ಕಿರಿಕ್ ಪಾರ್ಟಿ ಸೀಕ್ವೆಲ್ ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಯೊಂದು ಹುಟ್ಟಿದೆ…..

ಸ್ಯಾಂಡಲ್ ವುಡ್ ನಲ್ಲಿ ಸೂಪರ್‍ ಡೂಪರ್‍ ಹಿಟ್ ಹೊಡೆದ ಸಿನೆಮಾಗಳಲ್ಲಿ ಕಿರಿಕ್ ಪಾರ್ಟಿ ಸಹ ಒಂದಾಗಿದೆ. ಕನ್ನಡ ಸಿನಿರಂಗದಲ್ಲಿ ಶಾಶ್ವತವಾದಂತಹ ದಾಖಲೆ ಮಾಡಿದ ಸಿನೆಮಾಗಳ ಪಟ್ಟಿಗೆ ಕಿರಿಕ್ ಪಾರ್ಟಿ ಸಹ ಸೇರುತ್ತದೆ. ಅಷ್ಟೇ ಅಲ್ಲದೇ ಈ ಸಿನೆಮಾದಲ್ಲಿನ ಅದೆಷ್ಟೋ ಕಲಾವಿದರು, ತಂತ್ರಜ್ಞರು ಪರಿಚಯವಾಗಿದ್ದು, ಸಿನೆಮಾ ಬಳಿಕ ದೊಡ್ಡ ದೊಡ್ಡ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಕಿರಕ್ ಪಾರ್ಟಿಯ ಸೀಕ್ಷೆಲ್ ಬಗ್ಗೆ ಚರ್ಚೆಗಳು ಶುರುವಾಗಿದೆ.

ಕಿರಿಕ್ ಪಾರ್ಟಿ ಸಿನೆಮಾ ತೆರೆಕಂಡು ಸುಮಾರು ಐದು ವರ್ಷಗಳು ಕಳೆದಿದೆ. ಇದೀಗ ಕಿರಿಕ್ ಪಾರ್ಟಿ-2 ಸಿನೆಮಾ ಶೀಘ್ರದಲ್ಲೇ ಸೆಟ್ಟೇರಲಿದೆ. ಈ ಸಿನೆಮಾದಲ್ಲಿ ಯಾವ ಯಾವ ನಟರು, ನಟಿಯರು ಹಾಗೂ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎಂಬೆಲ್ಲಾ ಪ್ರಶ್ನೆಗಳು ಸಹ ಸಹಜವಾಗಿಯೇ ಹುಟ್ಟಿಕೊಂಡಿವೆ. ಕಿರಿಕ್ ಪಾರ್ಟಿ ಭಾಗ ಒಂದರಲ್ಲಿ ನಟಿಸಿದ ಕಲಾವಿದರೇ ಮುಂದುವರೆಯುತ್ತಾರಾ ಅಥವಾ ಹೊಸ ಕಲಾವಿದರ ಆಯ್ಕೆ ನಡೆಯುತ್ತದಾ ಎಂಬೆಲ್ಲಾ ವಿಚಾರಗಳಿಗೆ ಸದ್ಯ ಯಾವುದೇ ಮಾಹಿತಿ ಲಭ್ಯವಿಲ್ಲ. ಕಿರಿಕ್ ಪಾರ್ಟಿ ಸಿನೆಮಾದಲ್ಲಿ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗ್ಡೆ ಕಾಣಸಿಕೊಂಡಿದ್ದರು. ಪಾರ್ಟ್-2 ನಲ್ಲೂ ಸಹ ರಶ್ಮಿಕಾ ಮಂದಣ್ಣ ಬರುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ನಟಿ ರಶ್ಮಿಕಾ ಮಂದಣ್ಣ ರವರಿಗೆ ಸಿನಿರಂಗದಲ್ಲಿ ದೊಡ್ಡ ಲೈಫ್ ಕೊಟ್ಟದ್ದೆ ಕಿರಿಕ್ ಪಾರ್ಟಿ. ಈ ಸಿನೆಮಾದ ಬಳಿಕವೇ ನಟಿ ರಶ್ಮಿಕಾ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದ್ದು, ಜೊತೆಗೆ ಸ್ಟಾರ್‍ ನಟಿಯಾಗಿದ್ದು. ಬಳಿಕ ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲೂ ಸಹ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ನ್ಯಾಷನಲ್ ಕ್ರಷ್ ಎಂದೇ ರಶ್ಮಿಕಾರವರನ್ನು ಇದೀಗ ಕರೆಯಲಾಗುತ್ತಿದೆ. ಆದರೆ ಕಿರಿಕ್ ಪಾರ್ಟಿ-2 ಸಿನೆಮಾದಲ್ಲಿ ಈಕೆ ಕಾಣಿಸಿಕೊಳ್ಳುವುದು ಬಹುತೇಕ ಸಂದೇಹ ಎಂದೇ ಹೇಳಲಾಗುತ್ತಿದೆ. ಇದೀಗ ನಟಿ ರಶ್ಮಿಕಾ ಕನ್ನಡದ ಯಾವುದೇ ಸಿನೆಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದ ಕಾರಣ ಕಿರಿಕ್ ಪಾರ್ಟಿ-2 ಸಿನೆಮಾದಲ್ಲಿ ನಟಿ ರಶ್ಮಿಕಾ ಬಣ್ಣ ಹಚ್ಚೊದು ಡೌಟ್ ಎಂದು ಹೇಳಲಾಗುತ್ತಿದೆ. ಆದರೆ ರಶ್ಮಿಕಾ ರವರಿಗೆ ಸಿನಿ ಜೀವನ ಕೊಟ್ಟ ಸಿನೆಮಾ ಇದಾಗಿದ್ದರಿಂದ ಆಕೆ ಈ ಸಿನೆಮಾದಲ್ಲಿ ನಟಿಸಬಹುದು ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಶೀಘ್ರದಲ್ಲೇ ಈ ಕುರಿತು ಸ್ಪಷ್ಟ ಮಾಹಿತಿ ದೊರೆಯಬಹುದಾಗಿದೆ.

ಇನ್ನೂ ಕಿರಿಕ್ ಪಾರ್ಟಿ ಸಿನೆಮಾದ ನಿರ್ದೇಶಕ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ-2 ಸಿನೆಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರಂತೆ. ಈ ಸಿನೆಮಾದ ಕಥೆಗಾಗಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದಾರಂತೆ. ಅಂದುಕೊಂಡಂತೆ ಎಲ್ಲಾ ಕೆಲಸಗಳು ನಡೆದರೇ ಮುಂದಿನ ವರ್ಷ ಕಿರಿಕ್ ಪಾರ್ಟಿ-2 ಸಿನೆಮಾ ಶೂಟಿಂಗ್ ಪ್ರಾರಂಭವಾಗಬಹುದು ಎಂದು ಹೇಳಲಾಗುತ್ತಿದೆ.

Previous articleನಟಿ ಕಾಜಲ್ ಅಗರ್ವಾಲ್ ತಾಯಿಯಾದರೂ ಸೌಂದರ್ಯ ಮಾತ್ರ ಕಡಿಮೆಯಾಗಿಲ್ಲ….
Next articleಮೇಜರ್ ಸಿನೆಮಾವನ್ನು ಮನಸಾರೆ ಹೊಗಳಿದ ಅಲ್ಲು ಅರ್ಜುನ್…..!