ಮೊದಲ ಬಾರಿಗೆ ವಿಚ್ಚೇದನದ ಬಗ್ಗೆ ಮಾತನಾಡಿದ ಸ್ಯಾಮ್, ವಿಚ್ಚೇದನದ ಬಗ್ಗೆ ಒಪೆನ್ ಸ್ಟೇಟ್ ಮೆಂಟ್ ಕೊಟ್ರಾ ನಟಿ..!

ಟಾಲಿವುಡ್ ನಲ್ಲಿ ಕೆಲವು ತಿಂಗಳುಗಳ ಹಿಂದೆ ದೊಡ್ಡ ಸುದ್ದಿ ಜೋರಾಗಿ ಹರಿದಾಡಿತ್ತು ಅದು ಸಮಂತಾ ಹಾಗೂ ನಾಗಚೈತನ್ಯ ರವರ ವಿಚ್ಚೇಧನದ ಸುದ್ದಿ. ಸುಮಾರು ವರ್ಷಗಳ ಕಾಲ ಇವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಯನ್ನು ಕ್ಯೂಟ್ ಜೋಡಿ ಎಂತಲೂ ಕರೆಯಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಜೋಡಿ ವಿಚ್ಚೇದನ ಪಡೆದುಕೊಂಡಿತ್ತು. ಆದರೆ ಇಲ್ಲಿಯವರೆಗೂ ಸಮಂತಾ ಆಗಲಿ ಅಥವಾ ನಾಗಚೈತನ್ಯ ಆಗಲಿ ವಿಚ್ಚೇದನದ ಬಗ್ಗೆ ಮಾತನಾಡಿರಲಿಲ್ಲ. ಇದೀಗ ಮೊಲದ ಬಾರಿಗೆ ಸಮಂತಾ ಈ ಕುರಿತು ಮಾತನಾಡಿದ್ದಾರೆ. ಅದು ಕಾರ್ಯಕ್ರಮವೊಂದರಲ್ಲಿ ಓಪೆನ್ ಸ್ಟೇಟ್ ಮೆಂಟ್ಸ್ ಕೊಟ್ಟಿದ್ದಾರೆ.

ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ನಡೆಸಿಕೊಡುವಂತಹ ಕಾಫಿ ವಿತ್ ಕರಣ್ ಎಂಬ ಕಾರ್ಯಕ್ರಮದಲ್ಲಿ ನಟಿ ಸಮಂತಾ ವಿಚ್ಚೇದನಕ್ಕೆ ಕಾರಣಗಳನ್ನು ಹೇಳಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ತುಂಬಾ ವಿವಾದಾತ್ಮಕ ಕಾರ್ಯಕ್ರಮ ಇದಾಗಿದ್ದು, ಈ ಶೋ ನಲ್ಲಿ ಅನೇಕ ಸ್ಟಾರ್‍ ಗಳು ಭಾಗಿಯಾಗುತ್ತಾರೆ. ಅದರಲ್ಲಿ ಸ್ಟಾರ್‍ ಗಳು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಈ ಶೋ ನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‍ ಸಮಂತಾ ಸಹ ಭಾಗಿಯಾಗಿದ್ದಾರೆ. ಶೀಘ್ರದಲ್ಲೇ ಈ ಶೋ ಪ್ರಸಾರವಾಗಲಿದೆ. ಈ ಶೋ ನಲ್ಲಿ ನಟಿ ಸಮಂತಾ ತಮ್ಮ ವಿಚ್ಚೇದನದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರಂತೆ. ಸದ್ಯ ಎಲ್ಲರೂ ಈ ಶೋ ಪ್ರಸಾರ ಯಾವಾಗ ಆಗುತ್ತದೆ ಎಂದು ಕೂತೂಹಲದಿಂದ ಕಾಯುತ್ತಿದ್ದಾರೆ.

