Film News

ಬಾಲಿವುಡ್ ಗೆ ಎಂಟ್ರಿ ಕೊಟ್ಟ ರಶ್ಮೀಕಾ ಮಂದಣ್ಣ

ಮುಂಬೈ: ಕನ್ನಡ ಸಿನೆಮಾ ಮೂಲಕ ಇಡೀ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿರುವ ನಟಿ ರಶ್ಮೀಕಾ ಮಂದಣ್ಣ ಇದೀಗ ಬಾಲಿವುಡ್ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಸಿದ್ದಾರ್ಥ್ ಮೆಲ್ಹೋತ್ರಾ ಅಭಿನಯದ ಮಿಷನ್ ಮಜ್ನು ಎಂಬ ಚಿತ್ರದಲ್ಲಿ ನಾಯಕಿಯಾಗಿ ರಶ್ಮೀಕಾ ಮಂದಣ್ಣ ಬಣ್ಣ ಹಚ್ಚಲಿದ್ದಾರೆ. ಇನ್ನೂ ಈ ಕುರಿತು ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಖಚಿತ ಪಡಿಸಿದ್ದು, ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಭಾರತದ ರಾ ಸಂಸ್ಥೆಯು ಪಾಕಿಸ್ಥಾನದಲ್ಲಿ ನಡೆಸಿದ ಪವರ್ ಪುಲ್ ಕಾರ್ಯಾಚರಣೆಯ ನೈಜ ಘಟನೆಗಳನ್ನು ಆಧರಿಸಿದ ಕಥೆಯನ್ನು ಒಳಗೊಂಡಿದೆ ಈ ಮಿಷನ್ ಮಜ್ನು ಚಿತ್ರ.

ಕನ್ನಡ ಹಿಟ್ ಮೂವಿ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮೀಕಾ, ನಂತರ ಬಹುಭಾಷ ನಟಿಯಾಗಿ ತಮ್ಮ ಅಭಿನಯವನ್ನು ವಿಸ್ತರಿಸಿಕೊಂಡಿದ್ದಾರೆ. ಟಾಲಿವುಡ್, ಕಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ನಟಿ ಇದೀಗ ಬಾಲಿವುಡ್ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ ಕೊಡಗಿನ ಬೆಡಗಿ ರಶ್ಮೀಕಾ. ಅಷ್ಟೇ ಅಲ್ಲದೇ ಹಿಂದಿಯ ಆಲ್ಬಂ ಸಾಂಗ್ ಒಂದರಲ್ಲಿ ಸಹ ರಶ್ಮೀಕಾ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿಯ ಖ್ಯಾತ ರ್‍ಯಾಂಪರ್ ಬಾದ್ ಷಾ ಹಾಡಿನಲ್ಲಿ ರಶ್ಮೀಕಾ ಹೆಜ್ಜೆ ಹಾಕಲಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಚಂಡೀಗಢದಲ್ಲಿ ನಡೆಯುತ್ತಿದೆ

ಇನ್ನೂ ಯಾವುದೇ ಆರ್ಭಟವಿಲ್ಲದೇ ರಶ್ಮೀಕಾ ಈ ಸುದ್ದಿಯನ್ನು ನೀಡಿದ್ದು, ಮಿಷನ್ ಮಜ್ನು ಚಿತ್ರದಲ್ಲಿ ನಾನು ನಟಿಸುತ್ತಿರುವುದು ಖುಷಿಯ ವಿಚಾರ. ಇಲ್ಲಿಂದ ಬಾಲಿವುಡ್ ನಲ್ಲಿ ಹೊಸ ಜರ್ನಿ ಶುರುವಾಗಿದೆ ಎಂದು ಟ್ವೀಟ್ ಮಾಡಿದ್ದು, ಇದಕ್ಕೆ ರಶ್ಮೀಕಾ ಅಭಿಮಾನಿಗಳು ಹಾಗೂ ಸ್ನೇಹಿತರು ಆಲ್ ದಿ ಬೆಸ್ಟ್ ಕೋರಿದ್ದಾರೆ.

Trending

To Top