Film News

ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ!

ಮುಂಬೈ: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಶ್ಮೀಕಾ ಮಂದಣ್ಣ ಕೆಲವೇ ದಿನಗಳಲ್ಲಿ ಬಹುಭಾಷ ನಟಿಯಾಗಿ ಹೊರಹೊಮ್ಮಿದ್ದಾರೆ. ಟಾಲಿವುಡ್, ಕಾಲಿವುಡ್ ನಲ್ಲೂ ಮಿಂಚಿದ ರಶ್ಮೀಕಾ ಇದೀಗ ಬಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದು, ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ.

ನಟಿ ರಶ್ಮೀಕಾ ಕನ್ನಡದಿಂದ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ತೆಲುಗಿನಲ್ಲಿ ಹಿಟ್ ಆದ ಬಳಿಕ ಹೈದರಾಬಾದ್‌ಗೆ ಶಿಫ್ಟ್ ಆಗಿ, ಅಲ್ಲಿಯೇ ಮನೆಯನ್ನು ಸಹ ಖರೀದಿ ಮಾಡಿದರು. ಇದೀಗ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿ ಮುಂಬೈಗೆ ಶೀಫ್ಟ್ ಆಗಲಿದ್ದಾರಂತೆ. ಬಾಲಿವುಡ್‌ನ ಸಿನೆಮಾವೊಂದರಲ್ಲಿ ಅವಕಾಶ ಸಿಕ್ಕ ಕೂಡಲೇ ಮುಂಬೈನಲ್ಲಿ ಮನೆ ಖರೀದಿಸಿದ್ದು, ತಮ್ಮ ಸಿನೆಮಾಗಾಗಿ ಹೈದರಾಬಾದ್ ಹಾಗೂ ಮುಂಬೈ ಗೆ ಓಡಾಡಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ರಶ್ಮಿಕಾ ಸಿದ್ಧಾರ್ಥ್ ಮೆಲ್ಹೋತ್ರ ನಾಯಕನಾಗಿ ನಟಿಸುತ್ತಿರುವ ಮಿಷನ್ ಮಜ್ನು ಸಿನೆಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಮತ್ತೊಂದು ಬಾಲಿವುಡ್ ಸಿನೆಮಾಗೂ ಸಹ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಬಾಲಿವುಡ್‌ನಲ್ಲಿ ಮಿಂಚಲು ಮೊದಲೇ ಯೋಚಿಸಿ ಮನೆಯನ್ನು ಖರೀದಿಸಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ಇನ್ನೂ ನಟಿ ರಶ್ಮಿಕಾ ಇತ್ತೀಚಿಗಷ್ಟೆ ಐಶಾರಾಮಿ ಕಾರೊಂದನ್ನು ಖರೀದಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಶ್ಮಿಕಾ ಟಾಲಿವುಡ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಮತ್ತೊಂದು ತೆಲುಗು ಸಿನೆಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

Trending

To Top