ನಟಿ ಸಮಂತಾ ಸಿನೆಮಾಗಳ ಮೇಲಿನ ಆಸಕ್ತಿಯಿಂದಾಗಿ ಏಂ ಮಾಯ ಚೆಸಾವೆ ಎಂಬ ಸಿನೆಮಾದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ನಾಯಕನಾಗಿ ನಟಿಸಿದ್ದ ನಾಗಚೈತನ್ಯರೊಂದಿಗೆ ಪ್ರೆಮಾಂಕುರವಾಗಿ ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿದ್ದರು. ಬಳಿಕ ಕುಟುಂಬಸ್ಥರ ಸಮ್ಮತಿಯೊಂದಿಗೆ ಇಬ್ಬರೂ ಮದುವೆ ಸಹ ಆದರು. ಆದರೆ ಇವರಿಬ್ಬರ ನಡುವೆ ದೂರ ಬೆಳೆದು ವಿಚ್ಚೇದನದವರೆಗೂ ಹೋಗಿತ್ತು. ಅಕ್ಟೋಬರ್‍ 2021 ರಂದು ಈ ಜೋಡಿ ಕಾನೂನಾತ್ಮಕವಾಗಿ ವಿಚ್ಚೇದನ ಪಡೆದುಕೊಂಡರು. ಈ ಸುದ್ದಿಯನ್ನು ಕೇಳಿದ ಅನೇಕರು ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲು ಕಾರಣವಾದರೂ ಏನು ಎಂಬುದರ ಬಗ್ಗೆ ಚರ್ಚೆಗಳು ಶುರುವಾದವು. ಇನ್ನೂ ಸಮಂತಾ ತಪ್ಪಿನಿಂದಲೇ ವಿಚ್ಚೇದನಕ್ಕೆ ಕಾರಣವಾಗಿದೆ ಎಂದು ರೂಮರ್‍ ಗಳು ಕೇಳಿಬಂದವು.

ಸದ್ಯ ಕರಣ್ ಶೋ ನಲ್ಲಿ ವಿಚ್ಚೇಧನ ಪಡೆಯಲು ಕಾರಣ ಯಾರು? ಇಬ್ಬರಲ್ಲಿ ಯಾರು ವಿಚ್ಚೇದನ ಪಡೆಯಲು ಮುಂದಾದರು, ಸಮಂತಾ ಪೋಸ್ಟ್ ಹಾಕುವ ಹಿಂದೆ ಇರುವಂತಹ ನೋವಾದರೂ ಏನು ಎಂಬ ವಿಚಾರಗಳು ಶೀಘ್ರದಲ್ಲೇ ತಿಳಿಯಲಿದೆ ಎಂದು ಹೇಳಲಾಗುತ್ತಿದೆ. ಕಾಫಿ ವಿತ್ ಕರಣ್ ಶೋ ನಲ್ಲಿ ಸಮಂತಾ ವಿಚ್ಚೇಧನದ ಕುರಿತು ಮಾತನಾಡಿದ್ದಾರಂತೆ. ಈ ಎಪಿಸೋಡ್ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ. ಸದ್ಯ ಸಿನಿರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಮುನ್ನುಗ್ಗುತ್ತಿರುವ ಸಮಂತಾ ವಿಚ್ಚೇದನದ ಬಗ್ಗೆ ಮಾತನಾಡಿದ್ದಾರಾ ಅಥವಾ ಇಲ್ಲಾವಾ ಎಂಬುದನ್ನು ಕಾದು ನೋಡಬೇಕಿದೆ.

Previous articleಕನ್ನಡ ಸಿನಿರಂಗದ ಖ್ಯಾತ ನಟ ದಿಗಂತ್ ಗೆ ಅಪಘಾತ, ಆಸ್ಪತ್ರೆಗೆ ದಾಖಲು…!
Next articleಗೋವಾದಲ್ಲಿ ನಟ ದಿಗಂತ್ ಗೆ ಆಗಿದ್ದೇನು? ಆ ಅಪಘಾತ ನಡೆದಿದ್ದು ಆದರೂ ಹೇಗೆ?