Film News

ಭಾರಿ ಮೊತ್ತದ ಸಂಭಾವನೆ ಕೇಳಿದ್ರಂತೆ ನಟಿ ಸಾಯಿ ಪಲ್ಲವಿ!

ಹೈದರಾಬಾದ್: ಮಲಯಾಳಂ ಭಾಷೆಯ ಅಯ್ಯಪ್ಪನುಂ ಕೋಶಿಯಂ ಸಿನೆಮಾದಲ್ಲಿ ಟಾಲಿವುಡ್ ಖ್ಯಾತ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರ ಜೊತೆ ನಟಿಸಲು ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ನಟಿ ಸಾಯಿ ಪಲ್ಲವಿ ಎಂಬ ಮಾಹಿತಿ ಹರಿದಾಡುತ್ತಿದೆ.

ನಟ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಜಂಟಿಯಾಗಿ ಅಭಿನಯಿಸುತ್ತಿರುವ ಅಯ್ಯಪ್ಪನುಂ ಕೋಶಿಯಂ ಸಿನೆಮಾದ ರಿಮೇಕ್ ಫಿಲಂ ಬಗ್ಗೆ ಸಿನಿರಂಗದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಇನ್ನೂ ಚಿತ್ರದಲ್ಲಿ ನಾಯಕಿಯರಾಗಿ ಯಾರು ನಟಿಸಲಿದ್ದಾರೆ ಎಂಬ ಬಗ್ಗೆಯೂ ಕೂಡ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ನಡುವೆ ಬಹುಭಾಷ ನಟಿ ಸಾಯಿ ಪಲ್ಲವಿಯವರನ್ನು ನಾಯಕಿಯಾಗಿ ನಟಿಸಲು ಕೇಳಿದ್ದರು ಎನ್ನಲಾಗಿತ್ತು. ಇದೀಗ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸುವುದು ಬಹುತೇಕ ಖಚಿತವಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ಪವನ್ ಕಲ್ಯಾಣ್ ರವರೊಂದಿಗೆ ನಾಯಕಿಯಾಗಿ ನಟಿ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದು, ರಾಣಾ ದಗ್ಗುಬಾಟಗೆ ನಾಯಕಿಯಾಗಿ ಐಸ್ವರ್ಯಾ ರಾಜೇಶ್ ನಟಿಸಲಿದ್ದಾರೆ. ಸಾಯಿ ಪಲ್ಲವಿ ಮಾತ್ರ ಭಾರಿ ಮೊತ್ತದ ಸಂಭಾವನೆಗೆ ಬೇಡಿಕೆಯಿಟ್ಟಿದ್ದು, ಬೇಡಿಕೆಯನ್ನು ನಿರ್ಮಾಪಕರು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಪವನ್ ಜೊತೆ ನಟಿಸಲು ಕೋಟಿ ಸಂಭಾವನೆಗೆ ಬೇಡಿಕೆಯನ್ನು ಸಾಯಿ ಪಲ್ಲಿವಿ ಇಟ್ಟಿದ್ದಾರೆ. ಇದಕ್ಕೆ ನಿರ್ಮಾಪಕರು ಕೂಡ ಒಪ್ಪಿದ್ದಾರೆ. ಆದರೆ ಚಿತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುವಂತಹ ಸನ್ನಿವೇಶಗಳು ಕಡಿಮೆಯಿದೆ ಎನ್ನಲಾಗುತ್ತಿದೆ.

ಇನ್ನೂ ಚಿತ್ರದ ನಾಯಕ ಪವನ್ ಕಲ್ಯಾಣ್ ರವರಿಗೆ ೫೦ ಕೋಟ ಸಂಭಾವನೆ ನೀಡಲಾಗುತ್ತಿದ್ದು, ಮತ್ತೋರ್ವ ನಟ ರಾಣಾ ದಗ್ಗುಬಾಟಿ ರವರಿಗೆ ೬ಕೋಟಿ ಸಂಭಾವನೆ ನೀಡಲಾಗಿದೆ ಎಂಬ ಮಾತುಗಳು ಪ್ರಸ್ತುತ ಚರ್ಚಾ ವಿಷಯವಾಗಿದೆ. ಅಷ್ಟೆ ಅಲ್ಲದೇ ರಾಣಾ ಸ್ಥಾನದಲ್ಲಿ ಸುದೀಪ್ ನಟಿಸಬೇಕಿತ್ತು, ಆದರೆ ಬೇರೆ ಚಿತ್ರಗಳಲ್ಲಿ ಬ್ಯೂಸಿ ಇರುವ ಕಾರಣ ಸುದೀಪ್ ಬದಲು ರಾಣಾ ರವರು ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

Trending

To Top