ಹೈದರಾಬಾದ್: ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾಗಿ ಮುಂದುವರೆಯುತ್ತಿರುವ ನಟಿ ಸಾಯಿ ಪಲ್ಲವಿ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯಿಸಲಿರುವ ಚಿತ್ರದಲ್ಲಿ ತಂಗಿಯ ಪಾತ್ರ ಪೋಷಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅಂದಹಾಗೆ ನಟ ಅಲ್ಲು ಅರ್ಜುನ್ ಅಭಿನಯಿಸಲಿರುವ ಪುಷ್ಪಾ ಚಿತ್ರದಲ್ಲಿ ಸಾಯಿ ಪಲ್ಲಿವಿ ಅಲ್ಲು ಅರ್ಜುನ್ ತಂಗಿಯಾಗಿ ಅಭಿನಯಿಸಲಿದ್ದಾರೆ. ನಟಿ ಸಾಯಿ ಪಲ್ಲಿವಿಗೆ ತೆಲುಗು ಸೇರಿದಂತೆ ತಮಿಳು, ಮಲಯಾಳಂ ಸಿನಿರಂಗಗಳಿಂದ ಬೇಡಿಕೆ ಹೆಚ್ಚಾಗಿದೆ. ಅನೇಕ ಸಿನೆಮಾಗಳಲ್ಲಿ ಅಭಿನಯಿಸುವಂತೆ ಅವಕಾಶ ಬರುತ್ತಿದ್ದರೂ, ಸಾಯಿ ಪಲ್ಲವಿ ಮಾತ್ರ ಏಕಾಏಕಿ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಚಿತ್ರದ ಕಥೆಯನ್ನು ಕೂಲಂಕುಷವಾಗಿ ಅಳೆದು ತೂಗಿ ಒಪ್ಪಿಕೊಳ್ಳುತ್ತಾರೆ.
ನಟಿ ಸಾಯಿ ಪಲ್ಲವಿ ಈಗಾಗಲೇ ಸುಮಾರು ೩ ಚಿತ್ರಗಳಲ್ಲಿ ನಟಿಸಿದ್ದಾರೆ. ಲವ್ ಸ್ಟೋರಿ, ವಿರಾಟಪರ್ವಂ, ಶ್ಯಾಂ ಸಿಂಗ್ ರಾಯ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ. ಇನ್ನೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯಿಸಲಿರುವ ಅಯ್ಯುಪನಮ್ ಕೋಶಿಯಂ ಎಂಬ ಮಲಯಾಳಂ ಚಿತ್ರದ ರಿಮೇಕ್ ನಲ್ಲಿ ಪವನ್ ಮಡದಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಲಿವುಡ್ ನಿರ್ದೇಶಕ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪುಷ್ಮಾ ಚಿತ್ರದಲ್ಲೂ ಸಹ ಸಾಯಿ ಪಲ್ಲವಿ ನಟಿಸುವ ಅವಕಾಶ ಬಂದಿದ್ದು, ಈ ಚಿತ್ರದಲ್ಲಿ ಅಲ್ಲು ಅರ್ಜುನ್ ರವರ ತಂಗಿಯ ಪಾತ್ರದಲ್ಲಿ ನಟಿಸಬೇಕಿದ್ದು, ಈ ಪಾತ್ರದಲ್ಲಿ ಅಭಿನಯಿಸಲು ಸಾಯಿ ಪಲ್ಲವಿ ಸಹ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಇತ್ತೀಚಿಗಷ್ಟೆ ಸಾಯಿ ಪಲ್ಲವಿ ಹಾಗೂ ನಾಗಚೈತನ್ಯ ಅಭಿನಯದ ಲವ್ ಸ್ಟೋರಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಟೀಸರ್ ನಿಂದಲೇ ಹಿಟ್ ಪಡೆದಿದೆ. ಜೊತೆಗೆ ವಿರಾಟ ಪರ್ವಂ ಚಿತ್ರ ಸಹ ಬಿಡುಗಡೆ ರೆಡಿಯಾಗುತ್ತಿದೆ.
