ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ….!

ಗ್ಲಾಮರ್‍ ಎಕ್ಸ್ ಪೋಸ್ ಮಾಡದೇ ಸ್ಟಾರ್‍ ನಟಿಯಾಗಿ ಕ್ರೇಜ್ ಸಂಪಾದಿಸಿಕೊಂಡು, ಸಾಲು ಸಾಲು ಸಿನೆಮಾಗಳ ಮೂಲಕ ಎಲ್ಲರ ಮನಗೆದ್ದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಕೊನೆಯದಾಗಿ ಗಾರ್ಗಿ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಬಳಿಕ ಆಕೆಯ ಹೊಸ ಸಿನೆಮಾದ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಸಿಕ್ಕಿಲ್ಲ. ಇನ್ನೂ ಇತ್ತಿಚಿಗೆ ಆಕೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ವಿವಾದ ಸೃಷ್ಟಿಯಾಗವಂತಹ ಹೇಳಿಕೆಗಳನ್ನು ನೀಡಿದ್ದಾರೆ.

ನಟಿ ಸಾಯಿಪಲ್ಲವಿ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ಡ್ಯಾನ್ಸ್ ರಿಯಾಲಿಟಿ ಶೋಗಳ ಬಗ್ಗೆ ಮಾತನಾಡಿದ್ದಾರೆ. ಈ ಡ್ಯಾನ್ಸ್ ರಿಯಾಲಿಟಿ ಶೋಗಳ ಬಗ್ಗೆ ಕೊಂಚ ಕಾರವಾಗಿಯೇ ಸ್ಪಂದಿಸಿದ್ದಾರೆ ಸಾಯಿಪಲ್ಲವಿ. ಇನ್ನೂ ಆಕೆ ನೀಡಿರುವ ಹೇಳಿಕೆಗಳು ಇದೀಗ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಾಯಿಪಲ್ಲವಿ ಟೆಲಿವಿಜನ್ ಚಾನೆಲ್ ಗಳಲ್ಲಿ ಹಣಕ್ಕೆ ಹೆಚ್ಚು ಪ್ರಧಾನ್ಯತೆ ನೀಡುತ್ತಾರೆ. ದೊಡ್ಡ ವ್ಯಕ್ತಿಗಳ ವಾರಸುದಾರರಿಗೆ ಮರ್ಯಾದೆ, ಗೌರವಗಳೂ ಸಹ ದೊರೆಯುತ್ತವೆ. ಆದ್ದರಿಂದ ನನಗೆ ಡ್ಯಾನ್ಸ್ ರಿಯಾಲಿಟಿ ಶೋಗಳ ಮೇಲೆ ನನಗೆ ನಂಬಿಕೆ ಇಲ್ಲ. ಡ್ಯಾನ್ಸ್ ರಿಯಾಲಿಟಿ ಶೋಗಳೆಂದರೇ ನನಗೆ ಅಸಹ್ಯ ಎಂದಿದ್ದಾರೆ. ಇನ್ನೂ ಆಕೆಯ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಡ್ಯಾನ್ಸ್ ಶೋಗಳ ಮೂಲಕವೇ ಬಣ್ಣದ ಲೋಕಕ್ಕೆ ಪರಿಚಯವಾದ ಸಾಯಿ ಪಲ್ಲವಿ ಈ ರೀತಿಯಾಗಿ ಶೋಗಳ ಬಗ್ಗೆ ಕಾಮೆಂಟ್ ಮಾಡಿರುವುದು ಇದೀಗ ಸಂಚಲನ ಸೃಷ್ಟಿ ಮಾಡಿದ.ಎ ತಮಿಳಿನ ವಿಜಯ್ ಟಿ.ವಿ. ಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಸಾಯಿ ಪಲ್ಲವಿ ರನ್ನರ್‍ ಆಗಿದ್ದರು. ಈ ಕಾರಣದಿಂದಲೇ ಸಾಯಿ ಪಲ್ಲವಿ ಅಸಹನೆಯಿಂದ ಈ ಹೇಳಿಕೆಗಳನ್ನು ನೀಡಿರಬಹುದು, ಮೊದಲ ಬಹುಮಾನ ಸಾಯಿ ಪಲ್ಲವಿಗೆ ಬರಬೇಕಿತ್ತೇನೋ ಗಣ್ಯರ ಕಾರಣದಿಂದ ಆಕೆಯನ್ನು ರನ್ನರ್‍ ಅಪ್ ಆಗಿ ಮಾಡಿದರೇನೋ ಎಂಬ ಭಾವನೆ ಸಹ ಸಾಯಿ ಪಲ್ಲವಿಗೆ ಇರಬಹುದು ಎಂದು ಹೇಳಲಾಗುತ್ತಿದೆ. ರಿಯಾಲಿಟಿ ಶೋಗಳಲ್ಲಿ ನಡೆಯುವುದು ಎಲ್ಲಾ ಮೋಸ ಎಂದು ಆಕೆ ಪರೋಕ್ಷವಾಗಿ ಹೇಳಿದ್ದು, ಇದೀಗ ಆಕೆಯ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸಾಯಿಪಲ್ಲವಿಯವರ ಈ ಹೇಳಿಕೆಗಳನ್ನು ಕೆಲವರು ಬೆಂಬಲಿಸುತ್ತಿದ್ದರೇ, ಮತ್ತೆ ಕೆಲವರು ಸಮರ್ಥನೆ ಮಾಡುತ್ತಿದ್ದಾರೆ. ಇನ್ನೂ ಆಕೆ ಅಭಿನಯದ ಲವ್ ಸ್ಟೋರಿ, ಶ್ಯಾಮಸಿಂಗ್ ರಾಯ್ ಸಿನೆಮಾಗಳು ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಆದರೆ ವಿರಾಟಪರ್ವಂ ಸಿನೆಮಾ ಆಕೆಗೆ ನಿರಾಸೆಯನ್ನು ಮೂಡಿಸಿತ್ತು. ಇನ್ನೂ ಗಾರ್ಗಿ ಸಿನೆಮಾ ಅಷ್ಟೊಂದು ಸಕ್ಸಸ್ ಆಗಿ ಪ್ರದರ್ಶನವಾಗಿಲ್ಲ ಎಂತಲೇ ಹೇಳಬಹುದಾಗಿದೆ. ಸದ್ಯ ಸಾಯಿ ಪಲ್ಲವಿ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿಲ್ಲ. ಆಕೆಯ ಡೈ ಹಾರ್ಡ್ ಫ್ಯಾನ್ಸ್ ಮಾತ್ರ ಸಿನೆಮಾಗಳಲ್ಲಿ ಸಾಯಿ ಪಲ್ಲವಿ ನಟಿಸಬೇಕು ಶೀಘ್ರ ಅವರ ಸಿನೆಮಾದ ಅಪ್ಡೇಟ್ ಸಹ ಬೇಕು ಎಂದು ಆಶಯ ಹೊಂದಿದ್ದಾರೆ.

Previous articleಕಡಲ ತೀರದಲ್ಲಿ ಅಲೆಗಳೊಂದಿಗೆ ಆಟವಾಡುತ್ತಾ ಕ್ಯೂಟ್ ಆಗಿ ಸೌಂದರ್ಯ ಪ್ರದರ್ಶನ ಮಾಡಿದ ಬ್ಯೂಟಿ….!
Next articleಪದೇ ಪದೇ ಪತಿಗೆ ಕಿಸ್ ಮಾಡುವ ರೀಲ್ಸ್ ಮಾಡಿ ಟ್ರೋಲ್ ಆದ ನಿವೇದಿತಾ ಗೌಡ….!