೆಮಾದಲ್ಲಿ ವಿಜಯ್ ಹಾಗೂ ಸಮಂತಾ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಕೆಲಸಗಳು ಕೆಲವು ದಿನಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿದೆ. ಸಿನೆಮಾದ ಶೂಟಿಂಗ್ ವೇಳೆ ಈ ಜೋಡಿ ಪಯಣಿಸುತ್ತಿದ್ದ ಕಾರು ನೀರಿಗೆ ಬಿದಿದ್ದೆ. ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದಾರೆ. ಆದರೆ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕಾಶ್ಮೀರದ ಪಹಲ್ ಗಮ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಖುಷಿ ಸಿನೆಮಾ ಆಕ್ಷನ್ ದೃಶ್ಯವನ್ನು ಶೂಟಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಿನೆಮಾದಲ್ಲಿ ಕಾರು ಚೇಸಿಂಗ್ ಮಾಡುತ್ತಿದ್ದ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ. ಮೊದಲೇ ಚಿತ್ರತಂಡ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಗಾಯಗಳು ಆಗಿಲ್ಲ ಎಂದು ಹೇಳಲಾಗುತ್ತಿದೆ. ಇನ್ನೂ ಅಪಘಾತ ಬಳಿಕ ಒಂದೇ ದಿನದಲ್ಲಿ ಪುನಃ ಶೂಟಿಂಗ್ ಕೆಲಸಗಳಲ್ಲಿ ಸಮಂತಾ ಹಾಗೂ ವಿಜಯ್ ದೇವರಕೊಂಡ ಭಾಗಿಯಾಗಿದ್ದಾರಂತೆ. ಸದ್ಯ ಕಾಶ್ಮೀರದ ಶ್ರೀನಗರದ ಪ್ರದೇಶದಲ್ಲಿ ಸಿನೆಮಾ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇನ್ನೂ ಶೂಟಿಂಗ್ ಸಮಯದಲ್ಲಿ ಆದ ಅಪಘಾತದಿಂದ ವಿಜಯ್ ದೇವರಕೊಂಡ ತಮ್ಮ ಬೆನ್ನಿನ ಭಾಗಕ್ಕೆ ಗಾಯಗೊಂಡಿರುವುದಾಗಿ ಹೇಳಿದ್ದಾರೆ. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಈ ಸಿನೆಮಾ ಆಕ್ಷನ್ ಭರಿತ ಲವ್ ಸ್ಟೋರಿ ಸಿನೆಮಾ ಆಗಿದೆ. ಭಿನ್ನವಾದ ಚಿತ್ರಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿದೆ. ಸಿನೆಮಾ ಕೆಲಸಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ 25 ರಂದು ಸಿನೆಮಾ ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನೂ ಈ ಸಿನೆಮಾದಲ್ಲಿ ಸಮಂತಾ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಮಂತಾ ವಿಚ್ಚೇದನ ಬಳಿಕ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ಕಾಣಿಸಿಕೊಂಡು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಶಾಕುಂತಲಂ ಸಿನೆಮಾ ಸಹ ತೆರೆಗೆ ಬರಲಿದೆ. ಆ ಬಳಿಕ ಯಶೋಧ ಹೀಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿ ಸಮಂತಾ ಬ್ಯುಸಿಯಾಗಿದ್ದಾರೆ. ಇನ್ನೂ ನಟ ವಿಜಯ್ ದೇವರಕೊಂಡ ಸಹ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರಲಿರುವ ಖುಷಿ ಸಿನೆಮಾದಲ್ಲಿ ಲಿಪ್ ಲಾಕ್ ಸನ್ನಿವೇಶ ಸಿನೆಮಾದ ಹೈಲೆಟ್ ಎಂದು ಹೇಳಲಾಗುತ್ತಿದೆ.